--Ads--

ವೀರ ಯೋಧ 63 ರಾಷ್ಟ್ರೀಯ ರೈಫಲ್ ಪುರಸ್ಕೃತ ಎಂ.ವಿ.ಪ್ರಾಂಜಲ್ ಗೆ ನಮನ .

On: November 29, 2023 1:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್ 

ಮಡಿಕೇರಿ ನವೆಂಬರ್ 29 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ವೀರ ಯೋಧ 63 ರಾಷ್ಟ್ರೀಯ ರೈಫಲ್ ಪುರಸ್ಕೃತ ಎಂ.ವಿ.ಪ್ರಾಂಜಲ್ ಅವರಿಗೆ ನಮನ ಸಲ್ಲಿಸಲಾಯಿತು.

ಎಂ.ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿ, ಎಂ.ವಿ.ಪ್ರಾಂಜಲ್ ಅವರ ದೇಶ ಸೇವೆ ಹಾಗೂ ಕರ್ತವ್ಯ ನಿಷ್ಠೆ ಕುರಿತು ಗುಣಗಾನ ಮಾಡಲಾಯಿತು.

ಎಂ.ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ,
ಬಾಲ್ಯದಿಂದಲೂ ಅವರು ಸೈನ್ಯಕ್ಕೆ ಸೇರುವ ಕನಸು ಕಂಡಿದ್ದರು, ತಮ್ಮ ಗುರಿಗೆ ಸಮರ್ಪಿತರಾಗಿದ್ದರು. ಸ್ಕೌಟ್ ಆಗಿ, ಅವರ ಬದ್ಧತೆ ಅಚಲವಾಗಿತ್ತು. ಅವರು ದೇಶಕ್ಕೆ ಸೇವೆ ಸಲ್ಲಿಸಲು ಹೆಮ್ಮೆಪಡುತ್ತಿದ್ದರು ಎಂದರು.

ಪ್ರಾಂಜಲ್ ನಿಜವಾಗಿಯೂ ಅಸಾಧಾರಣ ಮತ್ತು ಅವರ ನಿಧನವು ಅಪಾರ ನಷ್ಟವಾಗಿದೆ, ಡಿಪಿಎಸ್ಎಂಆರ್‌ಪಿಎಲ್‌ನಿಂದ ಭಾರತೀಯ ಸೇನೆಯ ಶ್ರೇಣಿಗೆ ಪ್ರಾಂಜಲ್ ಅವರ ಪ್ರಯಾಣವು ಅಚಲವಾದ ಸಮರ್ಪಣೆಯಿಂದ ಗುರುತಿಸಲ್ಪಟ್ಟಿದೆ ಎಂದರು.

ವೀರ ಮರಣ ಅಪ್ಪಿದ ಪ್ರಾಂಜಿಲ್ ಅವರಿಗೆ ಈ ನಮನ ಕಾರ್ಯಕ್ರಮ ಏಕಕಾಲದಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಸ್ಕೌಟ್ಸ್, ಗೈಡ್ಸ್ ವತಿಯಿಂದ ಮನೆ ಮನೆಗಳಲ್ಲಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಬೇಬಿ ಮ್ಯಾಥ್ಯೂ ತಿಳಿಸಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡುವ ಎನ್ನುವ ಮಾತಿನಿಂದ ಶಾಲಾ ದಿನಗಳಲ್ಲೇ ಸೇನೆ ಸೇರುವ ಬಗ್ಗೆ ಮಾತನಾಡುತ್ತಿದ್ದ ಕ್ಯಾಪ್ಟನ್‌ ಪ್ರಾಂಜಲ್ ನಂತರ ಅದನ್ನು ಸಾಧಿಸಿ ತೋರಿಸಿ ಹುತಾತ್ಮರಾದರು ಎಂದರು.

