--Ads--

ರಾಯರ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟಾಕ್ಷರ ಹೋಮ

On: June 15, 2026 2:44 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ರಾಯರ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟಾಕ್ಷರ ಹೋಮ

ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ ಹಾಗೂ ನೂತನ ವ್ಯವಸ್ಥಾಪಕ ಶ್ರೀ ನಂದಕಿಶೋರಾಚಾರ್ ಇವರ ನೇತೃತ್ವದಲ್ಲಿ ಅಧಿಕಮಾಸದ ಪ್ರಯುಕ್ತ ಲೋಕಕಲ್ಯಾಣಕ್ಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟಾಕ್ಷರ ಹೋಮವನ್ನು ಶ್ರೀಮಠದಿಂದ ವಿಶೇಷವಾಗಿ ನೆರವೇರಿಸಲಾಯಿತು,
ಈ ಸಂದರ್ಭದಲ್ಲಿ ಸೇವಾಕತೃಗಳ ಹೆಸರನ್ನು ಉಚ್ಚರಿಸಿ ಸಂಕಲ್ಪವನ್ನು ಮಾಡಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಕಲಶದಲ್ಲಿ ಮತ್ತು ರಂಗೋಲಿಯಲ್ಲಿ ಹಾಗೂ ಹೋಮದ ಯಜ್ಞದಲ್ಲಿ ಶ್ರೀಹರಿ ವಾಯು ಗುರುಗಳನ್ನು ಪ್ರಾರ್ಥಿಸಿ ರಾಘವೇಂದ್ರ ಸ್ತೋತ್ರ ಅಷ್ಟಾಕ್ಷರ ಹೋಮವನ್ನು ಪುರೋಹಿತರಾದ ಶ್ರೀ ಇಂದಿರೇಶ ಆಚಾರ್ಯರು ವಿಶೇಷವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಪುಷ್ಪಗಳಿಂದ ಅರ್ಚಕ ಶ್ರೀನಿವಾಸ ಆಚಾರ್ಯರು ಪುಷ್ಪಾಲಂಕಾರವನ್ನು ಮಾಡಿದ್ದರು. ತದನಂತರ ರಥೋತ್ಸವದೊಂದಿಗೆ ಮಹಾ ಮಂಗಳಾರತಿಯು ನೆರವೇರಿತು.
ಸೇವಾ ಕರ್ತೃಗಳು ಭಕ್ತರು ಭಾಗವಹಿಸಿ ಗುರುಗಳ ಪಾದೋದಕ, ಮಂತ್ರಾಕ್ಷತೆ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
_______________________

ದಾಸವಾಣಿ ಕರ್ನಾಟಕದಿಂದ 33 ಕೃತಿಗಳ ಗಾಯನ ಸಮರ್ಪಣೆ

ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಅಧಿಕ ಮಾಸದ ಕೊನೆಯ ದಿನದ ಅಂಗವಾಗಿ ದಾಸವಾಣಿ ಕರ್ನಾಟಕ ಸಂಸ್ಥೆಯ ವತಿಯಿಂದ ‌ಶ್ರೀಮತಿ ಮಾನಸ ಕುಲಕರ್ಣಿ, ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಶ್ರೀಮತಿ ಶ್ರೀಲಕ್ಷ್ಮಿ ಹರೀಶ್ ಇವರ ನೇತೃತ್ವದಲ್ಲಿ 33 ಮಹಿಳಾ ಮಣಿಯರಿಂದ 33 ಹರಿದಾಸರ ಕೀರ್ತನೆಗಳನ್ನು ಗಾಯನದ ಮೂಲಕ ರಾಯರ ಸನ್ನಿಧಿಯಲ್ಲಿ ಸಮರ್ಪಿಸಿ ಸೇವೆ ಸಲ್ಲಿಸಿದರು.

WhatsApp

Join Now

Telegram

Join Now

Instagram

Join Now