ವಿಜಯ ದರ್ಪಣ ನ್ಯೂಸ್…..
ಕೈವಾರ ತಾತಯ್ಯನವರ ಆದರ್ಶಗಳನ್ನು ಪಾಲಿಸಬೇಕು : ಆನಂದ ಸ್ವಾಮಿಗಳು

ವಿಜಯಪುರ ದೇವನಹಳ್ಳಿ ತಾಲ್ಲೂಕು: ಹದಿನೇಳು ಹದಿನೆಂಟನೆಯ ಶತಮಾನದ ಪ್ರಸಿದ್ಧ ದ್ವಿಭಾಷಾ ತತ್ವಪದಕಾರರಾದ ಕೈವಾರ ತಾತಯ್ಯನವರ (ಯೋಗಿ ನಾರೇಯಣಪ್ಪ) ಕೀರ್ತನೆಗಳು ಮತ್ತು ವಚನಗಳು ಶ್ರೇಷ್ಠ ಜೀವನ ದರ್ಶನವನ್ನು ಒಳಗೊಂಡಿವೆ. ಭಕ್ತಿ, ಅನುಭಾವ, ಯೋಗರಹಸ್ಯ ಮತ್ತು ಸಾಮಾಜಿಕ ವಿಮರ್ಶೆ ಇವರ ಸಾಹಿತ್ಯದ ಜೀವಾಳ. ಹುಟ್ಟಿನ ಆಧಾರದ ಮೇಲೆ ಮಾಡುವ ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸುವ ಅವರು, ಬ್ರಾಹ್ಮಣ-ಶೂದ್ರ ಎಂಬ ಭೇದವನ್ನು ನಿರಾಕರಿಸುತ್ತಾರೆ. ಕಪಟ ಕುಲಗುರುಗಳನ್ನು ಖಂಡಿಸಿ, ಸದ್ಗುರುವಿನ ಅಗತ್ಯವನ್ನು ಸಾರಿದರು.. ಹೆಣ್ಣು, ಹೊನ್ನು, ಮಣ್ಣು ಮತ್ತು ಪಂಚೇಂದ್ರಿಯಗಳ ವ್ಯಾಮೋಹವನ್ನು ತೊರೆದು ಅಂತರಂಗ ಶುದ್ಧಿಯಿಂದ ಅಮರನಾರಾಯಣನನ್ನು ಒಲಿಸಿಕೊಳ್ಳುವ ಮಾರ್ಗವನ್ನು ಬೋಧಿಸುತ್ತಾರೆಂದು ಆನಂದ ಸ್ವಾಮಿಗಳು ತಿಳಿಸಿದರು.
ವಿಜಯಪುರ ಪಟ್ಟಣದ ಶ್ರೀ ರಂಗ ಕ್ಷೇತ್ರ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶ್ರೀ ರಂಗನಾಥ ಸ್ವಾಮಿಯ ರವರ ಸನ್ನಿಧಿಯಲ್ಲಿ ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗ ವತಿಯಿಂದ ಎಂಟನೇ ಕಾರ್ಯಕ್ರಮ ಶ್ರೀ ಕೃಷ್ಣ ಯತಿಂದ್ರ ಸತ್ಸಂಗ ಸೇವ ಟ್ರಸ್ಟ್ ವತಿಯಿಂದ 34ನೇ ಗುರುಪಾದುಕ ಪೂಜೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀ ಕೈವಾರ ಯತೀಂದ್ರ ನಾರೇಯಣ ತಾತಯ್ಯನವರ ಧರ್ಮ ಪ್ರಚಾರಕರಾದ ಆನಂದ ಸ್ವಾಮಿಗಳು ಮಾತನಾಡುತ್ತಾ ರಾಮ ರಕ್ಷಾ ಸ್ತೋತ್ರವು ಅತ್ಯಂತ ಶಕ್ತಿಯುತವಾದ ಮತ್ತು ಅದ್ಭುತವಾದ ಪ್ರಾರ್ಥನೆಯಾಗಿದೆ. ಬುಧ ಕೌಶಿಕ ಋಷಿಯಿಂದ ರಚಿಸಲ್ಪಟ್ಟ ಶ್ರೀ ರಾಮ ಭವತಾರಕ ಮಂತ್ರ ಪಠಣವು