ವಿಜಯ ದರ್ಪಣ ನ್ಯೂಸ್….
ಸಂಕಲ್ಪಗಳ ಪುನರ್ ಅವಲೋಕನ…
2026 ರಲ್ಲಿ ಈಗಾಗಲೇ 5 ತಿಂಗಳು ಕಳೆದಿದೆ. ……….

ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ.
ಕೆಲವರು ಧೂಮಪಾನ, ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು,
ಮತ್ತೆ ಕೆಲವರು ಯೋಗ, ಧ್ಯಾನ, ವಾಕಿಂಗ್, ವ್ಯಾಯಾಮ ಮಾಡುವುದು, ಇನ್ನೂ ಕೆಲವರು ಬೇಗ ಮಲಗಿ ಬೇಗ ಏಳುವುದು,
ಹಲವರು ಆಹಾರದಲ್ಲಿ ಡಯಟ್ ಪಾಲಿಸುವುದು,
ಇನ್ನೊಂದಿಷ್ಟು ಜನ ತಮ್ಮ ಪೋಷಕರನ್ನು ತುಂಬಾ ಜವಾಬ್ದಾರಿಯಿಂದ ನೋಡಿಕೊಳ್ಳುವುದು,
ಒಂದಷ್ಟು ಜನ ಓದುವುದು ಬರೆಯುವುದು,
ಕೆಲವರು ಪ್ರವಾಸ ಹೋಗುವುದು………
ಹೀಗೆ ಹಲವಾರು ವಿಭಿನ್ನ ವಿಶಿಷ್ಟ ಸಂಕಲ್ಪಗಳನ್ನು ಕೈಗೊಂಡಿರುತ್ತಾರೆ.
ಇದೀಗ ಅದರ ಪುನರ್ ಚಿಂತನೆ ಅಥವಾ ಮೌಲ್ಯಮಾಪನ ಅಥವಾ ಅದರ ಪ್ರಾಯೋಗಿಕ ಯಶಸ್ಸಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಸಂಕಲ್ಪಗಳನ್ನು ಯಶಸ್ವಿಯಾಗಿ ಅನುಸರಿಸುತ್ತಿದ್ದರೆ ತುಂಬಾ ಸಂತೋಷ. ಮುಂದುವರಿಸಿ.
ಆದರೆ,
ಅದರಂತೆ ನಡೆದುಕೊಳ್ಳಲು ಆಗದಿದ್ದವರು ಮತ್ತೆ ಅದನ್ನು ಇಂದಿನಿಂದಲೇ ಪ್ರಾರಂಭಿಸಲು ಆರಂಭಿಸಿ.
ನಿಮ್ಮ ಮನಸ್ಸಿನ ಬ್ಯಾಟರಿಯನ್ನು ನೀವೇ ನಿಮ್ಮ ವಿಲ್ ಪವರ್ ಉಪಯೋಗಿಸಿ ಚಾರ್ಜ್ ಮಾಡಿಕೊಳ್ಳಿ. ಅದಕ್ಕಾಗಿ ಬೇರೆಯವರ ಸಹಾಯ ನಿರೀಕ್ಷಿಸಬೇಡಿ. ನೆಪಗಳನ್ನು ಹುಡುಕಬೇಡಿ. ವಿಧಿಯನ್ನು – ಪರಿಸ್ಥಿತಿಯನ್ನು ಶಪಿಸುತ್ತಾ ಕಾಲ ದೂಡಬೇಡಿ.
ನಮ್ಮ ಸಂಕಲ್ಪಗಳು ಮತ್ತೆ ಮತ್ತೆ ವಿಫಲವಾಗುವುದನ್ನು ಬದುಕಿನ ಪಾಠಶಾಲೆಯ ಅನುಭವಗಳು ಎಂದೇ ಪರಿಗಣಿಸಿ. ಅದನ್ನು ನೆನೆದು ಒಮ್ಮೆ ನಿಮ್ಮೊಳಗೆ ನಕ್ಕು ಬಿಡಿ. ಮರು ಕ್ಷಣವೇ ಸವಾಲಾಗಿ ಸ್ವೀಕರಿಸಿ ಪುನಃ ಮೊದಲಿನಿಂದ ಪ್ರಾರಂಭಿಸಿ. ಎಷ್ಟೇ ಬಾರಿ ವಿಫಲವಾದರೂ ಮತ್ತೆ ಮತ್ತೆ ಪ್ರಯತ್ನಿಸಿ.
ಸೋಲೆಂಬುದು ಒಂದು ಪರಿಣಾಮ ಅಷ್ಟೆ. ಅದೇ ಅಂತಿಮವಲ್ಲ. ಆದರೆ ಪ್ರಯತ್ನ ನಿಲ್ಲಿಸಿದರೆ ಅದು ಸೋಲಲ್ಲ ಸಾವು.
ಆಧುನಿಕ ಕಾಲದಲ್ಲಿ ಬದುಕು ವೇಗವಾಗಿ – ಸ್ಪರ್ಧಾತ್ಮಕವಾಗಿ – ತಾಂತ್ರಿಕವಾಗಿ – ಸಂಕೀರ್ಣವಾಗಿ ಸಾಗುತ್ತಿರುತ್ತದೆ. ಅದರಿಂದಾಗಿ ನಮಗೆ ಅಲ್ಲಲ್ಲಿ ನಿಲ್ದಾಣಗಳ ಅವಶ್ಯಕತೆ ಇರುತ್ತದೆ. ಅದನ್ನು ಸಂಕಲ್ಪಗಳೆಂಬ ಸ್ವಂತ ನಿಲ್ದಾಣಗಳನ್ನು ನಾವೇ ಸೃಷ್ಟಿಸಿಕೊಂಡು ಒಂದಷ್ಟು ವಿಶ್ರಾಂತಿ ಪಡೆದು ಹೊಸ ಉತ್ಸಾಹದಿಂದ ಬದುಕಿನ ಪ್ರಯಾಣ ಮುಂದುವರಿಸಬೇಕು.
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ,
ಜಗ್ಗದೆ ಕುಗ್ಗದೆ ಹಿಗ್ಗಿ ನಡೆ ಮುಂದೆ ಎಂಬ ಕವಿವಾಣಿಯಂತೆ ನಾವು ಈ ವರ್ಷದ ಐದು ತಿಂಗಳ ನಂತರ ನಮ್ಮನ್ನು ಮತ್ತೆ ಬಡಿದೆಬ್ಬಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯೋಣ…
ಆದ್ದರಿಂದ ಸಂಕಲ್ಪಗಳು ಸದಾ ಜಾರಿಯಲ್ಲಿರುವಂತೆ ಬದುಕಿನ ದಾರಿಯಲ್ಲಿ ನಮಗೆ ನಾವೇ ಮಾರ್ಗದರ್ಶಕರಾಗಿ ಸಾಗೋಣ ಎಂದು ಆಶಿಸುತ್ತಾ……….
ಮನಸ್ಸೆಂಬುದು Re chargeable battery ಇದ್ದಂತೆ…..
Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವನವೇ ಬೇಸರವಾಗುತ್ತದೆ……
ಅದನ್ನು ಮತ್ತೆ ಮತ್ತೆ Charge ಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ.
ಎಷ್ಟೋ ಜನರಿಗೆ ಬದುಕಿನ ಅನಿವಾರ್ಯತೆಯಿಂದಾಗಿ ಅಥವಾ ಆಕಸ್ಮಿಕಗಳಿಂದಾಗಿ ಅಥವಾ ದುರಾದೃಷ್ಟದಿಂದಾಗಿ ಜೀವನ ಪ್ರಪಾತಕ್ಕೆ ಕುಸಿಯುತ್ತದೆ. ಕೆಲವೊಮ್ಮೆ ನಿಧಾನವಾಗಿ ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಸಂಭವಿಸುತ್ತದೆ……
ಒಮ್ಮೊಮ್ಮೆ ಅದರ ತೀವ್ರತೆ ಎಷ್ಟಿರುತ್ತದೆ ಎಂದರೆ ನಾಳೆ ನನಗೆ ಬದುಕಿನ ಕೊನೆ ದಿನವಾಗಿರುತ್ತದೆ ಎಂದೇ ಭಾಸವಾಗುತ್ತದೆ. ದೇವರೋ – ರಕ್ತ ಸಂಬಂಧಿಗಳೋ – ಆತ್ಮೀಯರೋ ಅಥವಾ ಇನ್ಯಾರೋ ಬಂದು ನಮ್ಮನ್ನು ಕಾಪಾಡಬಹುದು ಎಂಬ ನಿರೀಕ್ಷೆ ಹುಸಿಯಾದಾಗ ನಮ್ಮ ಮನಸ್ಸಿನ ಬ್ಯಾಟರಿ All most dead level ಗೆ ಬಂದಿರುತ್ತದೆ……..
ಇಂತಹ ಕಠಿಣ ಸಂದರ್ಭದಲ್ಲಿಯೇ ನಾವು ಯಾರಿಗೂ ಕಾಯದೆ ಆ ಸಂಕಷ್ಟದಿಂದ ಹೊರಬರುವವರೆಗೂ ಪ್ರತಿ ರಾತ್ರಿ ಮಲಗುವಾಗ ಮತ್ತು ಪ್ರತಿದಿನ ಬೆಳಗ್ಗೆ ಏಳುವಾಗ ನಮ್ಮ ಒಳಗಿನ ಆತ್ಮಶಕ್ತಿಯಿಂದಲೇ ಮನಸ್ಸೆಂಬ ಬ್ಯಾಟರಿಯನ್ನು ಸ್ವತಃ Charge ಮಾಡಿಕೊಳ್ಳಬೇಕು.
