ವಿಜಯ ದರ್ಪಣ ನ್ಯೂಸ್…..
ವೀರಶೈವ-ಲಿಂಗಾಯತ ಭವನಕ್ಕೆ ಭೂಮಿಪೂಜೆ

ದೇವನಹಳ್ಳಿ ಜು.13: ತಾಲೂಕಿನ ವಿಜಯಪುರ ಕ್ರಾಸ್ ಹತ್ತಿರದ ನಿಸರ್ಗ ಬಡಾವಣೆಯಲ್ಲಿ ವೀರಶೈವ-ಲಿಂಗಾಯತ ಭವನದ ಭೂಮಿಪೂಜೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಬೆಳ್ಳಾವಿ ಗ್ರಾಮದ ವೀರ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಪಟ್ಟದ ಮಹಾಂತ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಹಾಗೂ ಸಮಾಜದ ಪ್ರಮುಖ ಮುಖಂ ಡರ ಸಮ್ಮುಖದಲ್ಲಿ ಭವನದ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, ಪೂಜ್ಯ ಗುರುಗಳ ಆಶೀರ್ವಾದ ಹಾಗೂ ಸಮಾಜದ ಹಿರಿಯರ ಸೂಕ್ತ ಮಾರ್ಗದರ್ಶನದಲ್ಲಿ ಈ ವೀರಶೈವ-ಲಿಂಗಾಯತ ಭವನವು ಅತ್ಯಂತ ಸುಂದರವಾಗಿ ಮೂಡಿಬರಲಿದೆ ಎಂಬ ದೃಢ ವಿಶ್ವಾಸ ನನಗಿದೆ.
ಈ ಭವನವು ಸಮಾಜದ ಏಳಿಗೆಗೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿ. ಭಗವಂತನು ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ,” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇವನಹಳ್ಳಿ ವೀರಶೈವ ಲಿಂಗಾಯತ ಸಮಾಜ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ಪ್ರಮುಖ ಮುಖಂಡರುಗಳಾದ ಕೊಡಿಮಂಚೇನಹಳ್ಳಿ ನಾಗೇಶ್, ವಿಜಯ್ ಕುಮಾರ್, ಬಸವ ರಾಜ್, ಸುನೀಲ್ ಸೇರಿದಂತೆ ಸಮಾಜದ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದರು.










