--Ads--

ಥಗ್ ಲೈಫ್ ಚಿತ್ರ ಬಿಡುಗಡೆ ಮಾಡದಂತೆ ಕರ್ನಾಟಕ ಬಂದ್ ಕರೆ ನೀಡಲಾಗುವುದು: ವಾಟಾಳ್ ನಾಗರಾಜ್

On: June 3, 2025 1:47 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಥಗ್ ಲೈಫ್ ಚಿತ್ರ ಬಿಡುಗಡೆ ಮಾಡದಂತೆ ಕರ್ನಾಟಕ ಬಂದ್ ಕರೆ ನೀಡಲಾಗುವುದು: ವಾಟಾಳ್ ನಾಗರಾಜ್

ಬೆಂಗಳೂರು: ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ವಾಟಾಳ್ ಪಕ್ಷದಿಂದ ಕನ್ನಡ ಭಾಷೆಯ ಕುರಿತು ನಟ ಕಮಲಹಾಸನ್ ನೀಡಿರುವ ಹೇಳಿಕೆ ಖಂಡಿಸಿ ಮಾಧ್ಯಮಗೋಷ್ಟಿ.

ವಾಟಾಳ್ ನಾಗರಾಜ್ ರವರು ಮಾತನಾಡಿ ಕಮಲಹಾಸನ್ ಕನ್ನಡದ ಮುಂದೆ ತೀರ ಸಣ್ಣ ವ್ಯಕ್ತಿ, ತಮಿಳುನಾಡಿನಲ್ಲಿ ಅವರ ಜನಬೆಂಬಲ ಇಲ್ಲ, ಪಾರ್ಟಿ ಕಟ್ಟಿ ಸೋತಿದ್ದಾರೆ.

ತಮಿಳಿನಿಂದ ಕನ್ನಡ ಬಂತು ಈ ಮಾತನ್ನ ಆಡಿದ್ದಾರೆ, ಯಾರು ಮಾತನಾಡಿದರು ಎಂಬುದು ಅರ್ಥವಾಗುತ್ತಿಲ್ಲ. ಈ ಪದ ಯಾಕೆ ಉಪಯೋಗಿಸಿದರು ಎಂಬುದು ಅರಿವಾಗುತ್ತಿಲ್ಲ.

ತಮಿಳಿನಿಂದ ಕನ್ನಡ ಹುಟ್ಟಿದ್ದೆ ಎಂದು ಹೇಳಿರುವುದು ಕೆಟ್ಟ ಸಂಸ್ಕೃತಿ, ಅಪರಾಧವಾಗಿದೆ. ನಾಗಪ್ರಸನ್ನ ರವರ ಪೀಠದಲ್ಲಿ ವಾದಮಂಡನೆಯಾಗುತ್ತಿದೆ. ಭಾಷೆ ವಿಚಾರದಲ್ಲಿ ರಾಜಿ ಇಲ್ಲ.

ಈ ಹಿಂದೆ ಸಿ.ರಾಜಗೋಪಾಲಚಾರಿ ರವರು ಕ್ಷಮಾಪಣೆ ಕೇಳಿದ್ದರು, ಪೆರಿಯಾರ ಕಾಲದಿಂದಲು ಭಾಷ ವಿವಾದವಿದೆ. ತಮಿಳುನಾಡು ಸರ್ಕಾರಕ್ಕೆ.ದೇಶ ಒಡೆಯುವ ವಾಸನೆ ಹೋಗಿಲ್ಲ.

ಯಾವ ಕಾರಣಕ್ಕೂ ಕ್ಷೇಮಾಪಣೆ ಕೇಳದೇ ವಿಚಾರಣೆ ಮಾಡುವುದಿಲ್ಲ ಎಂದು ನ್ಯಾಯಧೀಶರಾದ ನಾಗಪ್ರಸನ್ನರವರು ಹೇಳಿದರು.

ಈ ನಾಡಿನ ಜನರ ನಾಡಿ ಮಿಡಿತವನ್ನು ಅರಿತಿರುವ ನ್ಯಾಯಧೀಶರಿಗೆ ಕನ್ನಡ ನಾಗಪ್ರಸನ್ನ ಎಂದು ಗೌರವಿಸಲಾಗುತ್ತದೆ.

ಜಲ,ನೆಲದ ವಿಷಯದಲ್ಲಿ ರಾಜಿಇಲ್ಲ, ಕಮಲಹಾಸನ್ ಕ್ಷಮಾಪಣೆ ಹೇಳಬೇಕು ನಾವು ಬಿಡುವುದಿಲ್ಲ. ಅಂತಿಮವಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್ ಕರೆ ನೀಡಲಾಗುವುದು. ಕಮಲಹಾಸನ್ ಕರ್ನಾಟಕ್ಕೆ ಬರಬಾರದು, ಬಹಿಷ್ಕಾರ ಮಾಡಲಾಗುವುದು ಎಂದು ಹೇಳಿದರು

WhatsApp

Join Now

Telegram

Join Now

Instagram

Join Now