ಭಗವಾನ್ ಶ್ರೀರಾಮನನ್ನು ಒಲಿಸಿಕೊಳ್ಳುವ ಸ್ತುತಿಗೀತೆಯಾಗಿದೆ. ಇದರಲ್ಲಿ ಶ್ರೀರಾಮನ ಅನೇಕ ನಾಮಗಳು ಸ್ತುತಿಸಲ್ಪಟ್ಟಿವೆ. ರಾಮ ರಕ್ಷಾ ಸ್ತೋತ್ರವು ಸ್ವತಃ ರಕ್ಷಣಾತ್ಮಕ ಕವಚವಾಗಿದೆ ಮತ್ತು ಇದನ್ನು ನಿಯಮಿತವಾಗಿ ಪಠಿಸುವುದರಿಂದ ಒಬ್ಬರು ಅಪಾರ ಪ್ರಯೋಜನಗಳನ್ನು ಮತ್ತು ಮಂಗಳಕರ ಫಲಿತಾಂಶಗಳನ್ನು ಶೀಘ್ರದಲ್ಲೇ ಪಡೆಯುತ್ತಾರೆಂದು ತಿಳಿಸುತ್ತಾ ಬದುಕಿನ ಸತ್ಯಗಳನ್ನು ಕೊಂಡುಕೊಂಡು, ಸಂತರು ನೀಡಿರುವ ಉಪದೇಶಗಳಲ್ಲಿ, ಬೋಧನೆಗಳಲ್ಲಿ ನಂಬಿಕೆ ಇಡಬೇಕು. ಆ ಬೋಧನೆಯ ಮನನದಿಂದ ಮನಸ್ಸು ನಿರ್ಮಲವಾಗುತ್ತದೆ. ಪರಮಾತ್ಮನು ಕುಳಿತುಕೊಳ್ಳುವ ಸ್ಥಳ ಮನಸ್ಸು. ನಿರಂತರವಾಗಿ ಪರಮಾತ್ಮನ ನಾಮಜಪದ ಪಠಿಣಯಿಂದ ಮಾನಸಿಕ ದುರಿತಗಳು ದುರ್ಗುಣಗಳು ನಾಶವಾಗುತ್ತವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷರಾದ ಮಂಡಿಬೆಲೆ ರಾಜಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಜೀವನದಲ್ಲಿ ಕೈವಾರ ತಾತಯ್ಯನವರ ಆದರ್ಶಗಳನ್ನು ಪಾಲಿಸಬೇಕೆಂದು ತಿಳಿಸುತ್ತಾ ಸದ್ಭಕ್ತರಿಗೆ ಎಚ್ಚರಿಕೆ ಸಂದೇಶ ನೀಡುತ್ತಾ ಮೊಬೈಲ್ ಸಾಧನವನ್ನು ಮಕ್ಕಳ ಕೈಯಲ್ಲಿ ಕೊಡಬೇಡಿ. ಮೊಬೈಲ್ ಸಾಧನದಿಂದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುತ್ತಾರೆ ಎಂದು ತಿಳಿಸಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿ ಯಂತೆ ಮನೆಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಕೈವಾರ ನಾರಾಯೇಣ ತಾತಯ್ಯನವರ ಆದರ್ಶಗಳನ್ನು ತಿಳಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವುದರ ಮೂಲಕ ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನಾಗಿ ರೂಪುಗೊಳ್ಳಲು ತಾಯಂದರು ಪ್ರಮುಖ ಪಾತ್ರ ವಹಿಸಬೇಕೆಂದು ಮನವಿ ಮಾಡಿದರು.

