--Ads--

ರೈತರ ದಸರಾ ಕೃಷಿ ವಸ್ತು ಪ್ರದರ್ಶನದಲ್ಲಿ ಬಳ್ಳಿ ಆಲೂಗಡ್ಡೆ , ವೈವಿಧ್ಯಮಯ ಬೀಜ ತಳಿಗಳನ್ನು ಪ್ರದರ್ಶಿದ ಪ್ರಗತಿಪರ ರೈತ ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್

On: October 24, 2026 2:56 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ರೈತರ ದಸರಾ ಕೃಷಿ ವಸ್ತು ಪ್ರದರ್ಶನದಲ್ಲಿ ಬಳ್ಳಿ ಆಲೂಗಡ್ಡೆ , ವೈವಿಧ್ಯಮಯ ಬೀಜ ತಳಿಗಳನ್ನು ಪ್ರದರ್ಶಿದ ಪ್ರಗತಿಪರ ರೈತ ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್

ಶಿಡ್ಲಘಟ್ಟ : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಪ್ರಗತಿಪರ ರೈತರಾದ ಎಂ.ತ್ಯಾಗರಾಜ್‌ ಅವರು ಮೈಸೂರಿನಲ್ಲಿ ನಡೆದ ರೈತರ ದಸರಾ ಪ್ರದರ್ಶನದಲ್ಲಿ ಪರಿಚಯಿಸಿದ “ಬಳ್ಳಿ
ಆಲೂಗಡ್ಡೆ” ಪ್ರಮುಖ ಆಕರ್ಷಣೆಯಾಗಿತ್ತು ಶಾಸಕ
ತನ್ವೀರ್ ಸೇಠ್ ಅವರು ಬಳ್ಳಿ ಆಲೂಗಡ್ಡೆ ಬಗ್ಗೆ ಆಸಕ್ತಿ
ವ್ಯಕ್ತಪಡಿಸಿ, ಅದನ್ನು ತಮ್ಮ ತೋಟದಲ್ಲಿ ನೆಡುವುದಾಗಿ ಅವರು ತಿಳಿಸಿದರು.

3 ದಿನ ನಡೆದ ರೈತರ ದಸರಾದ ಕೃಷಿ ವಸ್ತು ಪ್ರದರ್ಶನದಲ್ಲಿ ವಿವಿಧ ಅಪರೂಪದ ಬೀಜ ತಳಿಗಳನ್ನು ಪ್ರದರ್ಶಿಸುವ ಮೂಲಕ ರೈತರು ಹಾಗೂ ಕೃಷಿ ಆಸಕ್ತರ ಗಮನ ಸೆಳೆದಿದ್ದಾರೆ.

ಬಳ್ಳಿ ಆಲೂಗಡ್ಡೆ,ಬಿಳಿ ರಾಗಿ, ಬಣ್ಣ ಬಣ್ಣದ ಜೋಳ,ಕಪ್ಪು ಹುರುಳಿ, ಕಪ್ಪು ಕಡಲೆ, ವಿವಿಧ ಸೊಪ್ಪಿನ ಬೀಜಗಳು, ಸಿರಿದಾನ್ಯಗಳು, ನಾಟಿ ಸೋಂಪಿನ ಬೀಜಗಳು ಸೇರಿದಂತೆ ಹಲವು ಬಗೆಯ ಸ್ಥಳೀಯ ಹಾಗೂ ವೈವಿಧ್ಯಮಯ ಬೀಜ ತಳಿಗಳನ್ನು ಪ್ರದರ್ಶಿಸಿದರು ,ಅವುಗಳ ವೈಶಿಷ್ಟ್ಯ, ಕೃಷಿ ಪದ್ಧತಿ ಮತ್ತು ಬೀಜ ಸಂರಕ್ಷಣೆಯ ಮಹತ್ವದ ಕುರಿತು ಮಳಿಗೆಗೆ ಭೇಟಿ ನೀಡಿದ ರೈತರಿಗೆ ಮಾಹಿತಿ ನೀಡಿದರು.

ದಕ್ಷಿಣ ಅಮೆರಿಕ ಖಂಡದ ಕೊಲಂಬಿಯಾ ದೇಶದಿಂದ ಬಂದಿದ್ದ ಮಹಿಳೆಯರು ಬಳ್ಳಿ ಆಲೂಗಡ್ಡೆ ತಳಿಯನ್ನು ಪಡೆದರು’ ಈ ತಳಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈತರ ದಸರಾ ಸ್ಥಳೀಯ ಬೆಳೆಗಳ ವೈವಿಧ್ಯವನ್ನು ಅಂತರರಾಷ್ಟ್ರೀಯ ಮಟ್ಟದ ಕೃಷಿ ಆಸಕ್ತರಿಗೂ ಪರಿಚಯಿಸುವ ವೇದಿಕೆಯಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ಹೊರ ರಾಜ್ಯಗಳಿಂದಲೂ ರೈತರು ರೈತರ ದಸರೆಗೆ ಭೇಟಿ ನೀಡಿ ತ್ಯಾಗರಾಜ್ ಅವರ ಬೀಜ ಸಂಗ್ರಹದ ಕುರಿತು ಮಾಹಿತಿ ಪಡೆದರು ,ಸ್ಥಳೀಯ ಹಾಗೂ ಸಾಂಪ್ರದಾಯಿಕ ಬೀಜ ತಳಿಗಳನ್ನು ಸಂರಕ್ಷಿಸುವುದು, ಅವುಗಳನ್ನು ಇತರ ರೈತರಿಗೆ ಪರಿಚಯಿಸುವುದು ಮತ್ತು ಕೃಷಿ ಜ್ಞಾನ ಹಂಚಿಕೊಳ್ಳುವುದು ತಮ್ಮ ಉದ್ದೇಶ ಎಂದ ಅವರು, ವಿದೇಶಗಳಿಗೂ ಬಿತ್ತನೆ ಬೀಜ ಒದಗಿಸಿರುವುದಾಗಿ ಪ್ರಗತಿಪರ ರೈತರಾದ ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್ ತಮ್ಮ ಅನುಭವದ ಮಾತುಗಳಲ್ಲಿ ವಿವರಿಸಿದರು.

ಸಚಿವ ಯತೀಂದ್ರ ಸಿದ್ದರಾಮಯ್ಯ ,
ರಾಮಲಿಂಗಾರೆಡ್ಡಿ,ನರೇಂದ್ರಸ್ವಾಮಿ,ಶಿವಲಿಂಗೇಗೌಡ ,
ಬಸವಂತಪ್ಪ ಹಾಗು ಶಾಸಕ ತನ್ವಿರ್ ಸೇಠ್ ಮತ್ತು ರೈತಬಾಂಧವರು ಭೇಟಿ ನೀಡಿದ್ದರು.

WhatsApp

Join Now

Telegram

Join Now

Instagram

Join Now