ವಿಜಯ ದರ್ಪಣ ನ್ಯೂಸ್……
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: ಕೇಂದ್ರ ಕನ್ನಡ ಕ್ರಿಯಾ ಸಮಿತಿ
ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಮತ್ತು ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರ ಅಭಿನಂದನಾ ಸಮಾರಂಭ

ಬೆಂಗಳೂರು, ನಯನ ಸಭಾಂಗಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಹಾಗೂ ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರ ಅಭಿನಂದನಾ ಸಮಾರಂಭ ಮತ್ತು ನಾಡಹಣತೆಗಳು ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಹಂಪಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ ಹಿ.ಚಿ.ಬೋರಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಡೋಜ ಮನು ಬಳಿಗಾರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಸಾಹಿತಿ ಡಾ.ಪದ್ಮನಿ ನಾಗರಾಜು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗೌರವಾಧ್ಯಕ್ಷ ವ.ಚ.ಚನ್ನೇಗೌಡರು, ರಾಜ್ಯಾಧ್ಯಕ್ಷ ಕೆ.ಎಸ್.ಪ್ರಭುಸ್ವಾಮಿ,ರಾಜ್ಯ ಕಾರ್ಯಾಧ್ಯಕ್ಷ ಕೆ.ಎಸ್.ಎ.ಹುಸೇನ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ನಾಡೋಜ ಮನು ಬಳಿಗಾರ್ ರವರು ಮಾತನಾಡಿ ಎಲ್ಲರು ಸೇರಿ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಶುದ್ದ ಕನ್ನಡದ ಹೃದಯ ವೈಶಾಲ್ಯವಿರುವ ವ್ಯಕ್ತಿ ವ.ಚ.ಚನ್ನೇಗೌಡರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸ್ಥಾನದಲ್ಲಿ ವ.ಚ.ಚನ್ನೇಗೌಡರು ಒಂದು ರೂಪಾಯಿ ಗೌರವಧನ ಸ್ವೀಕರಿಸದೇ ಪರಿಷತ್ ನ ಸೇವೆ ಸಲ್ಲಿಸಿದರು. ಗಟ್ಟಿತನ ಪ್ರಾಮಾಣಿಕತೆ, ಕ್ರಿಯಾಶೀಲತೆವುಳ್ಳ ವ್ಯಕ್ತಿ ವ.ಚ.ಚನ್ನೇಗೌಡರು.
ಎಲ್ಲ ಕನ್ನಡ ಪರ ಹೋರಾಟಗಳಲ್ಲಿ ವ.ಚ.ಚನ್ನೇಗೌಡರು ಪ್ರಮುಖ ಪಾತ್ರವಹಿಸಿದರು.
ಹಿ.ಚಿ.ಬೋರಲಿಂಗಯ್ಯ ರವರು ಮಾತನಾಡಿ ವ.ಚ.ಚನ್ನೇಗೌಡರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ 39ವರ್ಷ ವೃತ್ತಿ ಸೇವೆ ಜೊತೆಯಲ್ಲಿ ಕನ್ನಡ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಅತ್ಯಂತ ಸರಳತೆ, ಘನತೆ ಇರುವ ಸಜ್ಜನಿಕೆ ಮೂಲಕ ಕನ್ನಡ ಚಳುವಳಿಯನ್ನು ಕಟ್ಟಿದವರು ವ.ಚ.ಚನ್ನೇಗೌಡರು.
ತಮಿಳಿಗರ ಸಂಗಮ ಸಾಹಿತ್ಯವನ್ನು ಆರಾಧಿಸುತ್ತಾರೆ , ಸಂಗಮ ಸಾಹಿತ್ಯದಲ್ಲಿ ಮೈಸೂರು ಮತ್ತು ಮೈಸೂರಿನ ಇತಿಹಾಸ ತಿಳಿಸುತ್ತದೆ. ಯಾವ ಸರ್ಕಾರಗಳು ನನ್ನ ತಾಯಿ ನುಡಿ ಎಂದು ಕನ್ನಡ ಭಾಷೆಯನ್ನು ರಕ್ಷಣೆ ಮಾಡಲ್ಲಿಲ, ಶಿಕ್ಷಣವನ್ನು ಉದ್ಯೋಗ ಮಾಡಿಕೊಂಡು ಕನ್ನಡವನ್ನು ಬಡವರಾಗಿ ಮಾಡುತ್ತಿದ್ದಾರೆ.
ರಾಜ್ಯ ಮತ್ತು ಕನ್ನಡ ಭಾಷೆ ಉಳಿಸಲು ಕನ್ನಡ ಪರ ಹೋರಾಟಗಾರರ ಅವಶ್ಯಕತೆ ತುಂಬ ಇದೆ. 1ನೇ ತರಗತಿಯಿಂದ 7 ನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು. ಅಂಗ್ಲ ಒಂದು ಪಠ್ಯವಾಗಿ ಇದ್ದರೆ ಸಾಕು ಎಂದು ಹೇಳಿದರು.












