--Ads--

ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು ಎಂದು  ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ ಸಂಸದ ಸುನಿಲ್ ಬೋಸ್

On: November 29, 2026 6:56 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು ಎಂದು  ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ ಸಂಸದ ಸುನಿಲ್ ಬೋಸ್

ತಾಂಡವಪುರ ನವೆಂಬರ್ 29 : ಚಾಮರಾಜನಗರ ಜಿಲ್ಲೆಯ ರೈತ ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ನೆರವಿಗೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ-ಪತ್ರ ಹಾಗೂ ಪ್ರಧಾನಮಂತ್ರಿಗಳಿಗೆ ಸಂಸದ ಸುನಿಲ್ ಬೋಸ್ ರವರು ಮನವಿ ಮಾಡಿದ್ದಾರೆ

ಈ ವಿಚಾರವಾಗಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸುನಿಲ್ ಬೋಸ್ ರವರು ನಮ್ಮ ಲೋಕಸಭಾ ಕ್ಷೇತ್ರದ ಚಾಮರಾಜನಗರ ಜಿಲ್ಲೆಯ ಸಾವಿರಾರು ರೈತ ಕುಟುಂಬಗಳ ಜೀವನಾಡಿಯಾಗಿರುವ ರೇಷ್ಮೆ ಕೃಷಿಯನ್ನು ಬಲಪಡಿಸುವ ನಿಟ್ಟಿನಲ್ಲಿ, ನಗರದ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರಕ್ಕೆ (RSRS) ತುರ್ತಾಗಿ ನುರಿತ ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೇಮಿಸುವಂತೆ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ನಾನು ಪತ್ರ ಬರೆದಿದ್ದೆ,

ಇದಕ್ಕೆ ಪ್ರತ್ಯುತ್ತರ ನೀಡಿರುವ ಕೇಂದ್ರ ಜವಳಿ ಸಚಿವಾಲಯವು,”ಚಾಮರಾಜನಗರ ರೇಷ್ಮೆ ಸಂಶೋಧನಾ ಕೇಂದ್ರವನ್ನು ಮಳೆಯಾಶ್ರಿತ ರೇಷ್ಮೆ ಬೆಳೆ ಸಂಶೋಧನೆಯ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯಾಶ್ರಿತ ರೇಷ್ಮೆ ಕೃಷಿಯು ಕಡಿಮೆ ನೀರಿನ ಬಳಕೆಯ ‘ನೀರಾವರಿ ಹಿಪ್ಪುನೇರಳೆ ಕೃಷಿ’ಯಾಗಿ ಬದಲಾಗಿದೆ” ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

“ಆಡಳಿತಾತ್ಮಕ ಮಿತಿಗಳ” ನೆಪವೊಡ್ಡಿ ಮೈಸೂರಿನ CSB-CSRTI ಕಚೇರಿಯ ಕೇವಲ ಒಬ್ಬ ಹಿರಿಯ ವಿಜ್ಞಾನಿಯ ಉಸ್ತುವಾರಿಯಲ್ಲಿ ಈ ಕೇಂದ್ರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ ಸಂಸದರು ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಕೇಂದ್ರ ಸಚಿವಾಲಯದ ಈ ನಿಲುವನ್ನು ನಾನು ಒಪ್ಪುವುದಿಲ್ಲ. ಈ ಹಿನ್ನೆಲೆಯಲ್ಲಿ, ಕೇಂದ್ರ ಜವಳಿ ಸಚಿವರಿಗೆ ಮರು-ಪತ್ರ ಬರೆಯುವುದರ ಜೊತೆಗೆ, ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೂ ಅಧಿಕೃತ ಮನವಿ ಪತ್ರ ಸಲ್ಲಿಸಿ, ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದೇನೆ: ಎಂದು ಹೇಳಿದ ಸಂಸದರು

✅ ನೀರಾವರಿ ಹಿಪ್ಪುನೇರಳೆ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆ: ಆಧುನಿಕ ಕೃಷಿ ಪದ್ಧತಿಗೆ ಅನುಗುಣವಾಗಿ ಚಾಮರಾಜನಗರದ RSRS ಕೇಂದ್ರವನ್ನು ಅಧಿಕೃತವಾಗಿ ‘ನೀರಾವರಿ ಹಿಪ್ಪುನೇರಳೆ ರೇಷ್ಮೆ ಬೆಳೆ ಸಂಶೋಧನಾ ಕೇಂದ್ರ’ವನ್ನಾಗಿ ಮೇಲ್ದರ್ಜೆಗೇರಿಸಬೇಕು.

