ವಿಜಯ ದರ್ಪಣ ನ್ಯೂಸ್….
ಮುದ್ದುಶ್ರೀ ದಿಬ್ಬದಲ್ಲಿ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನ

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದೇ ಜೂನ್ 11, 2026ರ ಗುರುವಾರ ಸಂಜೆ 6ಕ್ಕೆ ಶಿವಮೊಗ್ಗ ರಂಗಾಯಣ ನಿರ್ಮಿಸಿರುವ `ಸ್ವಾತಂತ್ರö್ಯದ ಓಟ’ ನಾಟಕ ಪ್ರದರ್ಶನವನ್ನು ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದ ಕೆ.ಎಸ್. ಮುದ್ದಪ್ಪ ಚಿಕ್ಕಮ್ಮ ರಂಗಮAದಿರದಲ್ಲಿ ಏರ್ಪಡಿಸಿದೆ. ರಾಮನಗರ ತಾಲ್ಲೂಕಿನ ಶಾಸಕ ಎಚ್.ಎ. ಇಕ್ಬಾಲ್ ಅಹಮದ್ ಹಾಗೂ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡುವರು.
ಹಿರಿಯ ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ ರಂಗಪಠ್ಯ ಸಿದ್ಧಪಡಿಸಿ, ವಿನ್ಯಾಸಗೊಳಿಸಿ ನಿರ್ದೇಶಿಸಿರುವ ನಾಟಕ ರೂಪಾಂತರವನ್ನು ಗೋಮಾರನಹಳ್ಳಿ ಮಂಜುನಾಥ್ ನಿರ್ವಹಿಸಿದ್ದಾರೆ. ಸಲ್ಮಾ ದಂಡಿನ್ ಸಹನಿರ್ದೇಶನ, ರಾಘವ ಕಮ್ಮಾರರ ಸಂಗೀತ ನಿರ್ದೇಶನವಿದೆ. ಮದುಸೂದನ್, ರಮೇಶ್ ಎಸ್ ಮೈಸೂರು, ಶಂಕರ್ ಕೆ. ಬೆಳಲಕಟ್ಟೆ ರಂಗಸಜ್ಜಿಕೆ ನಿರ್ಮಿಸಿದ್ದಾರೆ. ಬೆಳಕಿನ ವಿನ್ಯಾಸ ಮಂಜುನಾರಾಯಣ್, ವಸ್ತç ವಿನ್ಯಾಸ ಸಹನಾ ಪಿಂಜಾರ್ ನೋಡಿಕೊಂಡಿದ್ದಾರೆ.
ನಾಟಕ ಕುರಿತು “ಸ್ವಾತಂತ್ರ‍್ಯದ ಓಟ” ನಾಟಕವು ಬೊಳುವಾರು ಮಹಮ್ಮದ್ ಕುಂಞÂ ಅವರ ಕಾದಂಬರಿ ಆಧಾರಿತ, ಸಮಕಾಲೀನ ಸಂದರ್ಭದ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಂರ್ಘಷಗಳಿಗೆ ಕನ್ನಡಿ ಹಿಡಿದ ನಾಟಕ. ಸಿಖ್ ಹೆಣ್ಣುಮಕ್ಕಳಿಬ್ಬರಿಗೆ ಸಹಾಯ ಮಾಡಲು ಪಾಕಿಸ್ತಾನದ ಗಡಿದಾಟಿ ಭಾರತಕ್ಕೆ ಬಂದ ಮುಸ್ಲಿಂ ಹುಡುಗ ಚಾಂದ್ ಅಲೀ ತನ್ನ ಮಾತೃಭೂಮಿಗೆ ಹಿಂದಿರುಗಿ ಹೋಗಲಾರದ ಇಕ್ಕಟ್ಟಿಗೆ ಸಿಕ್ಕಿಕೊಂಡು ಭಾರತದಲ್ಲೇ ಉಳಿದು, ಐವತ್ತು ವರ್ಷಗಳ ಕಾಲ ನಿರಂತರವಾಗಿ ಅನುಭವಿಸುವ ಸಂತೋಷ, ನೋವು, ಹತಾಶೆ, ಸಂಕಟಗಳ ಅಭಿವ್ಯಕ್ತಿ ಈ ನಾಟಕದಲ್ಲಿ ಹರಡಿಕೊಂಡಿದೆ. ಇಡೀ ನಾಟಕದ ಬೆಳವಣಿಗೆಯಲ್ಲಿ ಚಾಂದ್ ಅಲೀ ಪಾತ್ರ ಮಹತ್ವದ್ದಾಗಿದ್ದು, ದೇಶದಲ್ಲಿ ಘಟಿಸುತ್ತಿರುವ ಎಲ್ಲಾ ರಾಜಕೀಯ, ಸಾಮಾಜಿಕ, ಘಟನೆಗಳಿಗೂ ಸಾಕ್ಷಿ ಪ್ರಜ್ಞೆಯಂತಿದೆ. “ಸ್ವಾತಂತ್ರ‍್ಯದ ಓಟ” ಅವನೊಬ್ಬನ ಓಟವಲ್ಲ. ಬದಲಿಗೆ ಅವನ ಭಯ, ನರಳುವಿಕೆ, ಆತಂಕ ಈ ಓಟದ ಆಂತರ್ಯದಲ್ಲಿನ ಜೀವದ್ರವ್ಯವಾಗಿದೆ. ಅವನ ಮಾತೃಭೂಮಿಯ ನಿಗೂಢತೆ, ಹುಟ್ಟಿನ ಮೂಲದ ಬಗ್ಗೆ ಬಾಯಿ ಬಿಡಲಾಗದ ಮೌನ, ಅವನ ಬದುಕಿನುದ್ದಕ್ಕೂ ಭೂತವಾಗಿ ಬೆಳೆದ ಅಭದ್ರತೆಯ ಪರಿಣಾಮವಾಗಿದೆ.
