ವಿಜಯ ದರ್ಪಣ ನ್ಯೂಸ್…..
ಅಪೋಲೋ ಕ್ಯಾನ್ಸರ್ ಸೆಂಟರ್ಸ್ ಗಾರ್ಡಿಯನ್ ಹೆಲ್ತ್ ನ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಪರೀಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ ತರುತ್ತಿರುವ ಸಂಸ್ಥೆಯಾಗಿದೆ
ಜೈಡಸ್ ಲೈಫ್ ಸೈನ್ಸಸ್ ಜೊತೆಯಲ್ಲಿ ಈ ರಕ್ತ-ಆಧರಿತ ಕ್ಯಾನ್ಸರ್ ಪರೀಕ್ಷೆಯನ್ನು ದೇಶದಲ್ಲಿ ವಿಸ್ತರಿಸಲು ಒಡಂಬಡಿಕೆಗೆ ಸಹಿ

ಚೆನ್ನೈ, ಜುಲೈ 3, 2026: ಕ್ಯಾನ್ಸರ್ನಿಂದ ಬದುಕುಳಿಯುವ ಸಾಧ್ಯತೆಯನ್ನು ಹಾಗೂ ರೋಗಿಗಳ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದು ಅತ್ಯಂತ ಪ್ರಬಲವಾದ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ, ಭಾರತದ ಪ್ರಮುಖ ಮತ್ತು ಸಮಗ್ರ ಕ್ಯಾನ್ಸರ್ ಆರೈಕೆ ಸೇವೆ ಒದಗಿಸುವ ಸಂಸ್ಥೆಯಾದ ಅಪೊಲೊ ಕ್ಯಾನ್ಸರ್ ಸೆಂಟರ್ಸ್, ನಿಖರ ಆಂಕಾಲಜಿ ಕಂಪನಿಯಾದ ಗಾರ್ಡಂಟ್ ಹೆಲ್ತ್ (ನಾಸ್ಡಾಕ್ ಜಿ.ಎಚ್) ಅಭಿವೃದ್ಧಿಪಡಿಸಿರುವ ಶೀಲ್ಡ್™️ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್(ಎಂಸಿಡಿ) ಪ್ರಯೋಗಾಲಯ ಪರೀಕ್ಷೆಯನ್ನು ಭಾರತದಲ್ಲಿ ಪರಿಚಯಿಸಲು ಜೈಡಸ್ ಲೈಫ್ಸೈನ್ಸಸ್ ಸಂಸ್ಥೆಯೊಂದಿಗೆ ಇಂದು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಬಿಡುಗಡೆಯೊಂದಿಗೆ, ಭಾರತದಲ್ಲಿ ಈ ತಪಾಸಣಾ ಪರೀಕ್ಷೆಯನ್ನು ಒದಗಿಸುತ್ತಿರುವ ಮೊದಲ ಆರೋಗ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸಿಸಿಗಳು ಪಾತ್ರವಾಗಿವೆ.
ಭಾರತದ ಕ್ಯಾನ್ಸರ್ ಹೊರೆಯು 2040ರ ವೇಳೆಗೆ 2.08 ಮಿಲಿಯನ್ ಪ್ರಕರಣಗಳಿಗೆ ಹೆಚ್ಚಾಗುವ ನಿರೀಕ್ಷೆ ಇದ್ದು 2020 ರಿಂದ ಶೇ.57.5ರಷ್ಟು ಹೆಚ್ಚಳ ಕಂಡಿದ್ದು ಸಕಾಲಿಕ ಬೆಂಬಲ, ಪ್ರಾರಂಭಿಕ ಮಧ್ಯಪ್ರವೇಶ ಮತ್ತು ವಿಶ್ವಾಸಾರ್ಹ ಮಾಹಿತಿಯು ಅತ್ಯಂತ ಪ್ರಮುಖ ಅಗತ್ಯವಾಗಿದೆ. 2022ರಲ್ಲಿ 1.41 ಮಿಲಿಯನ್ . ಮೀರಿ ಭಾರತೀಯರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಮರಣಕ್ಕೆ ಪ್ರಮುಖ ಕಾರಣವಾಗಿದ್ದು ಬಾಯಿ ಕ್ಯಾನ್ಸರ್ ಪುರುಷರಲ್ಲಿ ಅತ್ಯಂತ ಹೆಚ್ಚಾಗಿರುವ ಕ್ಯಾನ್ಸರ್ ಆಗಿದೆ . ಹೆಚ್ಚುತ್ತಿರುವ ಹೊರೆಯ ನಡುವೆಯೂ ದೇಶಾದ್ಯಂತ ಕ್ಯಾನ್ಸರ್ ಪರೀಕ್ಷೆ ಪ್ರಮಾಣಗಳು ಕಡಿಮೆಯಾಗಿವೆ ಮತ್ತು ಅಸಮಾನವಾಗಿವೆ” ಎಂದರು.
ಈಮಹತ್ವದ ಮೈಲಿಗಲ್ಲಿನ ಕುರಿತು ಅಪೋಲೋ ಹಾಸ್ಪಿಟಲ್ಸ್ ಕಾರ್ಯ ನಿರ್ವಾಹಕ ಉಪಾಧ್ಯಕ್ಷೆ ಡಾ.ಪ್ರೀತಾ ರೆಡ್ಡಿ, “”ಅಪೋಲೋದಲ್ಲಿ, ಆರೋಗ್ಯ ರಕ್ಷಣೆಯ ಭವಿಷ್ಯವು ರೋಗ ತಡೆಗಟ್ಟುವಿಕೆ ಮತ್ತು ಮುಂಚಿತವಾಗಿ ಪತ್ತೆಹಚ್ಚುವುದರಲ್ಲಿ ಅಡಗಿದೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಕ್ಯಾನ್ಸರ್ ನಮ್ಮ ಕಾಲದ ಅತ್ಯಂತ ಗಂಭೀರ ಆರೋಗ್ಯ ಸವಾಲುಗಳಲ್ಲಿ ಒಂದಾಗಿ ಉಳಿದಿದೆ, ಮತ್ತು ತಪಾಸಣೆ ಮೂಲಕ ಮುಂಚಿತವಾಗಿ ಪತ್ತೆಹಚ್ಚುವುದು ಬಹುಶಃ ಅದರ ಫಲಿತಾಂಶದ ಮೇಲೆ ಗರಿಷ್ಠ ಪರಿಣಾಮ ಬೀರುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದಲ್ಲಿ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಟೆಸ್ಟ್ನ ಪರಿಚಯವು ಆವಿಷ್ಕಾರದತ್ತ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಭಾರತದಾದ್ಯಂತ ಜನರಿಗೆ ಸುಧಾರಿತ ರೋಗಪರೀಕ್ಷೆಯ ಪರಿಹಾರಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ದೇಶದಾದ್ಯಂತ ಕ್ಯಾನ್ಸರ್ ಪರೀಕ್ಷೆ ದರಗಳು ಕಡಿಮೆಯಿರುವುದರಿಂದ, ಈ ಟೆಸ್ಟ್ ಕ್ಯಾನ್ಸರ್ ತಡೆಗಟ್ಟುವಿಕೆ, ಪರೀಕ್ಷೆ ಮತ್ತು ಮುಂಚಿತವಾಗಿ ಪತ್ತೆಹಚ್ಚುವಿಕೆಯ ಕುರಿತಾದ ಚರ್ಚೆಗಳನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡುತ್ತದೆ” ಎಂದರು.
ಶೀಲ್ಡ್ ಎಮ್ಸಿಡಿ ಟೆಸ್ಟ್ ಎಂಬುದು ಕ್ಯಾನ್ಸರ್ ಬರುವ ಸಾಮಾನ್ಯ ಸರಾಸರಿ ಅಪಾಯವನ್ನು ಹೊಂದಿರುವ 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಮೂತ್ರಕೋಶ, ದೊಡ್ಡ ಕರುಳು, ಸ್ತನ, ಪ್ರೊಸ್ಟೇಟ್, ಅನ್ನನಾಳ, ಜಠರ, ಯಕೃತ್ತು, ಶ್ವಾಸಕೋಶ, ಅಂಡಾಶಯ ಮತ್ತು ಮೇದೋಜ್ಜೀರಕ ಗ್ರಂಥಿ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ಗಳನ್ನು ಪತ್ತೆಹಚ್ಚಲು ಬಳಸಲಾಗುವ ಮೆತಿಲೇಶನ್-ಆಧಾರಿತ ರಕ್ತದ ಪರೀಕ್ಷೆಯಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ, ಉದಯೋನ್ಮುಖ ಎಮ್ಸಿಡಿ ತಂತ್ರಜ್ಞಾನವನ್ನು ಮೌಲ್ಯಮಾಪನ ಮಾಡುವ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವ್ಯಾನ್ಗಾರ್ಡ್ ಅಧ್ಯಯನದಲ್ಲಿ ಕ್ಯಾನ್ಸರ್ಗಳ ಉಪಸ್ಥಿತಿ ಮತ್ತು ಕ್ಯಾನ್ಸರ್ ಅಂಗಾಂಶಗಳ ಮೂಲವನ್ನು ನಿಖರವಾಗಿ ಊಹಿಸುವಲ್ಲಿ ಅದರ ಅತ್ಯುತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ, ಶೀಲ್ಡ್ ಎಮ್ಸಿಡಿ ಟೆಸ್ಟ್ ಗೆ ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ನಿಂದ ಬ್ರೇಕ್ಥ್ರೂ ಡಿವೈಸ್ ಡೆಸಿಗ್ನೇಶನ್ ಮಾನ್ಯತೆ ದೊರೆತಿದೆ.
ಅಪೊಲೋ ಹಾಸ್ಪಿಟಲ್ಸ್ನ ಆಂಕಾಲಜಿ ವಿಭಾಗದ ಸಿಇಒ ಮತ್ತು ಕ್ಲಿನಿಕಲ್ ಹೆಡ್ ಡಾ. ಹರಿತ್ ಕೆ. ಚತುರ್ವೇದಿ ಅವರು, “ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಟೆಸ್ಟ್ ಎಂಬುದು ಕೆಲವು ನಿರ್ದಿಷ್ಟ ಕ್ಯಾನ್ಸರ್ಗಳನ್ನು ಪತ್ತೆಹಚ್ಚುವಲ್ಲಿ ಬಲವಾದ ಸಂವೇದನಾಶೀಲತೆ ಮತ್ತು ನಿಖರತೆಯನ್ನು ಹೊಂದಿರುವ ಒಂದು ಸರಳ ರಕ್ತದ ಪರೀಕ್ಷೆಯಾಗಿದೆ; ಆದಾಗ್ಯೂ, ಒಂದೇ ಒಂದು ಪರೀಕ್ಷೆಯು ಕ್ಯಾನ್ಸರ್ನ ಆರಂಭಿಕ ಪತ್ತೆಗೆ ಸಂಪೂರ್ಣ ಪರಿಹಾರ ನೀಡುವ ಆದರ್ಶ ಸ್ಥಿತಿಯನ್ನು ತಲುಪಲು ನಾವು ಇನ್ನು ಸುದೀರ್ಘ ಹಾದಿಯನ್ನು ಕ್ರಮಿಸಬೇಕಿದೆ. ವೃತ್ತಿಪರ ಮಾರ್ಗದರ್ಶನದ ಅಡಿಯಲ್ಲಿ ಈ ಟೆಸ್ಟ್ ಅತ್ಯಂತ ಹೆಚ್ಚಿನ ಮೌಲ್ಯವನ್ನು ಒದಗಿಸುತ್ತದೆ” ಎನ್ನುತ್ತಾರೆ.
ಜೈಡಸ್ ಲೈಫ್ ಸೈನ್ಸಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್ ಪಟೇಲ್, “ಭಾರತದ ಪ್ರಮುಖ ಆಂಕಾಲಜಿ ಕಂಪನಿಯಾಗಿ, ನಾವು ಕ್ಯಾನ್ಸರ್ ಆರೈಕೆಯಲ್ಲಿ ರೋಗನಿರ್ಣಯದ ಪಾತ್ರವನ್ನು ಹೊಸ ರೀತಿಯಲ್ಲಿ ರೂಪಿಸುತ್ತಿದ್ದೇವೆ. ಅಸ್ತಿತ್ವದಲ್ಲಿರುವ ಸ್ಕ್ರೀನಿಂಗ್ ವಿಧಾನಗಳಿಗೆ ಪೂರಕವಾಗಿರುವ ಈ ನವೀನ ಸ್ಕ್ರೀನಿಂಗ್ ತಂತ್ರಜ್ಞಾನದ ಪ್ರವೇಶವನ್ನು ವಿಸ್ತರಿಸಲು, ಭಾರತದಲ್ಲಿ ಶೀಲ್ಡ್ ಎಮ್ಸಿಡಿಯನ್ನು ಪರಿಚಯಿಸಲು ಅಪೊಲೋ ಹಾಸ್ಪಿಟಲ್ಸ್ ಮತ್ತು ಗಾರ್ಡಂಟ್ ಹೆಲ್ತ್ ಜೊತೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ನಮ್ಮ ಶ್ರೇಣಿಯ ಕಂಪ್ಯಾನಿಯನ್ ಡಯಾಗ್ನಾಸ್ಟಿಕ್ಸ್ ಮೂಲಕ, ಉದ್ದೇಶಿತ ಜಾಗೃತಿ ಉಪಕ್ರಮಗಳ ಮೂಲಕ ನಾವು ಸಕಾಲಿಕ ಪರೀಕ್ಷೆ ಮತ್ತು ಪೂರ್ವಭಾವಿ ಆರೋಗ್ಯ ರಕ್ಷಣೆಯನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ. ನಿಖರವಾದ ರೋಗನಿರ್ಣಯದ ಲಭ್ಯತೆಯನ್ನು ವಿಸ್ತರಿಸುವ ಮೂಲಕ, ರೋಗಿಗಳ ಆರೈಕೆಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯಲು ನಾವು ಬದ್ಧರಾಗಿದ್ದೇವೆ” ಎಂದರು.
ಗಾರ್ಡಂಟ್ ಹೆಲ್ತ್ ಎಎಮ್ಇಎ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಮ್ರನ್ ಜಿತ್ ಸಿಂಗ್ ಅವರು, “ಅಪೊಲೋ ಕ್ಯಾನ್ಸರ್ ಸೆಂಟರ್ಸ್ ಮತ್ತು ನಮ್ಮ ದೀರ್ಘಕಾಲದ ವಾಣಿಜ್ಯ ಪಾಲುದಾರರಾದ ಜೈಡಸ್ ಲೈಫ್ಸೈನ್ಸಸ್ ಮೂಲಕ ಭಾರತಕ್ಕೆ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್’ ಟೆಸ್ಟ್ ಅನ್ನು ತರಲು ನಮಗೆ ಸಂತೋಷವಾಗಿದೆ. ಕ್ಯಾನ್ಸರ್ ಅನ್ನು ಮುಂಚಿತವಾಗಿ ಪತ್ತೆಹಚ್ಚುವುದು ಅದರ ಫಲಿತಾಂಶಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಕೇವಲ ಒಂದು ಬಾರಿ ರಕ್ತದ ಮಾದರಿಯನ್ನು ತೆಗೆದುಕೊಳ್ಳುವ ಮೂಲಕ ಕ್ಯಾನ್ಸರ್ಗೆ ಸಂಬಂಧಿಸಿದ ಸಂಕೇತಗಳನ್ನು ಗುರುತಿಸಲು ಶೀಲ್ಡ್ ಎಮ್ಸಿಡಿ ಒಂದು ಪ್ರಮುಖ ಪ್ರಗತಿಯಾಗಿದೆ. ನಾವೆಲ್ಲರೂ ಒಟ್ಟಾಗಿ, ಮುಂಚಿತವಾಗಿಯೇ ವೈದ್ಯಕೀಯ ಮೌಲ್ಯಮಾಪನಕ್ಕೆ ಬೆಂಬಲ ನೀಡುವ ಮತ್ತು ಭಾರತದಲ್ಲಿ ಕ್ಯಾನ್ಸರ್ ಆರೈಕೆಯ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವ ನವೀನ ಸ್ಕ್ರೀನಿಂಗ್ ತಂತ್ರಜ್ಞಾನಗಳ ಲಭ್ಯತೆಯನ್ನು ವಿಸ್ತರಿಸುತ್ತಿದ್ದೇವೆ” ಎಂದರು.
ಹಲವು ವರ್ಷಗಳಿಂದ, ಅಪೋಲೋ ಹಾಸ್ಪಿಟಲ್ಸ್ ಭಾರತೀಯ ಆರೋಗ್ಯ ಸೇವಾಕ್ಷೇತ್ರದಲ್ಲಿ ನಿರಂತರವಾಗಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದೆ. ಇದರಲ್ಲಿ ಸುಧಾರಿತ ರೊಬೊಟಿಕ್ ಸರ್ಜರಿ, ಸೈಬರ್ನೈಫ್ ರೇಡಿಯೋಸರ್ಜರಿ ಪ್ರೋಟಾನ್ ಥೆರಪಿ, ಪ್ರೆಸಿಷನ್ ಆಂಕಾಲಜಿ, ಜೀನೋಮಿಕ್ಸ್ ಮತ್ತು ಎಐ-ಸನ್ನದ್ಧ ಆರೋಗ್ಯ ರಕ್ಷಣಾ ಪರಿಹಾರಗಳು ಸೇರಿವೆ. ಇದೀಗ ಶೀಲ್ಡ್ ಎಮ್ಸಿಡಿ ಟೆಸ್ಟ್ನ ಪರಿಚಯವು ಕ್ಯಾನ್ಸರ್ ಆರೈಕೆ ಮತ್ತು ಆವಿಷ್ಕಾರದಲ್ಲಿ ಅದರ ನಾಯಕತ್ವವನ್ನು ಇನ್ನಷ್ಟು ಬಲಪಡಿಸುತ್ತದೆ.











