ಇಂದು ಕನ್ನಡದ ಸಾಹಿತಿ ತ.ಸು.ಶಾಮರಾಯರ ಜನ್ಮ ದಿನ.
ವಿಜಯ ದರ್ಪಣ ನ್ಯೂಸ್… ಇಂದು ಕನ್ನಡದ ಖ್ಯಾತ ಸಾಹಿತಿ ತ.ಸು.ಶಾಮರಾಯರ ಜನುಮ ದಿನ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮವನ್ನು ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಇಬ್ಬರು ಸಹೋದರರಲ್ಲಿ ಮೊದಲಿಗರು ಟಿ. ಎಸ್. ವೆಂಕಣ್ಣಯ್ಯನವರು. ಮತ್ತೊಬ್ಬರು ಅವರ ಎಲ್ಲಾ ಸಕಲ ಸದ್ಗುಣಗಳ ಪ್ರತಿರೂಪದಂತಿದ್ದ ತ.ಸು. ಶಾಮರಾಯರು. ಸಾಹಿತ್ಯಚರಿತ್ರೆಗಾರರಾಗಿ, ಪ್ರಾಚೀನ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳ ಸಂಪಾದಕರಾಗಿ ಹಲವಾರು ಉತ್ತಮ ಗ್ರಂಥಗಳ ಕರ್ತೃ ಹಾಗೂ ಪ್ರಕಾಶಕರಾಗಿ, ಗುರುಪರಂಪರೆಯ ಆದರ್ಶಶಿಕ್ಷಕರಾಗಿ ವಿಶಿಷ್ಟ ಚಾಪು ಮೂಡಿಸಿದ ತಳುಕಿನ…