ಇಲ್ಲಿದ್ದೂ ಇಲ್ಲಿಯವನಾಗದ, ಅಲ್ಲಿಗೆ ಹೋಗಲಾರದ ಅತಂತ್ರ ಸ್ಥಿತಿ. ಯಾದವೀ ಕಲಹವು ಹಿಂಸಾಕಾAಡಕ್ಕೆ ತಿರುಗಿದಾಗ ಆಗಿಹೋದ ಅನಾಹುತ ಅಗಣಿತ. ದೇಶ ವಿಭಜನೆ ಎನ್ನುವುದು ರಾಷ್ಟ್ರನಾಯಕರಿಗೆ ಕತ್ತರಿಯಲ್ಲಿ ಭೂಪಟವನ್ನು ಕತ್ತರಿಸಿದಷ್ಟು ಸುಲಭ. ಆದರೆ ಅನುಭವಿಸುವ ಜನಕ್ಕೆ ಅದೊಂದು ಮಹಾನರಕ. ದೇಶ ಒಂದಾಗಿದ್ದಾಗ ಜನಸಾಮಾನ್ಯರು ಬಂಧು ಬಳಗದ ಪ್ರಜ್ಞೆಯಲ್ಲಿ ಬಾಳು ಕಟ್ಟಿಕೊಂಡಿದ್ದರು. ದೇಶ ವಿಭಜನೆಯಾದ ತಕ್ಷಣವೇ ಮಾನವೀಯತೆ ಮರೆತು ಹೋಗಿ ದ್ವೇಷದ ಕಿಚ್ಚಿನಲಿ ಎರಡು ದೇಶಗಳು ಹತ್ತಿ ಉರಿಯುತ್ತವೆ. ಜನರು ತಮ್ಮ ಸ್ವಂತ ನೆರಳನ್ನು ನೋಡಿಯೇ ಬೆಚ್ಚಿ ಬೀಳುತ್ತಿದ್ದ ದಿನಗಳು. ಎಲ್ಲಿಗೆ ಹೋಗುತ್ತಿದ್ದೇವೆ? ಎಷ್ಟು ದೂರ? ಯಾರಿಗೂ ಗೊತ್ತಿಲ್ಲ. ಏನು ಮಾಡಲು ಸಾಧ್ಯವಿಲ್ಲದೆ ಮನೆ, ಜಮೀನು, ಅಂಗಡಿ, ಗೆಳೆಯ ಗೆಳತಿಯರನ್ನು ಕರೆದುಕೊಂಡು ಓಡುತ್ತಿರುವವರಿಗೆ ಒಂದೇ ಗುರಿ; ಓಡುವುದು ಮತ್ತು ಓಡುವುದು. ಸ್ವಾತಂತ್ರ‍್ಯ ಸಿಕ್ಕಿತು, ಬ್ರಿಟಿಷರನ್ನು ಓಡಿಸಿ ಆಗಿತ್ತು, ಈಗ ಓಡುವುದು ಭಾರತೀಯರ ಸರದಿ. ಭಯವೆಂಬುದು ಪೀಳಿಗೆಯ ಭಯವಾಗಿ, ಮಕ್ಕಳಲ್ಲಿ ವಿಸ್ತರಿಸಿಕೊಂಡಿದೆ.
ದೇಶ ಇಬ್ಬಾಗವಾದಂದಿನಿAದ ಸುವರ್ಣ ಸ್ವಾತಂತ್ರ ಉತ್ಸವದವರೆಗಿನ ಪ್ರಮುಖ ಘಟನೆಗಳನ್ನು ಆರ್ಥಿಕ, ಧಾರ್ಮಿಕ, ಸಾಮಾಜಿಕ, ವಸ್ತು ಸಾಂಗತ್ಯದಲ್ಲಿ ಧಾರಣ ಮಾಡಿಕೊಂಡ ಭಾರತದ ಬದುಕಿನ ಅನುಭವ ಕಥನ ಈ ಪ್ರಸ್ತುತಿ. ಪ್ರಸ್ತುತ ಕೃತಿಯ ಮುಖಾಂತರ ಚಾಂದ್ ಅಲೀ ಸಮಾಜದ ಅಪನಂಬಿಕೆ ಹಾಗೂ ಸಂಘರ್ಷಗಳನ್ನು ಕಡಿಮೆ ಮಾಡುವಲ್ಲಿ ಸಮ ಸಮಾಜದ ಕನಸಿನ ಕೊಂಡಿಯಾಗಿ, ಸಾಮರಸ್ಯದ ಸಂಕೇತವಾಗಿ ಉಳಿಯುವುದೇ ಈ ನಾಟಕದ ವೈಶಿಷ್ಟ್ಯ.
Dr. M. Byregowda
9448102158









