ಫೆ.21 ರಂದು ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ವಿಜಯ ದರ್ಪಣ ನ್ಯೂಸ್…..

ಫೆ.21 ರಂದು ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ ಫೆ.02:
ರಾಸಾಯನಿಕ ಸೋರಿಕೆ ದುರಂತಗಳನ್ನು ತಡೆಗಟ್ಟುವುದು ಹಾಗೂ ವಿಪತ್ತು ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ಫೆಬ್ರವರಿ 21 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ‘ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ’ ಆಯೋಜಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹಾಗೂ ಗ್ಯೇಲ್ ಗ್ಯಾಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ ಆಫ್ ಸೈಟ್ ಅಣುಕು ಪ್ರದರ್ಶನ ನಡೆಸಲಾಗುತ್ತಿದೆ.

ಇದರ ಅಂಗವಾಗಿ ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಣುಕು ಪ್ರದರ್ಶನದ ನಡೆಸಲು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ತರಬೇತಿ ಮತ್ತು ಟೇಬಲ್ ಟಾಪ್ ಎಕ್ಸರ್ಸೈಜ್ ಸಭೆ ಆಯೋಜಿಸಲಾಗಿದೆ.

ಸಭೆಯಲ್ಲಿ ಅಣುಕು ಪ್ರದರ್ಶನಕ್ಕೆ ತುರ್ತು ಆರೋಗ್ಯ ಸೇವೆಗಳು, ಅಗ್ನಿ ಶಾಮಕದಳ, ಟ್ರಾಫಿಕ್, ಸಂವಹನ, ಸಾರಿಗೆ(ವಾಹನ ದಟ್ಟಣೆ)ನಿಯಂತ್ರಣ, ಜನ-ಜಾನುವಾರುಗಳ ಸ್ಥಳಾಂತರ, ಊಟೋಪಚಾರ, ಪುನರ್ವಸತಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಣುಕು ಪ್ರದರ್ಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತಿಳಿಸಲಾಯಿತು.

ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು, ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಅಣುಕು ಪ್ರದರ್ಶನ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಏರ್ಪಡಿಸಲಾಗುತ್ತದೆ.

ಸಭೆಯಲ್ಲಿ ನೆಲಮಂಗಲ ವ್ಯಾಪ್ತಿಯ ಕಾರ್ಖಾನೆಗಳ ಉಪನಿರ್ದೇಶಕ ತಿಪ್ಪೇಸ್ವಾಮಿ, ಹೊಸಕೋಟೆ ವ್ಯಾಪ್ತಿಯ ಕಾರ್ಖಾನೆಗಳ ಉಪನಿರ್ದೇಶಕರಾದ ನರಸಿಂಹ ಮೂರ್ತಿ, ವಿಪತ್ತು ನಿರ್ವಹಣಾ ಪರಿಣಿತೆ ಸ್ಮಿತಾ, ಎನ್.ಡಿ.ಆರ್.ಎಫ್, ಅಗ್ನಿಶಾಮಕ, ಪೊಲೀಸ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

###########################₹#####₹####

ಹರಿನಾಮ ಸಂಕೀರ್ತನೆ

ಬೆಂಗಳೂರು : ಪದ್ಮನಾಭನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 5, ಗುರುವಾರ ಸಂಜೆ 6-45ಕ್ಕೆ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಇವರಿಂದ “ಹರಿನಾಮ ಸಂಕೀರ್ತನೆ”. ವಾದ್ಯ ಸಹಕಾರ : ಶ್ರೀ ಬಿ.ಆರ್. ಪ್ರಕಾಶ್ (ಕೀಬೋರ್ಡ್), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ). ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಆರ್.ಕೆ. ಲೇಔಟ್, ಪದ್ಮನಾಭನಗರ, ಬೆಂಗಳೂರು-560070
ಸರ್ವರಿಗೂ ಆತ್ಮೀಯ ಸುಸ್ವಾಗತ

“ಭರತನಾಟ್ಯ ಪ್ರದರ್ಶನ”

ಬೆಂಗಳೂರು: ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಫೆಬ್ರವರಿ 5, ಗುರುವಾರ ಸಂಜೆ 5-15ಕ್ಕೆ ವಿದುಷಿ ಮೀನಾಕ್ಷಿ ಪ್ರಸಾದ್ ನಿರ್ದೇಶನದಲ್ಲಿ ಭಾವ ನೂಪುರ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41

“ಹರಿದಾಸ ಮಂಜರಿ”

ಬೆಂಗಳೂರಿನ ಪೂರ್ಣಪ್ರಜ್ಞ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 5, ಗುರುವಾರ ಸಂಜೆ 6-00ಕ್ಕೆ ಶ್ರೀಮತಿ ಸಂಗೀತಾ ಬಾಲು ಮತ್ತು ಸಂಗಡಿಗರಿಂದ “ಹರಿದಾಸ ಮಂಜರಿ” ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪೂರ್ಣಪ್ರಜ್ಞ ಬಡಾವಣೆ, ಬೆಂಗಳೂರು

ದಾಸ ಪದಗಳ ಗಾಯನ”

ಬೆಂಗಳೂರು:ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 5, ಗುರುವಾರ ಸಂಜೆ 7~00ಕ್ಕೆ ಕು|| ಅದಿತಿ ಪ್ರಹ್ಲಾದ್ ಮತ್ತು ಸಂಗಡಿಗರಿಂದ “ದಾಸರ ಪದಗಳ ಗಾಯನ”. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು.