ವಿಜಯ ದರ್ಪಣ ನ್ಯೂಸ್….
ಸುಗಟೂರಿನಲ್ಲಿ ಶ್ರೀಚೌಡೇಶ್ವರಿ ದೇವಸ್ಥಾನದ ಮಹಾಕುಂಭಾಭಿಷೇಕ ಯಶಸ್ವಿ ಸುಸಂಪನ್ನ

ಶಿಡ್ಲಘಟ್ಟ :ದೇಶದ ಭವ್ಯತೆಯು ಸಾಕಾರಗೊಳ್ಳ ಬೇಕಾದರೆ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆಧುನಿಕತೆಯ ಈ ದಿನಗಳಲ್ಲಿ ಯುವ ಪೀಳಿಗೆಗೆ ನಮ್ಮ ಸಂಸ್ಕಾರ,ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ ಎಂದು ತೊಗಟವೀರ ಕ್ಷತ್ರಿಯ ಶ್ರ ಪುಷ್ಪಾಂಡಜ ಮಹರ್ಷಿ ಆಶ್ರಮದ ಶ್ರೀದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ನಡೆದ ಶ್ರೀಚೌಡೇಶ್ವರಿ ದೇವಸ್ಥಾನದ ಪ್ರತಿಷ್ಟಾಪನೆ, ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರ ಮಾತನಾಡಿದರು.
ಸುಗಟೂರಿನ ಇಕೋ ಕ್ಲಬ್ ಶಾಲಾ ಮಕ್ಕಳು ದೇವಸ್ಥಾನದಆಹ್ವಾನ ಪತ್ರಿಕೆಯೊಂದಿಗೆ ಶ್ರೀಗಂಧದ ಸಸಿಗಳನ್ನು ಹಂಚಿ ಪರಿಸರ ಮತ್ತು ಧರ್ಮ ಎರಡನ್ನೂ ಆರಾಧಿಸಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು
ಪ್ರಶಂಸೆ ಮಾಡಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ,
ಗ್ರಾಮೀಣ ಭಾಗಗಳಲ್ಲಿ ಇಂತಹ ಧಾರ್ಮಿಕ ಆಚರಣೆಗಳುಕೇವಲ ಪೂಜೆಗೆ ಸೀಮಿತವಾಗದೆ, ಸಮಾಜದಲ್ಲಿ ಒಗ್ಗಟ್ಟುಮತ್ತು ಸಾಮರಸ್ಯವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ ಎಂದು ನುಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಭಾರತ ದೇಶವು ಧರ್ಮ ಮತ್ತು ಸಂಸ್ಕೃತಿಯ ಭದ್ರ ಬುನಾದಿಯ ಮೇಲೆ ನಿಂತಿದೆ ಎಂದರು.
ದೇವಾಲಯದ ದಾನಿ ಎಸ್ಎಲ್ಎನ್ ಟ್ರಸ್ಟ್ನ ಅಧ್ಯಕ್ಷ ದೇವನಹಳ್ಳಿಯ ಸಿ.ಅಶ್ವತ್ಥನಾರಾಯಣ್ ಮಾತನಾಡಿ, ದೇವಾಲಯಗಳನ್ನು ಸಂಸ್ಕೃತಿಯನ್ನು ಪೋಷಿಸುವ ಶಕ್ತಿ ಕೇಂದ್ರಗಳಾಗಿ ಬೆಳೆಸಬೇಕು, ಕೇವಲ ಇಟ್ಟಿಗೆ-ಕಲ್ಲುಗಳ ಕಟ್ಟಡವಾಗಿ ನೋಡದೆ ಭಕ್ತಿಬಾವ ಬಿಂಬಿಸುವ ಆಲಯಗಳಂತೆ ಬಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.












