--Ads--

ಹಾರೋಹಳ್ಳಿ ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ: ಶಾಸಕ ಜಿಟಿ ದೇವೇಗೌಡ

On: April 15, 2026 1:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಹಾರೋಹಳ್ಳಿ ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ: ಶಾಸಕ ಜಿಟಿ ದೇವೇಗೌಡ 

ತಾಂಡವಪುರ ಏಪ್ರಿಲ್ 15 ಡಾಕ್ಟರ್.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಸಮುದಾಯ ಭವನಗಳನ್ನು ಗ್ರಾಂಥಾಲಯಗಳಾಗಿ ಪರಿವರ್ತನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿರುವ ಸಮುದಾಯ ಭವನಗಳನ್ನು ಗ್ರಂಥಾಲಯಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರ್ ತಾಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ
ಹಾರೋಹಳ್ಳಿ(ಜ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅರಿವು ಕೇಂದ್ರವನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಉದ್ಘಾಟನೆಯಾದ ಗ್ರಂಥಾಲಯದ ಕಟ್ಟಡವು ೨೦೧೮ರಲ್ಲೇ ನಿರ್ಮಾಣವಾಗಿ ಅಂಬೇಡ್ಕರ್ ಸಮುದಾಯ ಭವನವಾಗಿತ್ತು. ಸದರಿ ಸಮುದಾಯ ಭವನವನ್ನು ಸಾರ್ವಜನಿಕರು ಯಾವುದೇ ಕಾರ್ಯಕ್ಕೂ ಉಪಯೋಗಿಸದೇ ಇದ್ದುದ್ದರಿಂದ ಒಂದು ರೀತಿಯ ನಿರ್ಬಳಕೆಯ ಕಟ್ಟಡವಾಗಿತ್ತು. ಸದರಿ ಕಟ್ಟಡವನ್ನು ಒಂದು ಉತ್ತಮವಾದ ಗ್ರಂಥಾಲಯವಾಗಿ ಪರಿವರ್ತಿಸಿ ಬಿ.ಆರ್.ಅಂಬೇಡ್ಕರ್ ಅರಿವು ಕೇಂದ್ರವೆಂದು ನಾಮಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿರುವುದು ಖುಷಿಯ ವಿಷಯವಾಗಿದೆ ಎಂದರು.
ಡಿಜಿಟಲ್ ವಿಭಾಗ, ಬೀಕನ್ ವಿಭಾಗ, ರೈತರ ವಿಭಾಗ, ಮಹಿಳಾ ವಿಭಾಗ ಮತ್ತು ಮಕ್ಕಳ ವಿಭಾಗವೆಂದು ೫ ಭಾಗಗಳಾಗಿ ವಿಭಾಗಿಸಲಾಗಿದೆ. ಅಲ್ಲದೆ ಅಂತರ್ಜಾಲದ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಪೋಲೀಸ್ ಇಲಾಖೆಗೆ ಸೇರಿದ ಇದೇ ಗ್ರಾಮದ ಬಳಿ ಶುದ್ದ ಕುಡಿಯುವ ನೀರಿನ ಟ್ಯಾಂಕ್ ಅನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಕುಮಾರ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಜಯರಾಮ್, ನಿಕಟ ಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಜ್ಯೋತಿ, ಮಾಜಿ ಉಪಾಧ್ಯಕ್ಷ ಮೂರ್ತಿ, ಸದಸ್ಯರಾದ ನಟರಾಜು, ಚಲುವರಾಜು, ಶ್ರೀಧರ್, ಮಂಜು, ರಮೇಶ, ಮಂಜುನಾಥ, ಸುಶೀಲ, ಗೌರಮ್ಮ, ದೇವಮ್ಮ, ಮಹದೇವಮ್ಮ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಕಳಲೆ ಗಣೇಶ್, ಕಾರ್ಯದರ್ಶಿ ಪುಟ್ಟೇಗೌಡ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಾಜೇಶ್, ಮುಖಂಡರಾದ ಚಂದ್ರು, ಮಲ್ಲಿಕಾರ್ಜುನಪ್ಪ, ಮುದ್ದುಮಹದೇವಯ್ಯ, ಚಲುವರಾಜು, ಸಣ್ಣಸ್ವಾಮಿ, ಮಹದೇವಪ್ಪ, ಮಲ್ಲಿಕಾರ್ಜುನಪ್ಪ, ಮದ್ದೂರು ಶಿವಣ್ಣ, ಜಿ.ಜಿ.ಪುರ ಚನ್ನಕೇಶವೇಗೌಡ, ಸಿದ್ದರಾಜು, ಶಂಭಯ್ಯ, ಎಸ್.ಕಲ್ಲಹಳ್ಳಿ ಮೂರ್ತಿ, ಹರೀಶ್, ಮಂಡನಹಳ್ಳಿ ನಾಗರಾಜು, ಹರೀಶ್ ಇನ್ನಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now