ಇಲ್ಲದಿದ್ದರೆ ನಮ್ಮ ಅವಸಾನ ಬಹುತೇಕ ನಿಶ್ಚಿತವಾಗುತ್ತದೆ……
ಅದರಲ್ಲೂ ಭಾರತೀಯ ಮಧ್ಯಮ ವರ್ಗದವರ ಜೀವನದಲ್ಲಿ ಇದು ಒಂದಲ್ಲ ಒಂದು ಸಮಯದಲ್ಲಿ ಎದುರಾಗತ್ತಲೇ ಇರುತ್ತದೆ. ಅವರ ಮನಸ್ಸಿನ ಬ್ಯಾಟರಿಯ ಏರಿಳಿತ ತುಂಬಾ ಇರುತ್ತದೆ.
ಮನಸ್ಸು ಕೂಡ ಸದಾ ದ್ವಂದ್ವ ಮತ್ತು ಚಂಚಲತೆಯಿಂದಲೇ ಕೂಡಿರುತ್ತದೆ…..
ವಿದ್ಯಾಭ್ಯಾಸದ ಸಮಯದಲ್ಲಿ ಒಂದು ಮನಸ್ಸು ಓದುವ, ಇನ್ನೊಂದು ಮನಸ್ಸು ಆಟವಾಡಲು ಪ್ರೇರೇಪಿಸುತ್ತದೆ. ಯೌವನದಲ್ಲಿ ಒಂದು ಪ್ರೀತಿಸುವ ಇನ್ನೊಂದು ದ್ವೇಷಿಸುವ ಒತ್ತಡ ಹೇರುತ್ತದೆ…..
ಕೆಲವೊಮ್ಮೆ ನಮಗೆ ಅನ್ಯಾಯ ಅಥವಾ ವಂಚನೆ ಅಥವಾ ನೋವಾದಾಗ ಉದ್ವೇಗಕ್ಕೆ ಒಳಗಾಗುವ ನಾವು ಅದಕ್ಕೆ ಕಾರಣವಾದವರನ್ನು ಕೊಲ್ಲಲು ಒಂದು ಮನಸ್ಸು ಸೂಚಿಸುತ್ತದೆ. ಅದೇ ಸಂದರ್ಭದಲ್ಲಿ ನಮ್ಮೊಳಗೇ ಅಡಗಿರುವ ಇನ್ನೊಂದು ಮನಸ್ಸು, ಛೆ , ಬೇಡ ಕೊಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ಬದಲಾಗಿ ಇರಬಹುದಾದ ಇತರ ಪರ್ಯಾಯಗಳನ್ನು ಸೂಚಿಸುತ್ತದೆ…..
ಇಂತಹ ಪರಿಸ್ಥಿತಿಯಲ್ಲಿ ನಾವು ಕೈಗೊಳ್ಳುವ ನಿರ್ಧಾರ ಅಥವಾ ಯಾವ ಮನಸ್ಸಿನ ಮಾತನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂಬುದು ಬಹುತೇಕ ನಮ್ಮ ಭವಿಷ್ಯವನ್ನು ಮತ್ತು ಜೀವನದ ವಿಧಾನವನ್ನು ನಿರ್ಧರಿಸುತ್ತದೆ……
ನಮ್ಮ ಮನಸ್ಸೇ ನಮಗೆ ಗುರು,
ನಮ್ಮ ಮನಸ್ದೇ ನಮಗೆ ಮಿತ್ರ,
ನಮ್ಮ ಮನಸ್ಸೇ ನಮಗೆ ಶತ್ರು,
ನಮ್ಮ ಮನಸ್ಸೇ ನಮಗೆ ಮಾರ್ಗದರ್ಶಕ,…..
ಅದರ ಆಯ್ಕೆಯ ಅವಕಾಶವೂ ನಮಗಿರುತ್ತದೆ. ಯಾವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅಪ್ಪಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನಶೈಲಿ ನಿರ್ಧಾರವಾಗುತ್ತದೆ…….
ಅರಿವೆಂಬ ಜ್ಞಾನದ ಮತ್ತು ಅಂತರಾತ್ಮದ ವಿದ್ಯುತ್ತಿನಿಂದ ನಮ್ಮ ಮನಸ್ಸೆಂಬ Re chargeable battery ಯನ್ನು ಸದಾ ಚಾರ್ಜ್ ಮಾಡಿಕೊಳ್ಳುತ್ತಾ ನೂರು ವರ್ಷಗಳ ವಾರಂಟಿ ಮತ್ತು ಗ್ಯಾರಂಟಿ ಮುಗಿಯುವವರೆಗೂ ಉತ್ತಮ ರೀತಿಯಲ್ಲಿ ಕಾಪಾಡೋಣ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….










