--Ads--

ಆದಿವಾಸಿಗಳ ಪೌಷ್ಠಿಕ ಕಿಟ್‌ ವಿಳಂಬ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

On: June 16, 2026 6:07 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಆದಿವಾಸಿಗಳ ಪೌಷ್ಠಿಕ ಕಿಟ್‌ ವಿಳಂಬ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ತಾಂಡವಪುರ ಜೂನ್ 16: ಆದಿವಾಸಿಗಳ ಪೌಷ್ಠಿಕ ಕಿಟ್‌ ವಿಳಂಬ ಸೇರಿ ತಮ್ಮ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಮೈಸೂರು ಘಟಕ ಪ್ರತಿಭಟಿಸಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಘಟಕದ ಸದಸ್ಯರು ಎಪ್ರಿಲ್‌, ಮೇ, ಜೂನ್‌ ತಿಂಗಳ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ಕೂಡಲೇ ಬಿಡುಗಡೆ ಗೊಳಿಸಬೇಕು. ಅಕ್ಕಿ ಜತೆಗೆ ರಾಗಿಯನ್ನು ವಿತರಿಸಬೇಕು. ಗುಣಮಟ್ಟ ಹಾಗೂ ವಿಳಂಬವನ್ನು ತಡೆಗಟ್ಟಬೇಕು.
ಕಳೆದ ವರ್ಷದಲ್ಲಿ ಬಾಕಿ ಉಳಿಸಿಕೊಂಡಿರುವ ೨ತಿಂಗಳ ಕಿಟ್‌ ಅನ್ನು ಸಹ ವಿತರಿಸಬೇಕು. ಜಿಲ್ಲೆಯ ಆದಿವಾಸಿಗಳಿಗೆ ಮನೆ, ಶೌಚಾಲಯ, ರಸ್ತೆ, ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

WhatsApp

Join Now

Telegram

Join Now

Instagram

Join Now