--Ads--

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಹಾಗೂ ಮಾನವನ ದುರಾಸೆಯಿಂದ ಪರಿಸರವು ವಿನಾಶ ದತ್ತ ಸಾಗುತ್ತಿದೆ

On: June 6, 2025 12:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಹಾಗೂ ಮಾನವನ ದುರಾಸೆಯಿಂದ ಪರಿಸರವು ವಿನಾಶ ದತ್ತ ಸಾಗುತ್ತಿದೆ

ಶಿಡ್ಲಘಟ್ಟ : ಜಾಗತಿಕ ಉಷ್ಣಾಂಶದ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿದ್ದು ಮಾನವ ಕುಲಕ್ಕೆ ಇದು ಮಾರಕವಾಗಿದೆ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಹಾಗೂ ಮಾನವನ ದುರಾಸೆಯಿಂದ ಪರಿಸರವು ವಿನಾಶ ದತ್ತ ಸಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಹಾಗೂ ಸಹಶಿಕ್ಷಕ ಸಿಬಿ ಪ್ರಕಾಶ್ ತಿಳಿಸಿದರು.

ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ದಿನ ಸುಭಾಷ್ ಚಂದ್ರ ಬೋಸ್ ಸ್ಕೌಟ್ ದಳ ಮತ್ತು ರಾಣಿ ಚೆನ್ನಮ್ಮ ಗೈಡ್ ಕಂಪನಿ ವತಿಯಿಂದ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಹೀಗೆ ಮುಂದುವರಿದರೆ ಮನುಕೂಲದ ನಾಶಕ್ಕೆ ನಾಂದಿಯಾಗುತ್ತದೆ ಎಂದ ಅವರು ನಮ್ಮ ಮುಂದಿನ ಪೀಳಿಗೆಗಾಗಿ ಹಾಗೂ ಸುಸ್ಥಿರ ವಾತಾವರಣ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಾಣ ಮಾಡಬೇಕು ಹಾಗೂ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ವಾತಾವರಣದಲ್ಲಿ ಆಕ್ಸಿಜನ್ ಪ್ರಮಾಣವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿ ಸುಷ್ಮಾ, ,ಶಿಕ್ಷಕಿ ನಾಗರತ್ನ, ಇಕೋ ಕ್ಲಬ್ ಸಂಚಾಲಕಿ ಲತಾ, ವೆಂಕಟಲಕ್ಷ್ಮಮ್ಮ, ಸಿಬ್ಬಂದಿಗಳಾದ ನಾಗವೇಣಿ, ಲೋಕೇಶ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now