--Ads--

ಕೆಟ್ಟು ನಿಂತ ಎರಡು ಲಾರಿಗಳು :ಸಾಲುಗಟ್ಟಿ ನಿಂತು ವಾಹನಗಳು 

On: July 7, 2026 8:35 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕೆಟ್ಟು ನಿಂತ ಎರಡು ಲಾರಿಗಳು :ಸಾಲುಗಟ್ಟಿ ನಿಂತು ವಾಹನಗಳು 

ಮಡಿಕೇರಿ: ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಅಂಬಟ್ಟಿ ಬಳಿ ಎರಡು ವಾಹನಗಳ ಅವಘಡ .ಸಾಲುಗಟ್ಟಿ ನಿಂತ ವಾಹನಗಳು.ಇಂದು ಬೆಳಗ್ಗೆ ಎಂಟು ಗಂಟೆಗೆ ನಡೆದ ಅವಘಡ ದಿಂದಾಗಿ ಅನೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಸರಿಯಾದ ಸಮಯಕ್ಕೆ ತಲುಪದೆ ಇಕ್ಕಟ್ಟಿಗೆ ಸಿಲುಕಿದರು.

ಶಾಲಾ ವಾಹನಗಳ ಸುತ್ತಿ ಬಳಸಿ ಕೆಲವರು ಬಿಟ್ಟಂಗಾಲ ಬಾಳು ಗೋಡು ಮಾರ್ಗವಾಗಿ ವಿರಾಜಪೇಟೆ ಗೆ ಬಂದರೆ ಮತ್ತೆ ಕೆಲವು ವಾಹನಗಳು ಹಾತುರು ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆ ತಲುಪಿದವು.

ಮೂರು ಗಂಟೆಗಳ ಕಾಲ ಕೆಲವರು ಅಲ್ಲೆ ಸಾಲಿನಲ್ಲಿ ನಿಂತು ಕುಳಿತು ಸಮಯ ಕಳೆಯುವಂತಾಯಿತು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಹಾಗೂ ಸಾರ್ವಜನಿಕ ರು ಸೇರಿ ಎರಡು ವಾಹನಗಳನ್ನು ಬದಗಿ ಸರಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ಸರಿಯಾದ ಸಮಯಕ್ಕೆ ತಲುಪದ ಅನೇಕರು ಇಂದು ರಜೆ ಹಾಕುವಂತಾಯಿತು. ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡದ ಜಿಲ್ಲಾಡಳಿತ. ಕಳೆದ ಮೂರು ದಿನಗಳಿಂದ ಅತಿಯಾಗಿ ಮಳೆ ಬೀಳುತ್ತಿದೆ.

ಮರಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತಿದೆ,ಸಣ್ಣಪುಟ್ಟ ಕೆರೆಗಳು ತುಂಬಿ ಮುಖ್ಯ ರಸ್ತೆಗಳ ಮೇಲೆ ಹರಿಯುತ್ತಿದೆ.
ಅನೇಕ ಕಡೆ ವರುಣನ ಆರ್ಭಟ ದಿಂದ ಮನೆಯ ಮತ್ತು ಕಟ್ಟಡದ ತಡೆಗೋಡೆ ಕುಸಿಯುತ್ತಿದೆ.

ಅದರೂ ಕೂಡ ಮುಂಜಾಗ್ರತ ಕ್ರಮವಾಗಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡುತ್ತಿಲ್ಲ ಮುಂದೆ ಆಗುವ ಅನಾಹುತ ಗಳಿಗೆ ಜಿಲ್ಲಾಡಳಿತ ಕಾರಣವಾಗಬಹುದು.ಜಿಲ್ಲಾಡಳಿತ ತಕ್ಷಣ ಕ್ರಮವನ್ನು ಕೈಗೊಳ್ಳಬೇಕಿದೆ.

WhatsApp

Join Now

Telegram

Join Now

Instagram

Join Now