--Ads--

ಎಲ್ಲರೂ ಹಿಂದೂ ಧರ್ಮದ ಆಚಾರ ವಿಚಾರ ಧರ್ಮವನ್ನು ಪಾಲಿಸಬೇಕು: ಛಲವಾದಿ ನಾರಾಯಣಸ್ವಾಮಿ

On: May 30, 2025 11:16 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಎಲ್ಲರೂ ಹಿಂದೂ ಧರ್ಮದ ಆಚಾರ ವಿಚಾರ ಧರ್ಮವನ್ನು ಪಾಲಿಸಬೇಕು: ಛಲವಾದಿ ನಾರಾಯಣಸ್ವಾಮಿ

ಶಿಡ್ಲಘಟ್ಟ : ಹಿಂದೂ ಧರ್ಮದ ಆಚಾರ, ವಿಚಾರ , ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾಯಕವನ್ನು ನಾವೆಲ್ಲರೂ ಮಾಡುವ ಜತೆಗೆ ನಮ್ಮಮಕ್ಕಳು ಕೂಡ ಧರ್ಮವನ್ನು ಪಾಲಿಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ನಗರ ಸಮೀಪದ ಹನುಮಂತಪುರ ಶ್ರೀ ಆಂಜನೇಯಸ್ವಾಮಿ ಗುಡಿಯಲ್ಲಿ ಪೂಜೆ ಸಲ್ಲಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಬಿಜೆಪಿ ಮುಖಂಡ ಸೀಕಲ್‌ ರಾಮಚಂದ್ರಗೌಡ ಅವರು ಶ್ರೀರಾಮನ ಪ್ರತಿಮೆಯಿದ್ದ ಟ್ರ್ಯಾಕ್ಟರ್ ಚಲಾಯಿಸಿ ಶ್ರೀರಾಮ ಶೋಭಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೂ ಧರ್ಮದ ಅತಿದೊಡ್ಡದ ಅಸ್ಮಿತೆ ಶ್ರೀರಾಮ ಪ್ರಭು ಶೋಭಾಯಾತ್ರೆಯು ನಮ್ಮೆಲ್ಲರ ಅಸ್ಮಿತೆಯಾಗಿದೆ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಏರ್ಪಡಿಸಿರುವ ಶೋಭಾಯಾತ್ರೆಗೆ ರೈತಪರ, ದಲಿತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿರುವುದು ಸಂತಸದ ವಿಚಾರ ಎಂದು ಹೇಳಿದರು.

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರ ನಮ್ಮದು ಹಾಗಂತ ನಾವು ಮುಸ್ಲಿಂರ ವಿರೋಧಿಗಳಲ್ಲ ,ನಮ ರಾಷ್ಟ್ರದಲ್ಲಿ ಕೆಲವು ಅವಿದ್ಯಾವಂತ ಕಿಡಿಗೇಡಿಗಳು, ಪಾಕಿಸ್ತಾನ ಉಗ್ರರರಿಗೆ ಬೆಂಬಲ ನೀಡುವಂತೆ ಮಾತನಾಡುವುದು ದೇಶ ವಿರೋಧ ಕೆಲಸ ಮಾಡುವುದನ್ನ ಸಹಿಸುವುದಿಲ್ಲ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಪಾಕಿಸ್ತಾನದ ಉಗ್ರರು ಹಿಂದೂಗಳ ಮೇಲೆ ಕ್ರೌರ್ಯ ನಡೆಸಿ ಹಿಂದೂ ಮುಸ್ಲಿಂ ಎಂದು ಖಾತ್ರಿ ಪಡಿಸಿಕೊಂಡು ಕೇವಲ ಹಿಂದೂಗಳನ್ನು, ನಮ್ಮ ಹೆಂಡತಿ ಮಕ್ಕಳ ಮುಂದೆಯೇ ಗುಂಡು ಹಾರಿಸಿ ಕೊಲೆ ಮಾಡಿರುವುದು ಸಹಿಸಲಾರದ ವಿಷಯ ಎಂದರು.

ಭಾರತೀಯರ ಹೆಣ್ಣು ಮಕ್ಕಳ ಸಿಂಧೂರವನ್ನು ಅಳಿಸಿದ ಪಾಕಿಸ್ತಾನ ಉಗ್ರರಿಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಸಿಂಧೂರ್ ಯುದ್ಧ ಆರಂಭಿಸಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ತ ನಮ್ಮ ಸೈನ್ಯ ನಾಶ ಮಾಡಿದೆ ಹಿಂದೂಗಳು ಎಲ್ಲರೂ ಒಂದಾಗಬೇಕು ಎಂಬ ಸಂಕೇತವೇ ಶೋಭಯಾತ್ರೆ ಎಂದರು.