ಮಂಡಿಬೆಲೆ ಗ್ರಾಮದ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಮುಂದಿನ ಸಲ ಸತ್ಸಂಗ ಗುರುಪಾದುಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಅದಕ್ಕೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಶ್ರೀ ಕೃಷ್ಣ ಯತಿಂದ್ರ ಸತ್ಸಂಗ ಸೇವ ಟ್ರಸ್ಟ್ ನ ವೆಂಕಟೇಶ್ ಅವರಿಗೆ ಮಂಡಿಬೆಲೆ ಗ್ರಾಮದ ಪರವಾಗಿ ಮಂಡಿಬೆಲೆ ರಾಜಣ್ಣ ವಿನಮ್ರವಾಗಿ ವಿನಂತಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರ ಸಂಘದ ಜಿಲ್ಲಾ ನಿರ್ದೇಶಕ ಮುನಿವೆಂಕಟರಮಣ ಅವರು ಮಾತನಾಡುತ್ತಾ ತಾತಯ್ಯನವರು ವಿಜಯಪುರಕ್ಕೆ ಬಂದು ಐದು ಗೀತೆಗಳು ರಚಿಸಿ ನಂತರ ದೇವನಹಳ್ಳಿ ಚಿಕ್ಕಬಳ್ಳಾಪುರ ಅನೇಕ ಸ್ಥಳದಲ್ಲಿ ಸಂಚರಿಸಿ ಜನರಲ್ಲಿ ಭಕ್ತಿ ಭಾವಗಳನ್ನು ಮೂಡಿಸಿದರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಮುನಿವೆಂಕಟರಮಣ, ಉಪಾಧ್ಯಕ್ಷ ಜೆಆರ್ ಮುನಿವೀರಣ್ಣ, ದೇವನಹಳ್ಳಿ ತಾಲ್ಲೂಕು ಕಾರ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮಧು, ಕಾರ್ಯಕ್ರಮದ ಭಕ್ತಿ ಸೇವಕರಾದ ಶ್ರೀಮತಿ ಲಕ್ಷ್ಮೀದೇವಮ್ಮ ಮತ್ತು ಶ್ರೀ ಗೋಪಾಲಪ್ಪ , ಕೈವಾರ ಶ್ರೀ ಕ್ಷೇತ್ರದ ಆನಂದ ಸ್ವಾಮಿ ರವರನ್ನು ಸನ್ಮಾನಿಸಲಾಯಿತು
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿಎಂ ನಾಯ್ಡು ಮತ್ತು ಮುನಿರಾಜುರವರ ವಾದ್ಯದೊಂದಿಗೆ ಟಿ ಮಹಾತ್ಮಾಂಜನೇಯ, ನರಸಿಂಹಪ್ಪ, ಮುನಿರಾಜು, ರಾಮಪ್ಪ, ಶ್ರೀಮತಿ ನಾಗರತ್ನ ರವರು ಭಕ್ತಿ ಗೀತೆಗಳು ಸುಶ್ರಾವ್ಯವಾಗಿ ಹಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಕೇಶವಪ್ಪ, ದೇವನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ ಶ್ರೀನಿವಾಸ್ , ತಿಗಳ ವೈಭವ ಪತ್ರಿಕೆ ಸಂಪಾದಕ ಜೆಆರ್ ಮುನಿವೀರಣ್ಣ ಪ್ರಧಾನ ಕಾರ್ಯದರ್ಶಿ ಎ. ಮಧು, ರಾಮದಾಸ್ ವಿ ಎನ್ ವೆಂಕಟೇಶ್ ಅನಿತಾ ಮತ್ತು ಉಭಯ ಸೇವಾ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಶ್ರೀಮತಿ ಲಕ್ಷ್ಮಿದೇವಮ್ಮ ಮತ್ತು ಶ್ರೀ ಗೋಪಾಲಪ್ಪ ಹಾಗೂ ಕುಟುಂಬದವರು ನೆರವೇರಿಸಿದರು.
ದಿವ್ಯ ಸಾನಿಧ್ಯವನ್ನು ರಮೇಶ್ ಸ್ವಾಮಿಗಳು, ರಘುನಾಥ ಸ್ವಾಮಿಗಳು ವಹಿಸಿದರು.










