--Ads--

ಕುಶಾಲನಗರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ: ಸಾರ್ವಜನಿಕರೇ ಎಚ್ಚರಿಕೆ

On: November 27, 2026 6:13 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ಕುಶಾಲನಗರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ: ಸಾರ್ವಜನಿಕರೇ ಎಚ್ಚರಿಕೆ

ಕೊಡಗು :ಅಮೂಲ್ಯ ವಸ್ತುಗಳ ಸುರಕ್ಷತೆಗೆ ಆದ್ಯತೆ ನೀಡಿ* *ಕೊಡಗು ಜನ ಅಭಿವೃದ್ಧಿ ಸಮಿತಿ ಮನವಿ

ಜನಸಂದಣಿಯ ನಡುವೆ ಪಿಕ್‌ಪಾಕೆಟ್ ಸರಗಳ್ಳತನ ಹಾಗೂ ಮನೆ ಕಳ್ಳತನದ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ ಹಬ್ಬದ ಸಂಭ್ರಮದಲ್ಲಿ ಅಜಾಗರೂಕತೆ ಬೇಡ

ಕುಶಾಲನಗರ 27.11.2026

ಕುಶಾಲನಗರದಲ್ಲಿ ಇಂದು ನಡೆಯುತ್ತಿರುವ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಸಾರ್ವಜನಿಕರು ಆಗಮಿಸುತ್ತಿದ್ದಾರೆ ಧಾರ್ಮಿಕ ಸಂಭ್ರಮದೊಂದಿಗೆ ನಡೆಯುವ ಈ ಮಹೋತ್ಸವವು ಎಲ್ಲರಿಗೂ ಸಂತೋಷದಾಯಕವಾಗಿರಬೇಕು. ಇಂತಹ ದೊಡ್ಡ ಜನಸಂದಣಿಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ತಮ್ಮ ಅಮೂಲ್ಯ ವಸ್ತುಗಳ ರಕ್ಷಣೆಯ ಬಗ್ಗೆಯೂ ಪ್ರತಿಯೊಬ್ಬರೂ ವಿಶೇಷ ಗಮನಹರಿಸುವುದು ಅತ್ಯಗತ್ಯ ಎಂದು ಕೊಡಗು ಜನ ಅಭಿವೃದ್ಧಿ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ರಥೋತ್ಸವ ಹಾಗೂ ಜಾತ್ರಾ ಮೈದಾನಗಳಲ್ಲಿ ಜನಸಂದಣಿ ಹೆಚ್ಚಿರುವ ಸಂದರ್ಭದಲ್ಲಿ ಪಿಕ್‌ಪಾಕೆಟ್ ಚಿನ್ನದ ಸರಗಳ್ಳತನ ಮೊಬೈಲ್ ಹಾಗೂ ಪರ್ಸ್ ಕಳ್ಳತನದಂತಹ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು. ವಿಶೇಷವಾಗಿ ಮಹಿಳೆಯರು ತಮ್ಮ ಚಿನ್ನದ ಸರಗಳು ಹಾಗೂ ಬೆಲೆಬಾಳುವ ಆಭರಣಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಹಣ ಮೊಬೈಲ್ ಪರ್ಸ್ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು

ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಹೊರಡುವ ಸಾರ್ವಜನಿಕರು ತಮ್ಮ ಮನೆಗಳನ್ನು ಖಾಲಿ ಬಿಟ್ಟು ತೆರಳುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಮನೆಯ ಬಾಗಿಲು ಕಿಟಕಿಗಳನ್ನು ಸರಿಯಾಗಿ ಭದ್ರಪಡಿಸಬೇಕು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿಡಬೇಕು ಸಾಧ್ಯವಾದಲ್ಲಿ ನೆರೆಹೊರೆಯವರಿಗೂ ಮಾಹಿತಿ ನೀಡಿ ಮನೆಗಳ ಮೇಲೆ ನಿಗಾ ವಹಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಹಬ್ಬದ ಸಂಭ್ರಮದ ನಡುವೆ ಮನೆಗಳ ಸುರಕ್ಷತೆಯನ್ನು ಮರೆಯಬಾರದು

ಪೊಲೀಸ್ ಇಲಾಖೆಯ ಗಮನಕ್ಕೂ ಸಮಿತಿಯ ಮನವಿ:

ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಪಿಕ್‌ಪಾಕೆಟ್ ಮತ್ತು ಸರಗಳ್ಳತನ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಜನಸಂದಣಿ ಇರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯ ನಿರಂತರ ನಿಗಾ ಹಾಗೂ ಸಾರ್ವಜನಿಕರಿಗೆ ತುರ್ತು ಸಹಾಯ ದೊರೆಯುವ ವ್ಯವಸ್ಥೆ ಇರಬೇಕೆಂದು ಸಮಿತಿ ಮನವಿ ಮಾಡಿದೆ

ಹೊರ ಜಿಲ್ಲೆ ಹಾಗೂ ಅಂತರರಾಜ್ಯಗಳಿಂದ ಆಗಮಿಸುವ ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು

ರಥೋತ್ಸವ ಮತ್ತು ಜಾತ್ರಾ ಮಹೋತ್ಸವವು ಧಾರ್ಮಿಕ ಭಾವನೆ ಭಕ್ತಿ ಸೌಹಾರ್ದತೆ ಹಾಗೂ ಶಾಂತಿಯ ಸಂಕೇತವಾಗಬೇಕು ಯಾರೊಬ್ಬರೂ ತಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ನೋವು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಸಾರ್ವಜನಿಕರ ಸಹಕಾರ ಮತ್ತು ಪೊಲೀಸ್ ಇಲಾಖೆಯ ಮುನ್ನೆಚ್ಚರಿಕಾ ಕ್ರಮಗಳಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ

ಈ ನಿಟ್ಟಿನಲ್ಲಿ ಕುಶಾಲನಗರದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿದ್ದು ತಮ್ಮ ಕುಟುಂಬದವರ ಮತ್ತು ವೈಯಕ್ತಿಕ ವಸ್ತುಗಳ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಕೊಡಗು ಜನ ಅಭಿವೃದ್ಧಿ ಸಮಿತಿಯು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದೆ.

ಕೊಡಗು ಜನ ಅಭಿವೃದ್ಧಿ ಸಮಿತಿ
ಜನರಿಂದಲೇ ಜನರಿಗೋಸ್ಕರ ಇರುವ ಸಮಿತಿ

WhatsApp

Join Now

Telegram

Join Now

Instagram

Join Now