--Ads--

ಗಾನಕೋಗಿಲೆ ಡಾ. ಎಸ್. ಜಾನಕಿ ಅಮ್ಮನವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನುಡಿ ನಮನ

On: July 12, 2026 11:31 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಗಾನಕೋಗಿಲೆ ಡಾ. ಎಸ್. ಜಾನಕಿ ಅಮ್ಮನವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನುಡಿ ನಮನ

ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ, ಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರ ನಿಧನದ ಸುದ್ದಿ ಕನ್ನಡ ಸಾಹಿತ್ಯ ಪರಿಷತ್ತಿಗೆ ತೀವ್ರ ದುಃಖವನ್ನುಂಟು ಮಾಡಿದೆ.

ಅಸಾಧಾರಣ ಕಂಠಮಾಧುರ್ಯ, ಭಾವಪೂರ್ಣ ಗಾಯನ ಮತ್ತು ಕಲಾನಿಷ್ಠೆಯ ಮೂಲಕ ಡಾ. ಎಸ್. ಜಾನಕಿ ಅಮ್ಮನವರು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಜರಾಮರ ಸ್ಥಾನವನ್ನು ಗಳಿಸಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡುವ ಮೂಲಕ ಅವರು ಕೋಟ್ಯಂತರ ಸಂಗೀತಾಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಅನನ್ಯವಾಗಿದ್ದು, ಅವರ ಗಾಯನ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿದೆ.
ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಅವರ ಸುಮಧುರ ಗಾನಸೇವೆ, ಸರಳ ವ್ಯಕ್ತಿತ್ವ ಹಾಗೂ ಕಲೆಯ ಮೇಲಿನ ಅಪಾರ ನಿಷ್ಠೆ ಮುಂದಿನ ಪೀಳಿಗೆಗೂ ಸದಾ ಸ್ಫೂರ್ತಿಯಾಗಿರಲಿದೆ.

ದಿವಂಗತ ಡಾ. ಎಸ್. ಜಾನಕಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಾರ್ಥಿಸುತ್ತದೆ.

“ಗಾನ ನಿಂತರೂ, ನಿಮ್ಮ ಸ್ವರ ಸದಾಕಾಲ ಜನಮನಗಳಲ್ಲಿ ಅನುರಣಿಸುತ್ತಲೇ ಇರುತ್ತದೆ.”

ಶಿವನಹಳ್ಳಿ ಶಿವಲಿಂಗಯ್ಯ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ ಕನಕಪುರ ಶಾಖೆ

WhatsApp

Join Now

Telegram

Join Now

Instagram

Join Now