ವಿಜಯ ದರ್ಪಣ ನ್ಯೂಸ್…….
ರಾಮಾಯಣದಲ್ಲಿ ಮಾತಂಗ ಮಹರ್ಷಿಗಳ ಉಲ್ಲೇಖಕ್ಕೆ ಅಗ್ರಹ: ಶ್ರೀ ಶ್ರೀ ಮನು ಗುರೂಜಿ

ದೇವನಹಳ್ಳಿ, ನವಂಬರ್.07: ನಿರ್ಮಾಪಕ ಯಶ್ ಅವರ ರಾಮಾಯಣ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಆದರೆ ಚಿತ್ರದಲ್ಲಿ ಮಾತಂಗ ಮಹರ್ಷಿಗಳ ಹೆಸರನ್ನು ಉಲ್ಲೇಖಿಸದಿರುವುದು ಬೇಸರದ ಸಂಗತಿ ಎಂದು ಆದಿ ಮಾತಂಗ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಶ್ರೀ ಮನು ಗುರೂಜಿ ಅಭಿಪ್ರಾಯಪಟ್ಟರು.
ರಾಮಾಯಣ ಚಿತ್ರದ ಕುರಿತು ವಿಮರ್ಶೆ ನಡೆಸಿದ ಅವರು, ಸನಾತನ ಹಿಂದೂ ಧರ್ಮದಲ್ಲಿ ನಾಲ್ಕು ವೇದಗಳು, 18 ಪುರಾಣಗಳು ಹಾಗೂ ರಾಮಾಯಣ, ಮಹಾಭಾರತ ಎಂಬ ಎರಡು ಮಹಾಕಾವ್ಯ ಗಳಿವೆ. ಏಳು ಕಾಂಡಗಳನ್ನು ಹೊಂದಿರುವ ರಾಮಾಯಣದ ಮೂರು ಕಾಂಡಗಳನ್ನು ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ನಿರ್ಮಾಪಕರು ಕಥೆ ಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಚಿತ್ರಿಸಬೇಕಿತ್ತು ಎಂದರು.
ಅರಣ್ಯ ಕಾಂಡದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದ ಕಿಷ್ಕಂಧ ಪ್ರದೇಶದ ಮಾತಂಗವನದಲ್ಲಿ ಮಾತಂಗ ಮಹರ್ಷಿಗಳು ನೆಲೆಸಿದ್ದರು. ಶ್ರೀರಾಮ ಮತ್ತು ಲಕ್ಷ್ಮಣರು ಅಲ್ಲಿಗೆ ಬಂದಿರುವ ಉಲ್ಲೇಖಗಳಿವೆ. ಶಬ ರಿಯೂ ಮಾತಂಗವನದಲ್ಲಿದ್ದಳು. ಆದರೆ ಚಿತ್ರದಲ್ಲಿ ಮಾತಂಗ ಮಹ ರ್ಷಿಗಳ ಹೆಸರನ್ನು ಉಲ್ಲೇಖಿಸದಿರುವುದು ವಿಷಾದನೀಯ ಎಂದರು.
ರಾಮಾಯಣ ಚಿತ್ರದ ಎರಡನೇ ಭಾಗದಲ್ಲಾದರೂ ಮಾತಂಗ ಮಹರ್ಷಿಗಳ ಹೆಸರನ್ನು ಉಲ್ಲೇಖಿಸುವ ಮೂಲಕ ಅವರ ಇತಿಹಾಸ ಮತ್ತು ಮಹತ್ವವನ್ನು ಪರಿಚಯಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುನಿರಾಜು, ರಾಮಕೃಷ್ಣಪ್ಪ, ಆನಂದ್, ಮಣಿ ಆಂಜಿನಪ್ಪ, ರಮಾದೇವಿ, ಮುತ್ತುರಾಜ್, ವೆಂಕಟೇಶ್, ನರಸಿಂಹ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.