ಈ ಸಂದರ್ಭದಲ್ಲಿ ಸ್ಕೌಟ್ಸ್ , ಗೈಡ್ಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಖಜಾಂಚಿ ಪುಷ್ಪವೇಣಿ, ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ,
ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಸಹ ಕಾರ್ಯದರ್ಶಿ ಕುಟ್ಟಪ್ಪ, ಸಂಸ್ಥೆಯ ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಧನಂಜಯ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಗೈಡ್ ಕ್ಯಾಪ್ಟನ್ ಗಾಯನ, ಇನ್ನಿತರ ಪದಾಧಿಕಾರಿಗಳು ಇದ್ದರು.

ಎಂ..ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಸಲ್ಲಿಸಲಾಯಿತು.

 

ಕೊಡಗಿನ ಮಂದ್ ಮಾನಿಗಳನ್ನು ಉಳಿಸಿ ಬೆಳೆಸಲು ಸಂಸದೆ ತೇಜಸ್ವಿನಿ ಗೌಡ ಕರೆ
ಮಡಿಕೇರಿ ಪೊನ್ನಂಪೇಟೆ ನವೆಂಬರ್ : ಮಂದ್ ಮಾನಿಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸಲು ಹಾಗೂ ಹಬ್ಬ ಹರಿದಿನಗಳಲ್ಲಿ ಜನಾಂಗ ಕಡ್ಡಾಯವಾಗಿ ಸಾಂಪ್ರಾದಾಯಿಕ ಉಡುಪುಗಳನ್ನು ತೊಡಲು ಎಂ.ಎಲ್.ಸಿ ತೇಜಸ್ವಿನಿ ಗೌಡ ಕರೆ ನೀಡಿದರು.

ಪೊನ್ನಂಪೇಟೆ ಸಮೀಪದ ಬೊಟ್ಟಿಯತ್ ನಾಡ್ ದೇವಮಕ್ಕಡ ಬಾಣೆ ಪುತ್ತರಿ ಕೋಲ್ ಮಂದ್ ಸಂದರ್ಭ ಮಂದ್’ಗಳ ಅಧ್ಯಯನಕ್ಕಾಗಿ ಭೇಟಿ ನೀಡಿ ಮಾತನಾಡಿದ ಸಂಸದೆ ತೇಜಸ್ವಿನಿ ಗೌಡ ಕೊಡವ ಜನಾಂಗ ಈ ದೇಶದಲ್ಲಿಯೇ ಒಂದು ವಿಶಿಷ್ಟ ಜನಾಂಗವಾಗಿದ್ದು, ನಶಿಸಿ ಹೋಗುತ್ತಿರುವ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವ ಬೆಳೆಸುವಲ್ಲಿ ಯುವಜನಾಂಗ ಮುಂದಾಗಬೇಕಿದೆ ಎಂದು ಹೇಳಿದ ಅವರು ಕೊಡಗಿನ ಮಂದ್’ಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಂದ್’ಗಳ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ತನ್ನ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು. ನಮ್ಮ ಸಂಸ್ಕೃತಿ ಉಡುಗೃ ತೊಡುಗೆಗಳ ಬಗ್ಗೆ ನಮಗೆ ಕೀಳರಿಮೆ ಇರಬಾರದು. ಮೊದಲು ನಾವು ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ಹಾಗಾದರೆ ಮಾತ್ರ ಒಂದು ಜನಾಂಗದ ಉಳಿವು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹುದೂರುವಿನ ತಕ್ಕ ಹಾಗೂ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸೇರಿದಂತೆ ಹಳ್ಳಿಗಟ್ಟು, ಈಚೂರ್, ಕುಂದಾ, ಮುಗಟಗೇರಿ, ಆರ್ವತೋಕ್ಲು ಗ್ರಾಮಗಳ ತಕ್ಕ ಮುಖ್ಯಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಸಾಮೂಹಿಕ ಮೂರು ಸುತ್ತು ಪುತ್ತರಿ ಕೋಲಾಟ್ ನಡೆಯಿತು.

WhatsApp

Join Now

Telegram

Join Now

Instagram

Join Now