ವಿಜಯ ದರ್ಪಣ ನ್ಯೂಸ್…….
ಹಂಡಿಗನಾಳ ಮಹಿಳಾ ಡೈರಿ ಅಧ್ಯಕ್ಷೆಯಾಗಿ ನಳಿನಾ, ಉಪಾದ್ಯಕ್ಷೆಯಾಗಿ ಮುನಿರತ್ಮಮ್ಮ ಆಯ್ಕೆ

ಶಿಡ್ಲಘಟ್ಟ : ತಾಲ್ಲೂಕಿನ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಎಸ್.ನಳಿನ ತಿಮ್ಮರಾಯಪ್ಪ, ಉಪಾಧ್ಯಕ್ಷೆಯಾಗಿ ಮುನಿರತ್ನಮ್ಮ ರಾಮಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಎಸ್.ನಳಿನ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಮುನಿರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಹಾಗಾಗಿ ಈ ಇಬ್ಬರನ್ನು ಅವಿರೋಧವಾಗಿ ಆಯ್ಕೆಮಾಡಿ ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು. ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಹೂ ಹಾರ ಹಾಕಿ, ಸಿಹಿ ನೀಡಿ ಅಭಿನಂದಿಸಲಾಯಿತು.
ಕಾಂಗ್ರೆಸ್ ಮುಖಂಡ ಬಿ.ಎಂ. ಜಯರಾಂ ಮಾತನಾಡಿ ,
ಮಾಜಿ ಸಚಿವ ವಿ.ಮುನಿಯಪ್ಪ ಅವರ ಶ್ರಮದಿಂದ ಈ ಸಂಘ ಆರಂಭವಾಗಿದ್ದು, ಅವರ ಆಶಯಕ್ಕೆ ದಕ್ಕೆ ಬಾರದ ಹಾಗೆ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು, ಹಂಡಿಗನಾಳದ ಮಹಿಳಾ ಸಹಕಾರ ಸಂಘವು ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲು ಶೇಖರಿಸುವ ಸಂಘಗಳಲ್ಲಿ ಒಂದಾಗಿದೆ, ಉತ್ತಮ ಆಡಳಿತದ ಮೂಲಕ ಸಂಘ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅನಸೂಯಮ್ಮ, ಮುನಿರತ್ನಮ್ಮ,ರತ್ನಮ್ಮ, ಪಾರ್ವತಮ್ಮ,ಯಶೋದಮ್ಮ, ಕಾಂತಮ್ಮ,
ಅನಸೂಯಮ್ಮ, ಎನ್.ಜಿ. ಶಾಂತಮ್ಮ,ಶಾರದಮ್ಮ ಹಾಗು ಮುನಿರತ್ನಮ್ಮ, ಕಾರ್ಯದರ್ಶಿ ರೂಪಾ, ಕಾಂಗ್ರೆಸ್ ಮುಖಂಡರಾದ ಅರುಣ್ಕುಮಾರ್,ಗೋವಿಂದರಾಜು, ನಾರಾಯಣಸ್ವಾಮಿ, ರಾಮಚಂದ್ರಪ್ಪ, ಗಜೇಂದ್ರ, ರಾಮಚಂದ್ರ, ರಕ್ಷಿತ್ ಮುಂತಾದವರು ಹಾಜರಿದ್ದರು.











