--Ads--

ಇದು ಮರೀನಾ ಬೀಚ್ ಅಲ್ಲ ಮಳೆ ಬಂದರೆ ರಸ್ತೆ ಜಲಾವೃತ: ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ನಿಮ್ಮ ಜವಾಬ್ದಾರಿ ಎಲ್ಲಿದೆ?

On: October 24, 2026 2:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಇದು ಮರೀನಾ ಬೀಚ್ ಅಲ್ಲ ಮಳೆ ಬಂದರೆ ರಸ್ತೆ ಜಲಾವೃತ: ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ನಿಮ್ಮ ಜವಾಬ್ದಾರಿ ಎಲ್ಲಿದೆ?

ಕುಶಾಲನಗರ: ಮೇಲೆ ಕಾಣುತ್ತಿರುವ ಫೋಟೋ ದೃಶ್ಯ ಕೇರಳದ ಸಮುದ್ರ ತೀರವಲ್ಲ ತಮಿಳುನಾಡಿನ ಮರೀನಾ ಬೀಚ್ ಕೂಡ ಅಲ್ಲ. ಇದು ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಬಿ.ಎಂ. ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ದೃಶ್ಯ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿರುವುದು ರಸ್ತೆ ಮತ್ತು ಚರಂಡಿ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪುರಸಭೆ ಅಧಿಕಾರಿಗಳೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ಈ ಸಮಸ್ಯೆಗೆ ಹೊಣೆಗಾರರು ಯಾರು? ಮಳೆ ನೀರು ಸರಾಗವಾಗಿ ಹರಿದುಹೋಗಲು ಅಗತ್ಯವಾದ ವ್ಯವಸ್ಥೆ ಕಲ್ಪಿಸುವುದು ಯಾರ ಜವಾಬ್ದಾರಿ? ನಗರದ ಒಳಚರಂಡಿ ನಿರ್ವಹಣೆ ಮತ್ತು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಹಾಗೂ ನೀರು ಹರಿಯುವ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಸಮನ್ವಯದ ಕೊರತೆಯಿದ್ದರೆ ಅದರ ಪರಿಣಾಮವನ್ನು ಸಾರ್ವಜನಿಕರು ಏಕೆ ಅನುಭವಿಸಬೇಕು? ಅಧಿಕಾರಿಗಳ ನಡುವಿನ ಜವಾಬ್ದಾರಿಯ ಹಂಚಿಕೆಯ ಗೊಂದಲಕ್ಕೆ ಜನರು ಬೆಲೆ ತೆರಬೇಕೇ?

ಕುಶಾಲನಗರದ ಹಲವು ಪ್ರದೇಶಗಳಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆ ಮರುಕಳಿಸುತ್ತಿದ್ದರೂ ಶಾಶ್ವತ ಪರಿಹಾರ ಕಾಣದಿರುವುದು ವಿಷಾದನೀಯ. ಈ ಕುರಿತು ಕೊಡಗು ಜನ ಅಭಿವೃದ್ಧಿ ಸಮಿತಿಯು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದೆ ಆದರೂ ಸಮಸ್ಯೆ ಮುಂದುವರಿದಿರುವುದಕ್ಕೆ ಕಾರಣವೇನು? ಮನವಿಗಳನ್ನು ಸ್ವೀಕರಿಸುವುದಷ್ಟೇ ಅಧಿಕಾರಿಗಳ ಕರ್ತವ್ಯವಲ್ಲ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರ ಕಲ್ಪಿಸುವುದೂ ಅವರ ಜವಾಬ್ದಾರಿಯಾಗಿದೆ.

ಪುರಸಭೆ ಅಧಿಕಾರಿಗಳು ನಗರದ ಚರಂಡಿಗಳ ಸ್ವಚ್ಛತೆ ಹೂಳು ತೆರವು ಮತ್ತು ನೀರು ಹರಿಯುವ ಮಾರ್ಗಗಳ ನಿರ್ವಹಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ರಸ್ತೆಯಲ್ಲಿ ಮಳೆ ನೀರು ನಿಲ್ಲಲು ಕಾರಣವೇನು ಎಂಬುದನ್ನು ಪರಿಶೀಲಿಸಿ ರಸ್ತೆ ಇಳಿಜಾರು ನೀರು ಹೊರಹರಿಯುವ ವ್ಯವಸ್ಥೆ ಹಾಗೂ ಚರಂಡಿಗಳ ಸ್ಥಿತಿಯನ್ನು ತಾಂತ್ರಿಕವಾಗಿ ಪರಿಶೀಲಿಸಬೇಕು ಅಗತ್ಯವಿದ್ದಲ್ಲಿ ಎರಡೂ ಇಲಾಖೆಗಳು ಜಂಟಿ ಪರಿಶೀಲನೆ ನಡೆಸಿ ಪರಸ್ಪರ ಜವಾಬ್ದಾರಿಯನ್ನು ಒಬ್ಬರ ಮೇಲೊಬ್ಬರು ತಳ್ಳದೆ ಶಾಶ್ವತ ಪರಿಹಾರ ಕಲ್ಪಿಸಬೇಕು

ಅಧಿಕಾರಿಗಳೇ ಸಾರ್ವಜನಿಕರಿಗೆ ಬೇಕಿರುವುದು ನೆಪಗಳಲ್ಲ ಪರಿಹಾರ ಭರವಸೆಗಳಲ್ಲ ಕಾರ್ಯಾಚರಣೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದ್ದರೆ ಸಂಬಂಧಪಟ್ಟ ಇಲಾಖೆಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಗೆ ಕಾರಣ ಗುರುತಿಸಿ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು.

ಕೊಡಗು ಜನ ಅಭಿವೃದ್ಧಿ ಸಮಿತಿಯ ಸ್ಪಷ್ಟ ಆಗ್ರಹ: ಕುಶಾಲನಗರದ ಬಿ.ಎಂ. ರಸ್ತೆ ಸೇರಿದಂತೆ ಮಳೆ ನೀರು ನಿಲ್ಲುವ ಪ್ರದೇಶಗಳನ್ನು ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ತಮ್ಮ ತಮ್ಮ ವ್ಯಾಪ್ತಿಯ ಜವಾಬ್ದಾರಿಯನ್ನು ನಿರ್ವಹಿಸಬೇಕು ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿ ಮುಂದಿನ ಮಳೆಯಲ್ಲಿಯೂ ಇದೇ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು.

ಜನರ ತೆರಿಗೆ ಹಣದಿಂದ ನಡೆಯುವ ಆಡಳಿತ ಜನರಿಗೆ ಉತ್ತರದಾಯಿ ಆಗಿರಬೇಕು ಜವಾಬ್ದಾರಿ ಯಾರದ್ದೇ ಆಗಿರಲಿ ಸಮಸ್ಯೆಗೆ ಪರಿಹಾರ ನೀಡುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ

✍🏽 ಎಂ ಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ

WhatsApp

Join Now

Telegram

Join Now

Instagram

Join Now