ವಿಜಯ ದರ್ಪಣ ನ್ಯೂಸ್……
ಒಗ್ಗಟ್ಟಿಗೆ ಆದ್ಯತೆ ನೀಡಲಾಗುವುದು: ಸಿ.ನಾಗರಾಜ್

ಹೊಸಕೋಟೆ: ಸಮುದಾಯದ ಬಂಧುಗಳ ಸಹಕಾರ ಮತ್ತು ಹಿರಿಯರ ಮಾರ್ಗದರ್ಶನದೊಂದಿಗೆ ಸಂಘದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿ. ನಾಗರಾಜ್ ತಿಳಿಸಿದ್ದಾರೆ.
ತಾವರೆಕೆರೆ : ಹೊಸಕೋಟೆ ನಗರದ ಕನಕ ಭವನದಲ್ಲಿ ನಡೆದ ತಾಲ್ಲೂಕು ಕುರುಬರ ಸಂಘದ 2025–26ನೇ ಸಾಲಿನ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಭೆಗೆ ಸಮುದಾಯದ ಹಿರಿಯರು, ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಸಂಘದ ಚುನಾವಣೆ ವೇಳೆ ಎಂಟಿಬಿ ನಾಗರಾಜ್ ಅವರ ಬೆಂಬಲಿತ 15 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸಮುದಾಯದ ಬಂಧುಗಳು ವಿಶ್ವಾಸ ವ್ಯಕ್ತಪಡಿಸಿದ್ದು, ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸಂಘದ ರಾಜಕೀಯ ಜಯಂತಿ, ಕನಕ ಜಯಂತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಶಾಲಾ ಕಟ್ಟಡ ನಿರ್ಮಾಣದ ಉದ್ದೇಶವೂ ಇದ್ದು, ಬಿಬಿಎಂಪಿ ವತಿಯಿಂದ ಆಗಸ್ತ್ಯ ಅನುವೋದನದ ದೋರೆತ ಕೊಠಡಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಗಳಿಗೆ ಸಮುದಾಯದ ಎಲ್ಲ ಬಂಧುಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಂಘದ ಗೌರವಾಧ್ಯಕ್ಷರಾಗಿದ್ದು ಸಂಘದ ಹಾಗೂ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಾದ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ನಿರಂತರವಾಗಿ ನಿಂತಿದ್ದಾರೆ. ಆದ್ದರಿಂದ ಸಮುದಾಯದ ಮುಖಂಡರು ಪಕ್ಷಭೇದ ಮರೆತು ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕುರುಬರ ಸಂಘದ ಕಾರ್ಯದರ್ಶಿ ತಾವರೆಕೆರೆ ಶ್ರೀಕಾಂತ್, ವಿಜಯಾಂಬಿ ಚೆನ್ನಮದಪ್ಪ ರಾಜೇಂದ್ರ, ಸಹ ಕಾರ್ಯದರ್ಶಿ ಆರ್. ಮಂಜುನಾಥ್, ನಿರ್ದೇಶಕರಾದ ರಾಮಾಂಜಿನಿ, ರಘುವೀರ, ಕೆಂಪಣ್ಣ, ಎಸ್.ಬಿ. ಮುನಿರಾಜು, ಮರವಳ್ಳಿ ಕೃಷ್ಣಪ್ಪ, ಎಂ.ಆರ್. ರಾಜಣ್ಣ, ಸಿ. ಮಂಜುನಾಥ್, ಕೆ. ದೇವರಾಜ್, ಲಿಂಗಾಪುರ ಮಂಜುನಾಥ್, ರಾಮಾಂಜಿನಪ್ಪ, ಜನಾರ್ದನ ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.











