ಬೆಂಗಳೂರು : ಶ್ರೀ ಗಂಗಮ್ಮ ಗ್ರಾಮ ದೇವತಾ ಸೇವಾ ಸಮಿತಿಯ ವತಿಯಿಂದ ಜಯನಗರ 4ನೇ ಟಿ ಬಡಾವಣೆಯ 11ನೇ ಮುಖ್ಯರಸ್ತೆಯ ಶ್ರೀ ಗಂಗಮ್ಮ ದೇವಿ ಅಮ್ಮನವರ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21ರ ವರೆಗೆ ಪ್ರತಿದಿನ ವಿಶೇಷ ಪೂಜೆ, ಅಭಿಷೇಕ, ವಿವಿಧ ಅಲಂಕಾರ ಹಾಗೂ ಪ್ರತಿದಿನ ಸಂಜೆ 6-30 ರಿಂದ 8-00ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರಗಳು :
ಅಕ್ಟೋಬರ್ 11-ತತ್ವಂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಮತ್ತು ಕುಚಿಪುಡಿ ನೃತ್ಯ”,
ಅಕ್ಟೋಬರ್ 12-ಪಾಂಡುರಂಗ ಸ್ವಾಮಿ ಭಜನಾ ಮಂಡಳಿಯ ಶ್ರೀಮತಿ ಸಾವಿತ್ರಿ ಮತ್ತು ಸಂಗಡಿಗರಿಂದ “ದಾಸವಾಣಿ”,
ಅಕ್ಟೋಬರ್ 13-ವಿದುಷಿ ವೈಶಾಲಿ ಆಚಾರ್ಯ ಅವರ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ”,
ಅಕ್ಟೋಬರ್ 14-ಶ್ರೀವಿದ್ಯಾ ನಾಗಾನಂದ ಮತ್ತು ಸಂಗಡಿಗರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ”,
ಅಕ್ಟೋಬರ್ 15-ರಾಷ್ಟ್ರೋತ್ಥಾನ ಸಂಗೀತ ಮತ್ತು ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ “ಭರತನಾಟ್ಯ”,
ಅಕ್ಟೋಬರ್ 16-ಕು|| ಸಾಯಿ ಜ್ಯೋತಿ ಮತ್ತು ವಿದ್ಯಾರ್ಥಿಗಳಿಂದ “ನೃತ್ಯ ಪ್ರದರ್ಶನ”,
ಅಕ್ಟೋಬರ್ 17-ಶ್ರೀ ರಾಹುಲ್ ರವೀಂದ್ರನ್ ಮತ್ತು ಸಂಗಡಿಗರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ”,
ಅಕ್ಟೋಬರ್ 18-ವಿದುಷಿ ಸ್ವಾತಿ ಸಂಸ್ಕೃತಿ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ನ ವಿದ್ಯಾರ್ಥಿಗಳಿಂದ “ನೃತ್ಯ ಪ್ರದರ್ಶನ”,
ಅಕ್ಟೋಬರ್ 19-ವಿದುಷಿ ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಸಂಗಡಿಗರಿಂದ “ಭಕ್ತಿ ಗೀತೆಗಳ ಗಾಯನ”,
ಅಕ್ಟೋಬರ್ 20-ಶ್ರೀಮತಿ ಲಲಿತಾ ಗೋಪಾಲಸ್ವಾಮಿ ಮತ್ತು ಸಂಗಡಿಗರಿಂದ “ದೇವಿ ನಾಮ ಸಂಕೀರ್ತನೆ”
ಅಕ್ಟೋಬರ್ 21ರಂದು ಶ್ರೀ ಗಂಗಮ್ಮ ದೇವಿ ಉತ್ಸವ ಮೂರ್ತಿಯ ಪ್ರಾಕಾರೋತ್ಸವ ಕಾರ್ಯಕ್ರಮಗಳು ಜರುಗಲಿವೆ.