ನಮ್ಮ ದೇಶದ ವು ಗಾಳಿ, ನೀರು, ಊಟ ಸೇವಿಸಿ ದೇಶದ್ರೋಹ ನ ಕೆಲಸ ಮಾಡುವವರನ್ನೂ ಸಹಾ ಉಗ್ರರು ಎಂದು ಪರಿಗಣಿಸಿ ಅವರನ್ನು ದೇಶದಿಂದ ಹೊರಹಾಕುವ ಕೆಲಸ ಮಾಡಬೇಕು ಜೊತೆಗೆ ಆತ ಕಾನೂನು ಮೂಲಕ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಶ್ರೀರಾಮನನ್ನು ನಾವು ಪಿತೃವಾಕ್ಯ ಪರಿಪಾಲಕನಾಗಿ ನೋಡುತ್ತೇವೆ ಜಗತ್ತಿನ ಕೋಟ್ಯಂತರ ಮಂದಿಗೆ ಆದರ್ಶ ಪುರುಷನಾಗಿದ್ದಾನೆ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ,ವಿಜೃಂಭಣೆಯಿಂದ ನೆರವೇರಿತು ಅಖಂಡ ಭಾರತದಲ್ಲಿರುವ ನಾವೆಲ್ಲರೂ ಒಂದೆ ಎನ್ನುವ ಭಾವನೆ ಮೂಡಬೇಕಿದೆ 12ನೇ ಶತಮಾನದಲ್ಲಿ ಬಸವಣ್ಣ ಹೇಳಿದಂತೆ ನಾವೆಲ್ಲರೂ ಸಂವಿಧಾನವನ್ನು ಪಾಲಿಸಬೇಕು ಎಲ್ಲಾರೂ ಒಂದೆಂಬ ಭಾವನೆಯನ್ನು ಇನ್ನೂ ಹೆಚ್ಚು ಬೆಳೆಸಿಕೊಳ್ಳಬೇಕು ಎಂದರು.

ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್‌ನ ಶ್ರೀಆಂಜನೇಯಸ್ವಾಮಿ ಗುಡಿಯಿಂದ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯ ಶ್ರೀಸಲ್ಲಾಪುರಮ್ಮ ದೇವಾಲಯದವರೆಗೆ ಸಾಗಿದ ಶ್ರೀರಾಮ ಶೋಭಾಯಾತ್ರೆಯ ವೈಭವವನ್ನು ನಾಗರೀಕರು ಕಣ್ಣುಂಬಿಕೊಂಡರು.

ಶ್ರೀಆಂಜನೇಯ ವೇಷಧಾರಿ, ಡೊಳ್ಳು ಕುಣಿತ, ತಮಟೆ, ಚೆಂಡೆ ಇನ್ನಿತರೆ ಜನಪದ ಕಲಾ ತಂಡಗಳು ಶೋಭಾಯಾತ್ರೆಗೆ ಕಳೆ ನೀಡಿತು. ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಹಾಗು ಸಂಸ್ಕಾರ ಭಾರತಿ ಸದಸ್ಯರು ಶ್ರೀರಾಮನ ಹಾಡು ಹಾಡುತ್ತಾ ಸಾಥ್ ನೀಡಿದರು.
ಡಿವೈಎಸ್‌ಪಿ ಮುರಳೀಧರ್, ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಸಂಸದ ಮುನಿಸ್ವಾಮಿ,ಮಾಜಿ ಶಾಸಕ ಎಂ.ರಾಜಣ್ಣ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಸೀಕಲ್ ಆನಂದಗೌಡ ,ಕಂಬದಹಳ್ಳಿ ಸುರೇಂದ್ರಗೌಡ, ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಚಲುವರಾಜು, ಬಜರಂಗದಳದ ವೆಂಕೋಬರಾವ್, ಕನ್ನಪ್ಪನಹಳ್ಳಿ ಮಲ್ಲೇಶ್,ವಿಜಯಪುರ ಕೃಷ್ಣಮೂರ್ತಿ, ಸೇರಿದಂತೆ ಮುಖಂಡರು, ಕನ್ನಡಪರ, ರೈತಪರ ಹಾಗು
ದಲಿತಪರ ಮತ್ತು ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now