--Ads--

ಬೆಂಗಳೂರಿನಲ್ಲಿ ಕನ್ನಡ ಭಾಷೆ ಜೀವಂತವಾಗಿದೆ ಎಂದರೆ ಕನ್ನಡ ಚಳುವಳಿಗಾರರರು ಕಾರಣ:ಎಲ್.ಹನುಮಂತಯ್ಯ

On: March 31, 2026 5:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕನ್ನಡ ನುಡಿ ಯೋಧ ಬಾ.ಹ.ಉಪೇಂದ್ರ ಮಾಸದ ನೆನಪು ಕಾರ್ಯಕ್ರಮ

ಬೆಂಗಳೂರಿನಲ್ಲಿ ಕನ್ನಡ ಭಾಷೆ ಜೀವಂತವಾಗಿದೆ ಎಂದರೆ ಕನ್ನಡ ಚಳುವಳಿಗಾರರರು ಕಾರಣ:ಎಲ್ ಹನುಮಂತಯ್ಯ

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು: ಅಕ್ಕಮಹಾದೇವಿ ಸಭಾಂಗಣದಲ್ಲಿ ಕನ್ನಡ ಗೆಳಯರ ಬಳಗದ ವತಿಯಿಂದ ಕನ್ನಡ ನುಡಿ ಯೋಧ ಬಾ.ಹ.ಉಪೇಂದ್ರ ಮಾಸದ ನೆನಪು ಮತ್ತು ಉಪ್ರೇಂದ್ರ ನೆನಪಿನ ಕಾಣಿಕೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ನಾಡೋಜ, ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪರವರು, ರಾಜ್ಯಸಭಾ ಮಾಜಿಸದಸ್ಯ ಎಲ್.ಹನುಮಂತಯ್ಯರವರು, ಡಾ||.ಜಿ.ರಾಮಕೃಷ್ಣ, ಡಾ.ವಿಜಯಾ, ಡಾ.ಶೇಷಶಾಸ್ತ್ರಿ, ಬಾ.ಹ.ರಮಾಕುಮಾರಿ, ಕನ್ನಡಪರ ಹೋರಾಟಗಾರರಾದ ವ.ಚ.ಚನ್ನೇಗೌಡರು, ರಾ.ನಂ.ಚಂದ್ರಶೇಖರ್ ರವರು ಬಾ.ಹ.ಉಪ್ರೇಂದ್ರರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಚಾಲನೆ ನೀಡಿದರು.

ನಾಡೋಜ ಗೊ.ರು.ಚನ್ನಬಸಪ್ಪ ರವರು ಮಾತನಾಡಿ ಬಾ.ಹ.ಉಪೇಂದ್ರರವರು ಕನ್ನಡದ ಶೇಷ್ಠ ಹೋರಾಟಗಾರರು. ಅವರನ್ನ ಕಳೆದುಕೊಂಡಿರುವುದರಿಂದ ಸ್ವಾಭಿಮಾನ, ಪ್ರಾಮಾಣಿಕತೆ ಅವರ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ಬಾ.ಹ.ಉಪೇಂದ್ರ ಆಗಲಿಕೆ ತುಂಬ ನೋವಿನ ಸಂಗತಿ ಅವರು ಕುಟುಂಬದ ಜೊತೆಯಲ್ಲಿ ನಾವಿದ್ದೇವೆ ಎಂದು ಹೇಳಿದರು.

ಎಲ್.ಹನುಮಂತಯ್ಯರವರು ಮಾತನಾಡಿ ಕನ್ನಡ ಭಾಷೆಗೆ ಹನುಮಂತನ ನಿಷ್ಠೆ, ಬುದ್ದನಂತೆ ತ್ಯಾಗದ ಮನೋಭಾವನೆವುಳ್ಳವುರು ಬಾ.ಹ.ಉಪೇಂದ್ರರವರು. ಡಿಜಿಎಂ ಅಂತಹ ಉನ್ನತ ಹುದ್ದೆಯಲ್ಲಿ ಇದ್ದರು ಕನ್ನಡ ಭಾಷೆಗಾಗಿ ಸಾಮಾನ್ಯ ಕಾರ್ಯಕರ್ತನಂತೆ ಸೇವೆ ಮಾಡುತ್ತಿದ್ದರು.

ಕೇಂದ್ರ ಸರ್ಕಾರದ ಹೆಚ್.ಎ.ಎಲ್.ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಕನ್ನಡದಲ್ಲಿಯೆ ಸಹಿ ಮಾಡುತ್ತಿದ್ದರು, ಕನ್ನಡ ಭಾಷೆ ಬಗ್ಗೆ ಅಪಾರ ನಿಷ್ಟೆ ಹೊಂದಿದ್ದರು.

