ಸಂತ ಕವಿ ಸರ್ವಜ್ಞ ನಮ್ಮ ಕನ್ನಡದ ಆಸ್ತಿ : ಶ್ರೀಕಂಠ

ವಿಜಯ ದರ್ಪಣ ನ್ಯೂಸ್….

ಸಂತ ಕವಿ ಸರ್ವಜ್ಞ ನಮ್ಮ ಕನ್ನಡದ ಆಸ್ತಿ : ಶ್ರೀಕಂಠ

ತಾಂಡವಪುರ ಫೆಬ್ರುವರಿ 20 ಸಂತ ಕವಿ ಸರ್ವಜ್ಞ ಜಯಂತಿಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಆಚರಿಸಲಾಯಿತು

ಮೈಸೂರು ನಂಜನಗೂಡು ಊಟಿ ರಸ್ತೆ ಕಪಿ ನದಿ ಬಳಿ ಇರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕುಂಬಾರರ ಜನಾಂಗದ ತಾಲೂಕು ಅಧ್ಯಕ್ಷ ಮರಿ ಶೆಟ್ಟರು ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು ಇದೇ ಸಂದರ್ಭದಲ್ಲಿ ಎಲ್ಲ ಯುವಕರು ಮುಖಂಡರು ರೈತ ಮುಖಂಡರು ಸಂತ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠ ಮಾತನಾಡಿ ಸಂತ ಕವಿ ಸರ್ವಜ್ಞ ಅವರು ಕನ್ನಡದ ಆಸ್ತಿ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ನಮ್ಮ ಹಿಂದಿನ ಪೀಳಿಗೆಗಳು ತಿಳಿದುಕೊಳ್ಳಬೇಕು ಅವರು ತೋರಿಸಿಕೊಟ್ಟಂತಹ ಮಾರ್ಗದಲ್ಲಿ ಇಂದು ನಮ್ಮ ಜೀವನಗಳ ನಡೆಸಬೇಕು ಮತ್ತು ಹಿಂದಿನ ಮಕ್ಕಳು ಸಂತ ಕವಿ ಸರ್ವಜ್ಞ ಅವರ ಬಗ್ಗೆ ಅತಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು ಅವರ ಸ್ಪೂರ್ತಿ ನಿಮ್ಮೆಲ್ಲರಿಗೂ ದಾರಿದೀಪವಾಗಬೇಕು ಸರ್ವಜ್ಞರ ವಚನಗಳನ್ನು ಯುವ ಜನತೆಗೆ ತಲುಪಿಸುವ ಕೆಲಸವಾಗ ಬೇಕಾಗಿದೆ ಎಂದು ತಿಳಿಸಿದರು

ತಾಲೂಕು ಕುಂಬಾರ ಸಂಘದ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ಸರ್ವಜ್ಞ ಎಂದರೆ ಸರ್ವ ವನ್ನು ತಿಳಿದವನು ಎಂದರ್ಥ ಅವರು ಹುಟ್ಟುತ್ತಲೇ ಎಲ್ಲವನ್ನು ತಿಳಿದವರಲ್ಲ ಪ್ರತಿಯೊಬ್ಬರಿಂದ ಒಂದೊಂದು ಕಲಿತು ಸರ್ವಜ್ಞರಾದವರು ತಮ್ಮ ತತ್ವ ಆದರ್ಶ ಸಿದ್ಧಾಂತಗಳ ಮೂಲಕ ಸಮಾಜವನ್ನು ತಿದ್ದಿದವರು ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು

ಇದೇ ಸಂದರ್ಭದಲ್ಲಿ ಎಲ್ಲರಿಗೂ ತಿಂಡಿ ಮತ್ತು ಸಿಹಿ ಹಂಚಿಕೆ ಮಾಡಿದರು ಸಂದರ್ಭದಲ್ಲಿ ಕುಂಬಾರ ಜನಾಂಗದ ತಾಲೂಕು ಸಂಘದ ಅಧ್ಯಕ್ಷ ಮರಿ ಶೆಟ್ರು ಉಪಾಧ್ಯಕ್ಷ ಪ್ರಕಾಶ್ ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಚಂದ್ರು ಮತ್ತು ಸಿದ್ದರಾಜು ಶಿವಪ್ಪ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರು ರವಿ,ಆಟೋಮಂಜು ಶಿವಣ್ಣ,ಬಸವರಾಜು, ಸಿದ್ದರಾಜು,ಸಿದ್ದಯ್ಯ, ಕರಿಯಯ್ಯ, ಬಿ.ಮಂಜು ,ಮಾದುಸ್ವಾಮಿ,ಸಂಜಯಶರ್ಮ,ವಿನಯ್ ಕುಮಾರ್,ಗೋಪಿ, . ಕಾರ್ಯದರ್ಶಿ ಹೆಚ್ಎನ್ ಪ್ರಕಾಶ್. ಸಹ ಕಾರ್ಯದರ್ಶಿ ಈ ಶಿವಣ್ಣ. ಸಂಘಟನೆ ಕಾರ್ಯದರ್ಶಿ ಎಸ್ ಕುಮಾರ್. ನಿರ್ದೇಶಕರು ನಿಂಗರಾಜು. ರಾಮ ಶೆಟ್ಟಿ. ವೆಂಕಟೇಶ್. ಬಸವ ಶೆಟ್ಟಿ. ಹಾಗೂ ಸಮಾಜದ ಮುಖಂಡರು. ಪಿ ಶಿವಕುಮಾರ್. ಸಂತೋಷ್. ನಂದೀಶ್. ಬೈರವಸ್ವಾಮಿ. ಶಿವಕುಮಾರ್. ರವಿಶಂಕರ್. ಮಂಜು. ಮಹದೇವಸ್ವಾಮಿ.
.ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಕರಿಯ. ಉಪಾಧ್ಯಕ್ಷರು ಸಿದ್ದರಾಜು. ಮಾಜಿ ಸದಸ್ಯರು ಮಂಜು. ಸಿದ್ದೇಗೌಡ. ಬಾಬು ಜಗಜೀವನ ರಾಮ್ ಅಧ್ಯಕ್ಷ ಶಿವರಾಜ್. ಹಾಲಿನ ಡೈರಿ ಮಾಜಿ ಅಧ್ಯಕ್ಷ ನಂದಕುಮಾರ್. ಮಹೇಶ್ ಇದ್ದರು