ಜಿಲ್ಲಾಡಳಿತ ಭವನದಲ್ಲಿ ಶ್ರೀ ಸಂತ ಸೇವಾಲಾಲ್ ಅವರ ಜಯಂತಿ ಆಚರಣೆ
ವಿಜಯ ದರ್ಪಣ ನ್ಯೂಸ್….
ಜಿಲ್ಲಾಡಳಿತ ಭವನದಲ್ಲಿ ಶ್ರೀ ಸಂತ ಸೇವಾಲಾಲ್ ಅವರ ಜಯಂತಿ ಆಚರಣೆ

ಬಿಜಿಎಸ್ ನಗರ ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆ.16 :
ಸಂತ ಸೇವಾಲಾಲ್ ಒಬ್ಬ ಪವಾಡ ಪುರುಷ. ಬಂಜಾರ ಸಮುದಾಯದ ಸಾಧಕರು. ಸಂತ ಸೇವಾಲಾಲ್ ಮಹಾರಾಜರು ಪ್ರತಿ ಬಂಜಾರ ಕುಟುಂಬಂದ ಪೂಜ್ಯಾ ಸಂಕೇತ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಶ್ರೀ ಸಂತ ಸೇವಾಲಾಲ್ ಅವರನ್ನ ಸ್ಮರಿಸಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ, ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಿಲ್ಲಿಸಿ ಮಾತನಾಡಿ.
ಸಂತ ಸೇವಾಲಾಲ್ ಅವರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಗಡ್- ಸೊರಗೊಂಡನಕೊಪ್ಪದಲ್ಲಿ ಜನಿಸಿದರು. ಸಂತ ಸೇವಾಲಾಲ್ ಅವರು ಒಬ್ಬ ಪವಾಡ ಪುರುಷ. ಬಂಜಾರ ಸಮುದಾಯದ ಸಾಧಕರು ಎಂದು ಅವರ ಕಾರ್ಯಗಳನ್ನ ಸ್ಮರಿಸಿದರು. ಇನ್ನು ಸಂತ ಸೇವಾಲಾಲ್ ಮಹಾರಾಜರು ಪ್ರತಿ ಬಂಜಾರ ಕುಟುಂಬದ ಪೂಜ್ಯಾ ಸಂಕೇತ ವಾಗಿದ್ದಾರೆ. ಫೆಬ್ರವರಿ 15 ರಂದು ಅತ್ಯಂತ ವಿಜೃಂಭಣೆಯಿಂದೆ ಎಲ್ಲಾ ರಾಜ್ಯಗಳಲ್ಲೂ ಸಂತ ಸೇವಾಲಾಲ್ ಅವರ ಜಯಂತಿಯನ್ನು ಆಚರಿಸುತ್ತಾರೆ. ಸಂತ ಸೇವಾಲಾಲ್ ಅವರ ಸಮಾಧಿ ಸ್ಥಳ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹ್ರಾದೇವಿಯಲ್ಲಿದ್ದು, ಇದನ್ನು “ಬಂಜಾರ ಕಾಶಿ” ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿನ ಅಸಮಾನತೆ, ಅನಿಷ್ಟ ಪದ್ಧತಿ, ಅನಾಚಾರ, ದೌರ್ಜನ್ಯಗಳನ್ನು ಹೋಗಲಾಡಿಸಲು ವಿವಿಧೆಡೆ ಸುತ್ತಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಇದೇ ವೇಳೆ ಬಂಜಾರ ಸಮುದಾಯದ ಮುಖಂಡರು ಮನವಿಗೆ ಸ್ಪಂದಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಯುವಸಬಲೀಕರನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಶ್ರೀಕಂಠ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ, ಬಂಜಾರ ಸಮುದಾಯದ ಮುಖಂಡರು ಸಿಬ್ಬಂದಿ ಉಪಸ್ಥಿತರಿದ್ದರು.
&&&&&&&&&&&&&&&&&&&&&&&&&
ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಶಿವರಾತ್ರಿ ಮಹೋತ್ಸವ

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮಹಾಶಿವರಾತ್ರಿ ಪ್ರಯುಕ್ತ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಗಾಯಕ ಶ್ರೀ ಕೆ.ಪಿ. ಶಿಶಿರ್ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಮತ್ತು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ಇವರ ಗಾಯನಕ್ಕೆ ಕು|| ಸಂಸ್ಕೃತಿ ಬಾಣಾವರ ಹಾರ್ಮೋನಿಯಂ ವಾದನದಲ್ಲಿ ಹಾಗೂ ಶ್ರೀ ಅನಿರುದ್ಧ ಮೃದಂಗ ವಾದನದಲ್ಲಿ ಸಾಥ್ ನೀಡಿದರು.
ಮೆಮೆಂಟೋ ಶ್ರೀ ಕೆ.ಪಿ. ಶ್ರೀಧರ್ ಕಲಾವಿದರನ್ನು ಸನ್ಮಾನಿಸಿದರು. ಹರಿದಾಸ ಸಂಪದ ಟ್ರಸ್ಟಿನ ಗೌರವ ಕಾರ್ಯದರ್ಶಿ ಶ್ರೀ ಎಂ.ವಿ. ಮಧುಸೂದನ್ ವಂದನಾರ್ಪಣೆ ಮಾಡಿದರು. ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸೋಸಲೆ ಪ್ರಕಾಶ್ ಅವರು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.