ಕಥೆ, ಕಾದಂಬರಿ ಬರೆಯುವವರು ಸಂಖ್ಯೆ ಹೆಚ್ಚಿದ್ದಾರೆ, ಅದರೆ ತಂತ್ರಜ್ಞಾನ ಕುರಿತು ಬರೆಯುವವರು ಸಂಖ್ಯೆ ಕಡಿಮೆ ಇದೆ ಬಾ.ಹ.ಉಪೇಂದ್ರರವರ ತಂತ್ರಜ್ಞಾನ ಕುರಿತು ಸಾಕಷ್ಟು ಲೇಖನಗಳು ಬರೆದಿದ್ದಾರೆ.

ಗಾಯಕ ಭೀಮಸೇನಾಜೋಷಿ ಕುರಿತು ಬಾ.ಹ.ಉಪೇಂದ್ರರವರು ಅದ್ಬುತ ಲೇಖನ ಬರೆದಿದ್ದರು ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದರು. ಕನ್ನಡ ಭಾಷೆ ಬೆಂಗಳೂರಿನಲ್ಲಿ ಜೀವಂತವಾಗಿದೆ ಎಂದರೆ ಕನ್ನಡ ಚಳುವಳಿಗಾರರು ಕಾರಣ ಎಂದು ಹೇಳಿದರು.

ವ.ಚ.ಚನ್ನೇಗೌಡರವರು ಮಾತನಾಡಿ ಕನ್ನಡ ಕಾಯಕ ಮಾಡುವವರಿಗೆ ಬಾ.ಹ.ಉಪೇಂದ್ರರವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ. ಕನ್ನಡ ಶಕ್ತಿ ಕೇಂದ್ರದ ಪ್ರತಿ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಕನ್ನಡ ಕಾರ್ಯಕ್ರಮದಲ್ಲಿ ಸರಳವಾಗಿ ಕನ್ನಡದ ಕೆಲಸ ಮಾಡುತ್ತಿದ್ದರು. ಅಜಾತಶತ್ರುವಾಗಿದ್ದರು.

ಉಪೇಂದ್ರರವರು ಕನ್ನಡ ಪ್ರೇಮಿ, ನಾಡನಿಷ್ಠೆ, ಜ್ಞಾನದ ಗಣಿಯಾಗಿದ್ದರು. ಕನ್ನಡ ಭಾಷೆ ಅಪಾರ ಜ್ಞಾನವುಳ್ಳವರು. ಸಮಾಜ ಸೇವೆಯಲ್ಲಿಯೂ ಸಹ ನಿರತರಾಗಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ನೇತ್ರಾದಾನ ಮಾಡಿ, ಸಾವಿನಲ್ಲಿಯೂ ಸಾರ್ಥಕತೆ ಮೆರೆದರು ಎಂದು ಹೇಳಿದರು.

*ಳರಾ.ನಂ.ಚಂದ್ರಶೇಖರ್ ರವರು ಮಾತನಾಡಿ ಉಪೇಂದ್ರರವರು ಕನ್ನಡದ ನುಡಿಯೋಧ ಅವರ ಜೊತೆಯಲ್ಲಿ 40ವರ್ಷಗಳ ಕಾಲ ನಿಕಟ ಸ್ನೇಹ ಸಂಭಂದವಿತ್ತು.

ಕನ್ನಡ ಪರ ಹೋರಾಟದಲ್ಲಿ ಇಂಜನಿಯರ್ ಆಗಿರುವ ಉಪೇಂದ್ರರವರು ತೊಡಗಿಸಿಕೊಂಡಿದ್ದರು. ಉಪೇಂದ್ರರವರ ಸರಳತೆ, ಸ್ನೇಹಮಯಿಯಾಗಿದ್ದರು, ಅವರ ಸ್ಮರಣೆಯಲ್ಲಿ ಪ್ರತಿವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಲೇಖಕಿ ಡಾ.ವಿಜಯಾರವರು ಮಾತನಾಡಿ ಕನ್ನಡ ಭಾಷೆಗೆ ನಿಜವಾದ ನುಡಿಯೋಧರಾಗಿದ್ದರು ಉಪೇಂದ್ರರವರು. ಅದ್ಬುತವಾದ ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಇಂಗ್ಲೀಷ್ ನ ಹಲವಾರು ಶಬ್ದಗಳಿಗೆ ಕನ್ನಡ ಭಾಷೆಗೆ ಅನುಕರಣೆ ಮಾಡಿ ವಿಶೇಷ ರೂಪ ನೀಡಿದ್ದರು, ಎಲ್ಲರನ್ನ ಪ್ರೀತಿಸುವ ಗುಣವಿತ್ತು ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now