ವಿಜಯ ದರ್ಪಣ ನ್ಯೂಸ್…….
ಪ್ರಣವಾಂಜಲಿ ಅಕಾಡೆಮಿಯಿಂದ ‘ನವರಾತ್ರಿ ನೃತ್ಯೋತ್ಸವ – 2026’

ಬೆಂಗಳೂರು, ಅಕ್ಟೋಬರ್ 11: ಭಾರತೀಯ ಶಾಸ್ತ್ರೀಯ ನೃತ್ಯಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿದುಷಿ ಪವಿತ್ರ ಪ್ರಶಾಂತ್ ಅವರ ನೇತೃತ್ವದ ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9:30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ನವರಾತ್ರಿ ನೃತ್ಯೋತ್ಸವ – 2026’ ಆಯೋಜಿಸಲಾಗಿದೆ.
ಪ್ರತಿಭಾ ನಾಟ್ಯಾಲಯದ ಸಂಸ್ಥಾಪಕಿ ವಿದುಷಿ ಶ್ರೀಮತಿ ಪ್ರಭಾ ಕಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಉತ್ಸವದಲ್ಲಿ ಪ್ರತಿಭಾ ನಾಟ್ಯಾಲಯದ ವಿದುಷಿ ಪ್ರಭಾ ಕಿಣಿ, ಉಪಾಸನಾ ನೃತ್ಯಾಲಯದ ವಿದುಷಿ ರಮ್ಯಾ ಭಾರದ್ವಾಜ್, ಶಿವಾಲಯ ಸ್ಕೂಲ್ ಆಫ್ ಡ್ಯಾನ್ಸ್ನ ವಿದುಷಿ ಪ್ರೀಜಾ ಮಹೇಂದ್ರನ್, ಆರೋಹಣ ನೃತ್ಯಾಲಯದ ವಿದುಷಿ ಭಾರ್ಗವಿ ಎಂ. ಪ್ರಕಾಶ್, ನೃತ್ಯತರಂಗದ ವಿದುಷಿ ವಂದನಾ ಎನ್. ಹಾಗೂ ಶಿವರಂಜನಿ ಕಲಾಲಯದ ವಿದುಷಿ ಶಿವರಂಜನಿ ಹರೀಶ್ ಅವರ ಶಿಷ್ಯವೃಂದದಿಂದ ನೃತ್ಯ ಪ್ರದರ್ಶನಗಳು ನಡೆಯಲಿವೆ.

ನೃತ್ಯಕಲೆಗೆ ಗುರುಗಳು ನೀಡುತ್ತಿರುವ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಎಲ್ಲಾ ಗುರುಗಳಿಗೆ ‘ಬೆಸ್ಟ್ ಆರ್ಟಿಸ್ಟ್ ಅವಾರ್ಡ್’ (ಅತ್ಯುತ್ತಮ ಕಲಾವಿದ ಪ್ರಶಸ್ತಿ) ಪ್ರದಾನ ಮಾಡಲಾಗುತ್ತದೆ.
ನವರಾತ್ರಿಯ ಶುಭ ಸಂದರ್ಭದಲ್ಲಿ ನಡೆಯುವ ಈ ಉತ್ಸವವು ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಆಶಯ ಹೊಂದಿದೆ.








