ವಿಜಯ ದರ್ಪಣ ನ್ಯೂಸ್….
ಕೆರೆ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ದಾತ್ರಿಹವನ

ಕೋಲಾರ ತಾಲ್ಲೂಕು ನರಸಾಪುರದ ರಾಷ್ಟ್ರೀಯ ಹೆದ್ದಾರಿಯ ಕೆರೆ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ, ದಿ, ಶ್ರೀನಿವಾಸರಾವ್ ಕುಟುಂಬದವರು ನೆಡಸಿಕೊಂಡು ಬರುತ್ತಿರುವ 116ನೇ ವರ್ಷದ ದಾತ್ರಿಹವನ ವನ್ನು ಯಶಸ್ವಿಯಾಗಿ ನೆರೆವೇರಿಸಲಾಯಿತು,
ಪ್ರಧಾನ ಅರ್ಚಕ ವಿದ್ವಾನ್ ಅಂಜನ್ ಕುಮಾರ್ ಶರ್ಮಾ ಅವರ ನೇತೃತ್ವದಲ್ಲಿ ದಾತ್ರಿ ಪೂಜೆ, ಹೋಮ, ಹವನಾಧಿಗಳನ್ನು ನೆಡಸಲಾಯಿತು, ನೂರಾರು ಭಕ್ತರಿಗೆ ವನಭೋಜನದ ವ್ಯವಸ್ಥೆಯನ್ನು ಎನ್ ಕೆ ರಾಮಚಂದ್ರರಾವ್ ಮತ್ತು ಸಹೋದರರು ಅಚ್ಚುಕಟ್ಟಾಗಿ ಮಾಡಿದರು.
ಈ ಸಂಧರ್ಭದಲ್ಲಿ ಅಕ್ಷಯ ವಿಪ್ರ ಮಹಾ ಸಭಾದ ಗೌರವಧ್ಯಕ್ಷ ಡಾ, ಎನ್ ಕೀರ್ತಿರಾಜ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್, ಉಪಾಧ್ಯಕ್ಷ ಎಸ್ ಎಸ್ ಲಕ್ಷ್ಮೀಶ, ಟಿ ಎನ್ ಶಾಂತಕುಮಾರ್, ಶ್ರೀಪ್ರಕಾಶ್,ಎನ್ ಪಿ ಮಂಜುನಾಥ್, ವಿಜಯಕುಮಾರ್ ಭಟ್, ಮಣಿಕುಮಾರ್, ಹಿರಿಯ ವಕೀಲರಾದ ಎನ್ ಜಿ. ವಾಸುದೇವಮೂರ್ತಿ, ಸೇರಿದಂತೆ ಗ್ರಾಮಸ್ಥರು ಹಾಗು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥಪ್ರಸಾದ ಸ್ವೀಕರಿಸಿದರು.











