--Ads--

ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳ  ಹಾಸ್ಟೆಲ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ : ಮರು ಟೆಂಡರ್ ಗೆ ಒತ್ತಾಯ

On: May 25, 2026 6:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳ  ಹಾಸ್ಟೆಲ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ : ಮರು ಟೆಂಡರ್ ಗೆ ಒತ್ತಾಯ

ಕೋಲಾರ: ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳ ಹಾಸ್ಟೆಲ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಕೂಡಲೇ ನಿಯಮಾನುಸಾರವಾಗಿ ನಿರ್ಮಿಸಲು ಗುತ್ತಿಗೆದಾರನಿಗೆ ಸೂಚನೆ ಮಾಡುವುದರ ಜೊತೆಗೆ ಸಾಧ್ಯವಾದರೆ ಮರು ಟೆಂಡರ್ ಮಾಡುವಂತೆ ಪಕ್ಷಾತೀತವಾಗಿ ಸಮಾಜದ ಮುಖಂಡರು ಸಂಘದ ಪದಾಧಿಕಾರಿಗಳನ್ನು ಒತ್ತಾಯಿಸಿದರು.

ನಗರದ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಭಾನುವಾರ ಒಕ್ಕಲಿಗ ಸಮಾಜದ ಹಾಸ್ಟೆಲ್ ನಿರ್ಮಾಣಕ್ಕೆ ಸಂಬಂಧಿಸಿದ ತೊಡಕುಗಳ ಬಗ್ಗೆ ಚರ್ಚಿಸಲು ಕರೆದಿದ್ದ ಒಕ್ಕಲಿಗ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖಂಡರು ಹಾಸ್ಟೆಲ್‌ ನಿರ್ಮಾಣ ಸಮಾಜದ ಗೌರವ ಮತ್ತು ಘನತೆಯನ್ನು ಹೆಚ್ಚಿಸುತ್ತದೆ ಈಗಿರುವ ಗುತ್ತಿಗೆದಾರ ಸರಿಯಾಗಿ ಗುಣಮಟ್ಟದಿಂದ ಕಾಮಗಾರಿ ನಡೆಸುತ್ತಿಲ್ಲ ಕೂಡಲೇ ಸರಿಪಡಿಸುವ ಕೆಲಸವನ್ನು ಸಂಘದ ರಾಜ್ಯ ನಿರ್ದೇಶಕರು ಹಾಗೂ ಪ್ರಮುಖ ಮುಖಂಡರು ಮುಂದಾಳತ್ವವನ್ನು ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾ‌ರ್ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿಗೆ ಸಂಘದ ಆಸ್ತಿ ಉಳಿಸಲು ಒಗ್ಗಟ್ಟಾಗಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಹಿಂದೆ ಸಂಘದ ಚುನಾವಣೆಯಲ್ಲಿ ಪಾರದರ್ಶಕತೆಯಿಂದ ನಡೆಯಬೇಕು ಎಂದು ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಯತ್ನ ಮಾಡಿ ಯಾರಿಗೂ ಹಣ ಕೊಡದೆ ಚುನಾವಣೆ ನಡೆಸಿದ್ದಾರೆ. ಅದು ಒಕ್ಕಲಿಗ ಸಮಾಜದ ಬಗ್ಗೆ ಇತರೆ ಸಮುದಾಯಗಳು ಸಹ ಗೌರವದಿಂದ ಕಾಣಲು ಸಾಧ್ಯವಾಗಿದೆ ಹಾಸ್ಟೆಲ್ ನಿರ್ಮಾಣ ಒಕ್ಕಲಿಗ ಸಮಾಜದ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ಮಿಸುವಂತೆ ಮಾಡುವುದು ಸಹ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಕೂಡಲೇ ಗುತ್ತಿಗೆದಾರ ನಿಯಮಾನುಸಾರ ಕೆಲಸ ಮಾಡಬೇಕು. ಇಲ್ಲ ಅವರ ಹೆಸರಿನಲ್ಲಿ ನಮ್ಮ ಸಮುದಾಯದವರು ಬೇರೆ ಯಾರಾದರೂ ಕಾಮಗಾರಿ ಮುಂದುವರೆಸಲು ನಿರ್ಧರಿಸಬೇಕು, ಜೊತೆಗೆ ಹಿರಿಯರ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ಮಾಡಬೇಕು ಎಂದು ಸಭೆಗೆ ತಿಳಿಸಿದರು.

ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕ ಕೋನಪ್ಪರೆಡ್ಡಿ ಮಾತನಾಡಿ, ಸಂಘದಲ್ಲಿ ನಡೆದ ಅನೇಕ ಕಾಮಗಾರಿಗಳ ಭ್ರಷ್ಟಾಚಾರವನ್ನು ಪ್ರಶ್ನೆ, ಮಾಡಿ ಸಂಘಕ್ಕೆ ಉಳಿಸುವ ಕೆಲಸವನ್ನು ಮಾಡಿದ್ದಕ್ಕೆ ನನ್ನನ್ನು ಕಾರ್ಯದರ್ಶಿ ಸ್ಥಾನದಿಂದ ಹೊರಹಾಕಿದರು. ಇವತ್ತು ಕೋಲಾರ ಜಿಲ್ಲೆಯ ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳ ಹಾಸ್ಟೆಲ್ ನಿಂದ ಭವಿಷ್ಯ ಕಾಣಬೇಕಾಗಿದೆ. ಹಾಸ್ಟೆಲ್ ಜಾಗವನ್ನು ಮೂರು ಬಾರಿ ನೋಂದಣಿ ಮಾಡಲಾಗಿದೆ

