--Ads--

ಅಜೋಲಾ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ: ಡಾ. ಬಿ ಆರ್ ರವಿಕಿರಣ್

On: August 11, 2025 12:51 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಅಜೋಲಾ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ: ಡಾ. ಬಿ ಆರ್ ರವಿಕಿರಣ್

ಶಿಡ್ಲಘಟ್ಟ : ರಾಸುಗಳಿಗೆ ನೀಡುವ ಪಶು ಆಹಾರದ ವೆಚ್ಚವನ್ನು ಕಡಿಮೆಗೊಳಿಸಲು ಅಜೋಲಾ ಒಂದು ಪಾಚಿ ಜಾತಿಗೆ ಸೇರಿದ ಪೌಷ್ಟಿಕಾಂಶಯುಕ್ತ ಹೆಚ್ಚಿನ ಪ್ರೋಟೀನ್ ಅಂಶ ಹೊಂದಿದ್ದು ಹೈನು ರಾಸುಗಳಿಗೆ ಉತ್ತಮ ಆಹಾರವಾಗಿದ್ದು ಪ್ರತಿ ದಿನ ರಾಸುಗಳಿಗೆ ಅಜೋಲವನ್ನು ನೀಡಿದ್ದೆ ಆದಲ್ಲಿ ಗುಣಮಟ್ಟದ ಹಾಲನ್ನು ಪಡೆಯಬಹುದು ಎಂದು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ತಿಳಿಸಿದರು.

ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಹೈನುಗಾರರಾದ ಪ್ರವೀಣ್ ರವರು ನೂತನವಾಗಿ ಅಜೋಲಾ ಬೆಳೆಯಲು ಪ್ರಾರಂಭಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಹೈನುಗಾರರು ಅಜೋಲಾ ಬೆಳೆಯಲು ನಮ್ಮ ಒಕ್ಕೂಟದಿಂದ ಮೂರುಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಕೃಷಿ ಅಧಿಕಾರಿ ಕರಿಸಿದ್ದ ರವರು ಮಾತನಾಡಿ ಹೆಚ್ಚಿನ ಪ್ರೋಟೀನ್ ಅಂಶವಿರುವ ಅಜೋಲವನ್ನು ರಾಸುಗಳಿಗೆ ನೀಡುವುದರಿಂದ ಉತ್ತಮ ಆಹಾರವಾಗುತ್ತದೆ ರಾಸುಗಳಿಗೆ ನೀಡುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ವ್ಯಯಕ್ತಿಕವಾಗಿ ಬೆಳೆದುಕೊಂಡಾಗ ಹೈನುಗಾರಿಕೆಯಲ್ಲಿ ಲಾಭಾಂಶವವು ಹೆಚ್ಚಾಗುತ್ತದೆ ಎಂದರು.
ರೈತ ಪ್ರವೀಣ್ ರವರು ನೂತನವಾಗಿ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಿದ್ದು ಅದನ್ನು ವೀಕ್ಷಣೆ ಮಾಡಿ ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ವಿ.ಶ್ರೀನಿವಾಸ್ , ಕೆ.ನಾರಾಯಣಸ್ವಾಮಿ, ಎನ್.ಜಿ.ಜಯಚಂದ್ರ , ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಸತೀಶ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವಿನಯ್ ಕುಮಾರ್, ನಿರ್ದೇಶಕರಾದ ಎಂಕೆ.ರಾಜಶೇಖರ್,ಎಂ. ಮನೋಹರ್ ,ಗ್ರಾಮದವರಾದ ಜಯರಾಂ,ಶ್ರೀನಿವಾಸ್, ಪ್ರವೀಣ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now