--Ads--

ಮೈಸೂರಿನಲ್ಲಿ ಗೋ ಪಯಣ ಆಪ್‌ ಗೆ ಚಾಲನೆ

On: June 6, 2026 3:01 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮೈಸೂರಿನಲ್ಲಿ ಗೋ ಪಯಣ ಆಪ್‌ ಗೆ ಚಾಲನೆ

ತಾಂಡವಪುರ ಜೂನ್ 5: ರಾಜ್ಯದಲ್ಲಿ ಆಟೋ, ಕ್ಯಾಬ್ ಮೊದಲಾದವು ಬಳಸಿಕೊಳ್ಳುತ್ತಿರುವ ಆಪ್‌ಗಳು, ಈ ರೀತಿಯ ಸೇವೆಗಳು ಹೊರ ರಾಜ್ಯ ಇಲ್ಲವೇ ಹೊರ ದೇಶದ್ದಾಗಿವೆ. ಹೀಗಾಗಿ ಇಲ್ಲಿನದೇ ಆದ ಗೋ ಪಯಣ ಎಂಬ ಆಪ್ ಸೌಲಭ್ಯ ರೂಪಿಸಿದ್ದು, ಇದಕ್ಕೆ ಜೂ.೭ರ ಬೆಳಗ್ಗೆ ೧೦ಕ್ಕೆ ಮೈಸೂರಿನ ನಂಜುಮಳಿಗೆಯ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಚಾಲನೆ ದೊರೆಯುತ್ತಿದೆ ಎಂದು ಇಂಡಿಯಾ ಮೈಂಡ್ ಟೆಕ್ನಾಲಜೀಸ್ ಎಲ್‌ಎಲ್‌ಪಿ ಸಂಸ್ಥಾಪಕ ಡಾ.ಮುರಳಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿ, ಆಟೋ ಚಾಲಕರು ಒಂದು ಬಾರಿ ೨೫ ರೂ. ಹಾಗೂ ಕ್ಯಾಬ್ ಚಾಲಕರು ೮೫ ರೂ. ಪಾವತಿಸಿದಲ್ಲಿ ಇದು ದಿನದ ೨೪ ಗಂಟೆ ಸಕ್ರಿಯವಾಗಿರುತ್ತದೆ. ನಗರದ ಪ್ರದೇಶ ಮಾತ್ರವಲ್ಲ, ಗ್ರಾಮಾಂತರ ಪ್ರದೇಶದಲ್ಲಿನ ಆಟೋ, ಕ್ಯಾಬ್ ಚಾಲಕರು ಸಹಾ ಸದಸ್ಯರಾಗಬಹುದಾಗಿದೆ.

ಈ ಆಪ್ ಬಳಸಿಕೊಂಡು ಪ್ರಯಾಣಿಸುವವರು ನೇರವಾಗಿ ಆಟೋ ಅಥವಾ ಕ್ಯಾಬ್ ಚಾಲಕರಿಗೇ ಹೋಗುತ್ತದೆ. ಆದರೆ ಈ ವ್ಯವಸ್ಥೆ ಇತರೆ ಆಪ್‌ಗಳಲ್ಲಿಲ್ಲ. ಅದು ನೇರವಾಗಿ ಕಂಪನಿಗೆ ಹೋಗಿ ಬಹಳಷ್ಟು ಸಮಯದ ಬಳಿಕ ಸಂದಾಯವಾಗುತ್ತದೆ. ಈ ರೀತಿಯ ವಿಳಂಬ ತಮ್ಮ ಗೋ ಪಯಣದಲ್ಲಿಲ್ಲ ಎಂದು ವಿವರಿಸಿದರು.

ಇದಲ್ಲದೆ, ಸರ್ಕಾರ ನಿಗದಿ ಪಡಿಸಿದ ದರವನ್ನು ಮಾತ್ರ ಪ್ರಯಾಣಿಕರು ಪಾವತಿಸುತ್ತಾರೆ. ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಗುಪ್ತ ವೆಚ್ಚ ಇರುವುದಿಲ್ಲ. ರಾಜ್ಯದ ಜನತೆಯ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಈ ಆಪ್ ರೂಪಿಸಲಾಗಿದೆ ಎಂದು ವಿವರಿಸಿದರು.
ಸಿಇಓ ಪೃಥ್ವಿ, ಧನುಷ್, ನವನೀತ್ ಹಾಜರಿದ್ದರು

WhatsApp

Join Now

Telegram

Join Now

Instagram

Join Now