ಅದು ಮೂರು ನಂಬರ್ ಹೆಸರಿನಲ್ಲಿ ಕೊನೆಯದಾಗಿ 240 ಸಂಖ್ಯೆಯಲ್ಲಿ ಸಂಘದ ಹೆಸರಿನಲ್ಲಿ ನೊಂದಣಿ ಮಾಡಲಾಗಿದೆ ಹಿಂದೆ ಚುನಾವಣೆಯಲ್ಲಿ ಕೊಟ್ಟು ಮಾತಿನಂತೆ ಮೂರು ಜನ ನಿರ್ದೇಶಕರು ಜವಾಬ್ದಾರಿ ವಹಿಸಿಕೊಂಡು ಹಾಸ್ಟೆಲ್ ಮಾಡಿಯೇ ಅಲ್ಲಿಂದ ಕಾಲೇಜಿಗೆ ಸಮಾಜದ ಹೆಣ್ಣು ಮಕ್ಕಳು ಹೋಗುವಂತೆ ಮಾಡಬೇಕು. ಇವತ್ತು ಹಾಸ್ಟೆಲ್ ಹೆಸರಿನಲ್ಲಿ ಗುತ್ತಿಗೆದಾರ ದುಡ್ಡು ಮಾಡಿಕೊಂಡಿದ್ದಾನೆ ಕೂಡಲೇ ನೀವುಗಳು ಸಭೆಯಲ್ಲಿ ತೀರ್ಮಾನ ಮಾಡಿ ಯಾರು ಕಾಮಗಾರಿ ಮಾಡಬೇಕು ಅವರಿಗೆ ಕೊಡೋಣ ಎಂದು ಸಭೆಗೆ ತಿಳಿಸಿದರು.

ಸಭೆಯ ನಂತರ ಹೊರಬಂದ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಹಾಸ್ಟೆಲ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಸಭೆಯ ನಿರ್ಣಯಕ್ಕೆ ಸಮುದಾಯದ ಎಲ್ಲಾ ಮುಖಂಡರು ಒಮ್ಮತದಿಂದ ಬೆಂಬಲ ನೀಡಿದ್ದಾರೆ. ಸಂಘ ಹಾಸ್ಟೆಲ್,ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಸಮುದಾಯದ ಬಡವರಿಗೆ ಹೆಚ್ಚಿನ ಅವಕಾಶ ನೀಡುವ ಚಿಂತನೆ ಮಾಡಬೇಕು, ಕೋಲಾರದಲ್ಲೊಂದು ಹೆಣು ಮಕ್ಕಳ ಹಾಸ್ಟೆಲ್ ನಿರ್ಮಾಣ ಸಮುದಾಯದ ಹೆಮ್ಮೆಯಾಗಿದೆ. ಇದರಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ತಿಳಿಸಿದರು.

ಸಮುದಾಯದ ಮುಖಂಡರಾದ ಆ‌ರ್. ಪ್ರಭಾಕರ್ ರೆಡ್ಡಿ, ಸೀಸಂದ್ರ ಗೋಪಾಲಗೌಡ, ನಾಗರಾಜ್, ಮುರಳಿಗೌಡ ಮುಂತಾದವರು ಮಾತನಾಡಿ, ಬ್ಲಾಕ್ ಲಿಸ್ಟ್‌ನಲ್ಲಿರುವ ಗುತ್ತಿಗೆದಾರನಿಗೆ ಸಮಾಜದ ಹಾಸ್ಟೆಲ್ ನಿರ್ಮಿಸಲು ಗುತ್ತಿಗೆ ಕೊಟ್ಟಿದ್ದು ದೊಡ್ಡ ತಪ್ಪು ಕೂಡಲೇ ಗುತ್ತಿಗೆದಾರರನನ್ನು ಬದಲಾವಣೆ ಮಾಡಬೇಕು ಸಂಘದಲ್ಲಿ ಕೂಡಲೇ ತೀರ್ಮಾನ ಮಾಡಿ ಮರು ಟೆಂಡ‌ರ್ ಕರೆಯಬೇಕು. ಅದು ಸಂಘದ ಹಣ ಆ ಹಣವನ್ನು ದುರುಪಯೋಗವಾಗದಂತೆ ನೋಡಿಕೊಳ್ಳವುದು ಸಹ ಸಂಘದ ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಯಲುವಹಳ್ಳಿ ರಮೇಶ್, ಡಿ.ಕೆ ರಮೇಶ್, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಮುಖಂಡರಾದ ವಡಗೂರು ನಾಗರಾಜ್, ಛತ್ರಕೋಡಿಹಳ್ಳಿ ಮುನೇಗೌಡ ಸೇರಿದಂತೆ ಹಲವಾರು ಮಂದಿ ಹಾಜರಿದರು.

WhatsApp

Join Now

Telegram

Join Now

Instagram

Join Now