--Ads--

ಸರ್ಕಾರಿ ಶಾಲೆಯಲ್ಲಿ ಗಮನ ಸಳೆದ ಮಕ್ಕಳ ಕಲಿಕಾ ಹಬ್ಬ

On: May 27, 2026 2:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸರ್ಕಾರಿ ಶಾಲೆಯಲ್ಲಿ ಗಮನ ಸಳೆದ ಮಕ್ಕಳ ಕಲಿಕಾ ಹಬ್ಬ

ಶಿಡ್ಲಘಟ್ಟ : ಕೇವಲ ಸಾಂಪ್ರದಾಯಿಕ ಅಕ್ಷರ ಕಲಿಕೆಗೆ
ಒತ್ತು ನೀಡದೆ, ಆಟದ ಮೂಲಕ ಶಿಕ್ಷಣ ನೀಡಿದಾಗ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಶಾಶ್ವತ ಪ್ರೀತಿ ಮೂಡುತ್ತದೆ ಅಂಗನವಾಡಿಯ ಆಟದ ವಾತಾವರಣದಿಂದ ಶಾಲೆಯ ಔಪಚಾರಿಕ ವಾತಾವರಣಕ್ಕೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳಲು ಮನೋವೈಜ್ಞಾನಿಕ ಮೇಳಗಳು ಅತ್ಯಗತ್ಯ
ಎಂದು ಪ್ರಥಮ್ ಎಜುಕೇಶನ್ ಫೌಂಡೇಶನ್‌ನ ರಾಜ್ಯ ಮುಖ್ಯಸ್ಥ ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಥಮ್ ಎಜುಕೇಶನ್ ಫೌಂಡೇಶನ್‌ನ ಆಶ್ರಯದಲ್ಲಿ “ನಮ್ಮ ಗ್ರಾಮ” ಶಿರ್ಷಿಕೆಯಡಿ ಹಮ್ಮಿಕೊಂಡಿದ್ದ ಶಾಲಾಪೂರ್ವ ತಯಾರಿಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇವಲ ಸಾಂಪ್ರದಾಯಿಕ ಅಕ್ಷರ ಕಲಿಕೆಗೆ ಒತ್ತು ನೀಡದೆ, ಆಟದ ಮೂಲಕ ಶಿಕ್ಷಣ ನೀಡಿದಾಗ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಶಾಶ್ವತ ಪ್ರೀತಿ ಮೂಡುತ್ತದೆ ಅಂಗನವಾಡಿಯ
ಆಟದ ವಾತಾವರಣದಿಂದ ಶಾಲೆಯ ಔಪಚಾರಿಕ ವಾತಾವರಣಕ್ಕೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳಲು ಇಂತಹ ಅಗತ್ಯ ಎಂದು ಹೇಳಿದರು.

ತಾಯಿಯೇ ಮಗುವಿನ ಮೊದಲ ಶಿಕ್ಷಕಿಯಾಗಿದ್ದು, ಮನೆಯೇ ಮೊದಲ ಪಾಠಶಾಲೆಯಾಗಬೇಕು ಪ್ರತಿಯೊಬ್ಬ
ತಾಯಿಯೂ ಮಗುವಿನ ಮಾನಸಿಕ ಏರುಪೇರುಗಳನ್ನು ಹತ್ತಿರದಿಂದ ಬಲ್ಲವರಾಗಿರುತ್ತಾರೆ , ತಾಯಂದಿರು
ಮನೆಯಲ್ಲಿ  ಪ್ರತಿದಿನ ಕನಿಷ್ಠ ೧೫ నిಮಿಷಗಳನ್ನು ಮಗುವಿನೊಂದಿಗೆ ಕಳೆಯಬೇಕು ಎಂದರು.

ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ,
ಬಣ್ಣಗಳನ್ನು ವರ್ಗೀಕರಿಸುವುದು ಮತ್ತು ಒಗಟು
ಬಿಡಿಸುವ ಚಟುವಟಿಕೆಗಳು ಮಕ್ಕಳ ತಾರ್ಕಿಕ
ಚಿಂತನೆಯನ್ನು ಹೆಚ್ಚಿಸಿದರೆ, ರೇಖೆಯ ಮೇಲೆ ನಡೆಯುವುದು ಮತ್ತು ಮಣಿ ಪೋಣಿಸುವುದು ಅವರ ಗಮನ ಕೇಂದ್ರೀಕರಣ ಹಾಗೂ ಹಸ್ತ ನೇತ್ರಗಳ ಸಮನ್ವಯತೆಯನ್ನು ಉತ್ತಮಪಡಿಸುತ್ತದೆ ಎಂದರು.

ಮೇಳದಲ್ಲಿ ಅಳವಡಿಸಿರುವ ವೈವಿಧ್ಯಮಯ ವಿಭಾಗಗಳು ಮನೋವೈಜ್ಞಾನಿಕ ಮಹತ್ವವನ್ನು ಹೊಂದಿದ್ದು, ಪ್ರತಿಯೊಂದು ಚಟುವಟಿಕೆಯನ್ನು ಮಕ್ಕಳ ವಿಕಸನದ ಹಂತಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದರು.

ಇವು ಕೇವಲ ಆಟಗಳಲ್ಲ ಬದಲಿಗೆ ಮಗುವಿನ
ಭವಿಷ್ಯದ ಕಲಿಕೆಗೆ ಭದ್ರ ಬುನಾದಿವಗ್ರಾಮೀಣ ಭಾಗದ ಮಕ್ಕಳೂ ಸಹ ಜಾಗತಿಕ ಮಟ್ಟದ ಗುಣಮಟ್ಟದ ಶಿಕ್ಷಣ
ಪಡೆಯಲು ಅರ್ಹರಾಗಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪ್ಥಮ್ ಎಜುಕೇಶನ್ ಫೌಂಡೇಶನ್‌ನ
ಮುಖ್ಯಸ್ಥ ಚಂದ್ರಶೇಖರ್, ಶಿವಮೂರ್ತಿ, ದೇವನಹಳ್ಳಿ ಬ್ಲಾಕ್‌ನ ಟೀಮ್ ಲೀಡರ್ ಎ.ಮಂಜುನಾಥ್, ಪ್ರಥಮ್ ಸಂಸ್ಥೆಯ ಶಿಕ್ಷಕಿ ಸುನೀತಾ,ಗಣೇಶ್,ಲಕ್ಷ್ಮಿಪತಿ,ಭಾರತಿ,
ರಶ್ಮಿ,ಚೈತ್ರಾ, ಸರ್ಕಾರಿ ಶಾಲಾ ಶಿಕ್ಷಕ ಎ.ಬಿ.ನಾಗರಾಜ, ನಿವೃತ್ತ ಶಿಕ್ಷಕ ಬಿ.ನಾಗರಾಜು,ಎಸ್‌ಡಿಎಂಸಿ ಅಧ್ಯಕ್ಷ
ವೆಂಕಟೇಶ್, ತಾಯಂದಿರು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now