--Ads--

ಜೆಡಿಎಸ್ ರಾಜ್ಯ ಕೋರ್ ಸಮಿತಿ ಸದಸ್ಯರಾಗಿ ಜಿ ಆನಂದ್ ರೆಡ್ಡಿ ನೇಮಕ

On: June 14, 2026 5:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಜೆಡಿಎಸ್ ರಾಜ್ಯ ಕೋರ್ ಸಮಿತಿ ಸದಸ್ಯರಾಗಿ ಜಿ ಆನಂದ್ ರೆಡ್ಡಿ ನೇಮಕ

ಮುಳಬಾಗಿಲು: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರನ್ನಾಗಿ ಶಿನಿಗೇನಹಳ್ಳಿ ಜಿ ಆನಂದ್ ರೆಡ್ಡಿ ಅವರನ್ನು ನೇಮಕ ಮಾಡಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ರೆಡ್ಡಿ ಸಮುದಾಯದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಾಲ್ಲೂಕು ರೆಡ್ಡಿ ಜನಸಂಘದ ಅಧ್ಯಕ್ಷ ಕಗ್ಗಿನಹಳ್ಳಿ ಕೇಶವರೆಡ್ಡಿ ತೀರಿಸಿದರು.
ತಾಲ್ಲೂಕುನ ಶಿನಿಗೇನಹಳ್ಳಿ ಜಿ ಆನಂತರ ರೆಡ್ಡಿ ಅವರ ನಿವಾಸದಲ್ಲಿ ನೂರಾರು ಮುಖಂಡರು ಜೊತೆಗೂಡಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾಗಿ ನೇಮಕಗೊಂಡಿರುವ ಜಿ ಆನಂದ್ ರೆಡ್ಡಿ ಅವರಿಗೆ ಕೊಡಿಸಿದ್ದ ಅಭಿನಂದನ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ಮಾತನಾಡಿ. ಇದುವರೆಗೂ ಯಾವುದೇ ಪಕ್ಷ ರೆಡ್ಡಿ ಸಮುದಾಯದವರಿಗೆ ಮಾಡಿಲ್ಲ ಆದರೆ ಜಿ ಆನಂದ್ ರೆಡ್ಡಿ ಅವರು ಸಾಮಾಜಿಕ ಕಳಕಳಿ ಸಂಘಟನಾ ಶಕ್ತಿ ಹಾಗೂ ನಾಯಕತ್ವದ ಗುಣಗಳನ್ನು ನೋಡಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಿರುವುದು ಸ್ವಾಗತ ವಾಗಿದೆ ಎಂದು ತಿಳಿಸಿದರು.
ರೆಡ್ಡಿ ಜನ ಸಂಘದ ಖಜಾಂಚಿ ಹೈಡ್ಲಾಪುರ ಜಯರಾಮ್ ರೆಡ್ಡಿ ಮಾತನಾಡಿ, ತಾಲ್ಲೂಕಿನ ರೆಡ್ಡಿ ಸಮುದಾಯದಲ್ಲಿ ಜಿ ಯಾನಂದ್ ರೆಡ್ಡಿ ಪ್ರಭಾವಿ ನಾಯಕರಾಗಿದ್ದು ಎಲ್ಲಾ ಸಮುದಾಯಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಯಾವ ಪಕ್ಷದಲ್ಲಿ ಇರುತ್ತಾರೋ ಅಲ್ಲಿ ರೆಡ್ಡಿ ಸಮುದಾಯ ಇರುತ್ತೆ. 2028 ರಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಸಾಮಾನ್ಯ ಕ್ಷೇತ್ರವಾದರೆ ಜಿ ಆನಂದ್ ರೆಡ್ಡಿ ಅವರು ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿಸಿದರು.
ಮುಳಬಾಗಲು ತಾಲ್ಲೂಕಿನಲ್ಲಿ ಮೊದಲು ಸಾಮಾನ್ಯ ಕ್ಷೇತ್ರ ಬಂದಾಗ ಪ್ರಥಮವಾಗಿ ಜೆಎಂ ರೆಡ್ಡಿ ಅವರು ಶಾಸಕರಾಗಿ ಆಯ್ಕೆ ಆಗಿದ್ದರು. ಅದೇ ರೀತಿಯ ಮುಂದಿನ ದಿನಗಳಲ್ಲಿ ತಾಲ್ಲೂಕು ಸಾಮಾನ್ಯ ಕ್ಷೇತ್ರ ಮೀಸಲು ಬಂದರೆ ನಮ್ಮ ಸಮುದಾಯದ ಜಿ ಆನಂದ್ ರೆಡ್ಡಿ ಅವರನ್ನು ಶಾಸಕನಾಗಿ ಮಾಡಲು ನಮ್ಮ ಆಸೆ ಇದೆ ಎಂದು ಎಲ್ಲಾ ರೆಡ್ಡಿ ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಅಭಿನಂದನೆ ಸ್ವೀಕರಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟ ಸದಸ್ಯ ಜಿ ಆನಂದ್ ರೆಡ್ಡಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಪಕ್ಷದಲ್ಲಿ ಉತ್ತಮ ಸ್ಥಾನ ನೀಡಿದ್ದು ಅವರ ಆಶಯದಂತೆ ಪಕ್ಷದ ಸಂಘಟನೆಗೆ ಹೆಚ್ಚು ಹೊತ್ತು ನೀಡುತ್ತೇನೆ ಎಂದರು.
ಸ್ಥಳೀಯ ಶಾಸಕ ಸಮೃದ್ಧಿ ವಿ ಮಂಜುನಾಥ್. ರಾಜು  ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ಕೋರ್ ಕಮಿಟ ರಾಜ್ಯಾಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಾಡೆನಹಳ್ಳಿ ನಾಗರಾಜ್. ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಜಿಲ್ಲಾ ಮುಖಂಡರು ನನಗೆ ಸಂಪೂರ್ಣ ಸಹಕಾರ ನೀಡಿದ್ದರಿಂದ ಆಯ್ಕೆಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಂ ಸುಬ್ರಮಣ್ಯ ರೆಡ್ಡಿ. ತಾಲ್ಲೂಕು ಉಪಾಧ್ಯಕ್ಷ ರಾಜಾರೆಡ್ಡಿ, ರಾಜ್ಯ ಮಾಜಿ ಕಾರ್ಯಕಾರಿ ಸಂಸ್ಥೆ ಸದಸ್ಯ ಅಶೋಕ್ ಆನಂದ್ ರೆಡ್ಡಿ. ಜೈರಾಮ್ ರೆಡ್ಡಿ. ರೆಡ್ಡಪ್ಪ ರೆಡ್ಡಿ. ಸುಬ್ಬಾರೆಡ್ಡಿ ಸ್ವಾಮಿ, ಮೋಹನ್ ರೆಡ್ಡಿ. ಕೃಷ್ಣಾರೆಡ್ಡಿ. ವೆಂಕಟರಮಣ ರೆಡ್ಡಿ. ಅಮರಾವತಮ್ಮ ಕೇಶವರೆಡ್ಡಿ. ಬ್ರಹ್ಮಾನಂದ ರೆಡ್ಡಿ. ಶ್ರೀನಿವಾಸ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now