ಪತ್ರಕರ್ತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರ: ರಾಜು ತಳವಾರ 

ವಿಜಯ ದರ್ಪಣ ನ್ಯೂಸ್…….

ಪತ್ರಕರ್ತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರ: ರಾಜು ತಳವಾರ

ವಿಕ ಸುದ್ದಿಲೋಕ ರಾಯಬಾಗ ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಉನ್ನತ ಗುರಿಯತ್ತ ಸಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ರಾಜು ತಳವಾರ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ತಾಲೂಕು ಮಾತನಾಡಿದ ಅವರು, “ಪತ್ರಕರ್ತರ ಮಕ್ಕಳ ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ, ಗಮನಕ್ಕೆ ತಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ, ಉಜ್ವಲ ಭವಿಷ್ಯಕ್ಕೆ ಅವರ ಬೆಂಬಲಿಸಲಾಗುವುದು,” ಎಂದರು.

“ಪಾಲಬಾವಿ ಗ್ರಾಮದ ಪತ್ರಕರ್ತ ಶಿವಾಜಿ ಮೇತ್ರಿಯವರ ಪುತ್ರ ಸಿದ್ದಾರೂಢ ಅವರು ಕಳೆದ ನವೆಂಬರ್ ತಿಂಗಳಲ್ಲಿ ರಾಣಿ ಚನ್ನಮ್ಮ ವಿವಿಯಲ್ಲಿ ನಡೆದ ಬಿಎ ಪದವಿ ಪರೀಕ್ಷೆಯಲ್ಲಿ 6 ನೇ ಯಾಂಕ್ ಪಡೆದಿದ್ದು, ಅವರಿಗೆ ತಾಲೂಕು ಸಂಘದಿಂದ ಪ್ರೋತ್ಸಾಹ ನೀಡಲಾಗುವುದು,” ಎಂದರು.

ಹಿರಿಯ ಪತ್ರಕರ್ತ ಯಲ್ಲಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಜಿಲ್ಲಾ ಉಪಾಧ್ಯಕ್ಷ ಕುಂತಿನಾಥ ಕಲಮನಿ, ತಾನಾಜಿ ಮೊರಮ್‌ರ, ಭೀಮಪ್ಪ ಖಿಚಡೆ, ಗುರುಸಿದ್ದ ಪೂಜಾರಿ, ಅಬ್ಬಾಸ್‌ ಲತೀಫನವರ, ಶ್ರೀಮಂತ ಘಟನಟ್ಟಿ ಬಸವರಾಜ ಅರಕೇರಿ, ಸುಧೀರ ಕಳ್ಳಿ, ಸಂಭಾಜಿ ಚವ್ಹಾಣ ಇನ್ನಿತರರಿದ್ದರು.