✅ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನದ ನಿಯೋಜನೆ: ಮೈಸೂರು ಕಚೇರಿಯ ತಾತ್ಕಾಲಿಕ ವ್ಯವಸ್ಥೆಯನ್ನು ಕೈಬಿಟ್ಟು, ಈ ಕೇಂದ್ರಕ್ಕೆ ಕಾಯಂ ಆಗಿ ನುರಿತ ವಿಜ್ಞಾನಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ತಕ್ಷಣವೇ ನಿಯೋಜಿಸಬೇಕು. ಎಂದು ಮನವಿ ಮಾಡಿರುವ ಸಂಸದರು

✅ ಮೂಲಭೂತ ಸೌಕರ್ಯ ಹಾಗೂ ಪ್ರಯೋಗಶೀಲ ಕೇಂದ್ರ: ಸಂಶೋಧನಾ ಕೇಂದ್ರ ಮತ್ತು ಹಿಪ್ಪುನೇರಳೆ ತೋಟವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು, ಸಕಲ ಸೌಲತ್ತುಗಳೊಂದಿಗೆ ಇದನ್ನು ಒಂದು ಸಕ್ರಿಯ ‘ಪ್ರಯೋಗಶೀಲ ಕೇಂದ್ರ’ವನ್ನಾಗಿ ಅಭಿವೃದ್ಧಿಪಡಿಸಿ ಜಿಲ್ಲೆಯ ರೈತರಿಗೆ ನೇರ ತಂತ್ರಜ್ಞಾನ ಸೇವೆ ಒದಗಿಸಬೇಕು.
ನಮ್ಮ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನೆಯ ನೆರವು ಸಿಗುವವರೆಗೂ ಈ ಕುರಿತು ನನ್ನ ಪ್ರಯತ್ನ ನಿರಂತರವಾಗಿ ಈ ವಿಚಾರವಾಗಿ ನನ್ನ ಪ್ರಯತ್ನವನ್ನು ಮಾಡುವುದರ ಮೂಲಕ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಬೇಕು ಅಲ್ಲಿವರೆಗೂ ನನ್ನ ಈ ಹೋರಾಟ ಮುಂದುವರೆಸುತ್ತೇನೆ ಎಂದು ತಿಳಿಸಿದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಬಸವಣ್ಣನವರಿಗೆ ಅಪಮಾನವಾಗುವ ಕಾರ್ಯಕ್ರಮದಲ್ಲಿ ಭಾಗಿಯಾದ ಶಂಕರ್ ಬಿದರಿ ರಾಜೀನಾಮೆ ನೀಡಲಿ: ವರುಣಾಮಹೇಶ್

ಸಂವಿಧಾನ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು, ಸಂವಿಧಾನದ ಆಶಯಗಳ ಸಾಕಾರಕ್ಕೆ ಜನಜಾಗೃತಿ ಅತ್ಯಗತ್ಯ: ಸಿದ್ದರಾಮಯ್ಯ ಇಂಗಿತ

ಕನಕದಾಸರ ಕೀರ್ತನೆಗಳನ್ನು ಮನೆಮನೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ಕೋಟಕ್ ಮಹೀಂದ್ರ ಬ್ಯಾಂಕ್‌ನ ಸಿಎಸ್‌ಆರ್ (CSR) ನಿಧಿಯಡಿ ಅಳವಡಿಸಲಾಗಿರುವ ಅತ್ಯಾಧುನಿಕ ಎಂಆರ್‌ಐ (MRI) ಯಂತ್ರ ಹಾಗೂ ಕಿಡ್ನಿ ಕಸಿ ತೀವ್ರ ನಿಗಾ ಘಟಕವನ್ನು ಲೋಕಾರ್ಪಣೆಗೊಳಿದ ಸಚಿವರು

ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ  ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ವಸತಿ ಸಮುಚ್ಚ ಉದ್ಘಾಟನೆ