ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗಾಂಧೀಜಿ ಹೆಸರು ಉಳಿವಿಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ
ವಿಜಯ ದರ್ಪಣ ನ್ಯೂಸ್…..
ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗಾಂಧೀಜಿ ಹೆಸರು ಉಳಿವಿಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ
ತಾಂಡವಪುರ ಫೆಬ್ರವರಿ 19: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮರಳಿ ತರುವಂತೆ ದೇಶದೆಲ್ಲೆಡೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಹೋರಾಟವನ್ನು ಬೆಂಬಲಿಸಿ ಚಾಮುಂಡೇಶ್ವರಿ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿದರು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ನೂರಾರು ಮಂದಿ ಭಾಗವಹಿಸಿ ಬಿಜೆಪಿ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ನರೇಗಾ ಯೋಜನೆಯನ್ನು “ವೀಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಎಂದು ಮರುನಾಮಕರಣ ಮಾಡಿರುವ ಬಿಜೆಪಿ ನಡೆಯನ್ನು ಖಂಡಿಸಿದರು.
ಅಲ್ಲದೆ ಕೇಂದ್ರ ಬಿಜೆಪಿ ಗ್ರಾಮೀಣ ಜನರ ಕೂಲಿಯನ್ನಷ್ಟೇ ಅಲ್ಲದೆ ಬದುಕನ್ನು ಕಸಿದುಕೊಳ್ಳಲು ಇಂತಹ ತೀರ್ಮಾನ ಕೈಗೊಂಡಿದೆ. ನರೇಗಾ ಯೋಜನೆ ಬದಲಾವಣೆ ಅವೈಜ್ಞಾನಿಕವಾಗಿದ್ದು, ಈ ಕೂಡಲೇ ಮತ್ತೆ ನರೇಗಾ ಮರುಸ್ಥಾಪಿಸಬೇಕು. ಆ ಮೂಲಕ ಗ್ರಾಮೀಣ ಜನರ ಹಿತಾಸಕ್ತಿ ಕಾಪಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ೨೦೦೫ರಲ್ಲಿ ಮನ್ ಮೋಹನ್ ಸಿಂಗ್ ನೇತೃತ್ವದಲ್ಲಿ ನರೇಗಾ ಯೋಜನೆಯನ್ನು ಜಾರಿಗೆ ತಂದಿತು. ಈಗಿನ ಮೋದಿಯವರ ಸರ್ಕಾರ ಅದನ್ನು ತೆಗೆದು ಪಂಚಾಯಿತಿ ಮೂಲಕ ಬಡಜನರಿಗೆ ತಲುಪುತ್ತಿದ್ದ ಅನುದಾನವನ್ನು ತಡೆ ಹಿಡಿದು, ಮಹಾತ್ಮರನ್ನು ಕೊಲೆ ಮಾಡಿದವರ ಹೆಸರನ್ನು ಇಡುವ ಮೂಲಕ ದೇಶದ ಘನತೆಗೆ ಚ್ಯುತಿ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಅರುಣ್ ಕುಮಾರ್ ಮಾತನಾಡಿ ದೇಶದಾದ್ಯಂತ ಕಾಂಗ್ರೆಸ್ ಬಡಜನರಿಗೆ ಸಿಗುತ್ತಿದ್ದ ಕೂಲಿಗಾಗಿ ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ಇಂದು ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಹೋರಾಟ ಮಾಡುತ್ತಿದ್ದೇವೆ. ಇದೆಲವನ್ನು ಮನಗಂಡು ಬಿಜೆಪಿ ಕೇಂದ್ರ ಸರ್ಕಾರ ತನ್ನ ಮೊಂಡುತನ ಬಿಟ್ಟು ಮನ್ರೇಗಾ ಯೋಜನೆಯನ್ನು ಮರುಳಿ ಜಾರಿಗೊಳಿಸಬೇಕು. ಅದನ್ನು ಜಾರಿಗೊಳಿಸುವವರೆಗೂ ಕಾಂಗ್ರೆಸ್ ತನ್ನ ಹೋರಾಟ ನಿರಂತರವಾಗಿ ನಡೆಸಲಿದೆ ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ಕೇಂದ್ರದ ವಿರುದ್ಧ ಕಿಡಿಕಾರಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಅರುಣ್ ಕುಮಾರ್, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಚಿಕ್ಕಣ್ಣ, ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಜೆ.ಸತೀಶ್, ಬಿ.ಗುರುಸ್ವಾಮಿ, ಜಿಪಂ ಮಾಜಿ ಸದಸ್ಯ ಕೂರ್ಗಳ್ಳಿ ಮಹದೇವ್, ಲೇಖಾ ವೆಂಕಟೇಶ್, ಜವರಪ್ಪ, ತಾಪಂ ಮಾಜಿ ಸದಸ್ಯ ಸಾಲುಂಡಿ ಸಿದ್ದರಾಮೇಗೌಡ, ಸಿದ್ದಲಿಂಗಪುರ ಸೋಮಣ್ಣ, ನಾಗನಹಳ್ಳಿ ಕೆ.ಊಮಾಶಂಕರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಎಂ ಸಿ ಹುಂಡಿ ಶಿವಪ್ರಸಾದ್ ಹಂಚ್ಯಾ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಸಿ.ಕುಮಾರಸ್ವಾಮಿ, ಕೆಪಿಸಿಸಿ ಬಸವರಾಜು ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು
