--Ads--

ಜಂಗಮಕೋಟೆ ವ್ಯಾಪ್ತಿಯ ಭೂ ಪಹಣಿಯಿಂದ ಕೆಐಎಡಿಬಿ ಔಟ್ !

On: July 13, 2026 5:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಜಂಗಮಕೋಟೆ ವ್ಯಾಪ್ತಿಯ ಭೂ ಪಹಣಿಯಿಂದ ಕೆಐಎಡಿಬಿ ಔಟ್ !

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳ ಪಹಣಿಗಳಲ್ಲಿ ಬರುತ್ತಿದ್ದ ಕೆಐಎಡಿಬಿ ಭೂಸ್ವಾಧೀನ ಹೆಸರನ್ನು ತೆಗೆಯುವಂತೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಅವರು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ.

ರೈತರು ಕಳೆದ 119 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು ರೈತರಿಗೆ ಸಂತಸ ವಾತಾವರಣ ಮೂಡಿದೆ.
ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಕೊಲಿಮೆ ಹೊಸೂರು,ದೇವಗಾನಹಳ್ಳಿ, ಅರಿಕೆರೆ,ಹೊಸಪೇಟೆ, ಗೊಲ್ಲಹಳ್ಳಿ, ಚೊಕ್ಕೊಂಡನಹಳ್ಳಿ,ಸಂಜೀವಪುರ, ಯದ್ದಲತಿಪ್ಪೇನಹಳ್ಳಿ, ತಾದೂರು, ಯಣ್ಣಂಗೂರು, ತೋಟಗಾನಹಳ್ಳಿ, ಬಸವಾಪಟ್ಟಣ ಮತ್ತು ನಡಿಪಿನಾಯಕನಹಳ್ಳಿ ಗ್ರಾಮಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಮಂಡಳಿಯ ಸ್ಥಾಪನೆಗಾಗಿ ಸರ್ಕಾರದ ಅಧಿಸೂಚನೆಯಂತೆ ಅಂತಿಮ ಭೂಸ್ವಾಧಿನ ಪಡಿಸಿಕೊಳ್ಳಲಾಗಿದೆ ಎಂದು ಪಹಣಿಯಲ್ಲಿ ನಮೂದು ಆಗುತ್ತಿತ್ತು.

Pಇದನ್ನು ಜಂಗಮಕೋಟೆ ವ್ಯಾಪ್ತಿಯ ರೈತರು ವಿರೋಧಿಸಿದ್ದರು, ರೈತ ಸಂಘ ಮನವಿ ಮಾಡಿದ ಹಿನ್ನೆಲೆ 13 ಹಳ್ಳಿಗಳ ಪಹಣಿ ಕಲಂ 11ರಲ್ಲಿ “ಕೆಐಎಡಿಬಿ ಭೂ ಸ್ವಾಧೀನ” ಎಂದು ನಮೂದಾಗಿರುವುದನ್ನು ತೆಗೆಯುವಂತೆ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಅವರು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ , ಇದು 13 ಹಳ್ಳಿಗಳ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

WhatsApp

Join Now

Telegram

Join Now

Instagram

Join Now