ವಿಜಯ ದರ್ಪಣ ನ್ಯೂಸ್….
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಅವೈಜ್ಞಾನಿಕವಾಗಿ ಕೂಡಿದೆ

ಶಿಡ್ಲಘಟ್ಟ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಅವೈಜ್ಞಾನಿಕ ಹಾಗು ಅಸಂವಿದಾನಿಕವಾಗಿ ಕೂಡಿದೆ,ಈ ಹಿಂದೆ ಬಿಹಾರ ಹಾಗು ಪಶ್ಚಿಮ ಬಂಗಾಳದಲ್ಲಿ ನಡೆದಂತಹ ಅವಾಂತರಗಳು ರಾಜ್ಯದಲ್ಲಿಯೂ ಸೃಷ್ಟಿಯಾಗುತ್ತದೆ ಎಂಬುದನ್ನು ನಮ್ಮ ಸಂಘಟನೆ ನಿರಂತರ ಎಚ್ಚರಿಸುತ್ತಾ ಬಂದಿದ್ದರೂ ಎಸ್‌ಐಆರ್ ಪ್ರಕ್ರಿಯೆಯ ಹೆಸರಲ್ಲಿ ರಾಜ್ಯದ ೧ ಕೋಟಿ ಜೀವಂತ ಮತದಾರರನ್ನು ಡಿಲೀಟ್ ಮಾಡಿರುವ ಕ್ರಮ ಸರಿಯಲ್ಲ ಎಂದು ಜಿಲ್ಲಾ ನಾಗರೀಕ ಮತ ಕಾವಲು ಸಮಿತಿ ಅಧ್ಯಕ್ಷ ಡಾ.ಮಹಮ್ಮದ್ ನೂರುಲ್ಲಾ ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ತಾಲ್ಲೂಕು ನಾಗರೀಕ ಮತ ಕಾವಲು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ರಾಜ್ಯದ ಸುಮಾರು ೧ ಕೋಟಿ ೧೦ ಲಕ್ಷ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುವ ಸಾಧ್ಯತೆ ಬಂದಿದೆ ಇದಕ್ಕೆ ಚುನಾವಣಾ ಆಯೋಗದ ತರಾತುರಿ ಕ್ರಮವೇ ಕಾರಣ ಎಂದು ಹೇಳಿದರು.
ಶೇ ೧೦೦ ರಷ್ಟು ಎನ್ಯುಮರೇಷನ್ ಫಾರಂ ವಿತರಿಸಲಾಗಿದೆ, ಶೇ ೯೯ ರಷ್ಟು ಡಿಜಟಲೀಕರಣ ಆಗಿದೆ, ಎಮದು ಹೇಳುವ ನೀವುಗಳು ಇಂದಿಗೂ ಎನ್ಯಮರೇಷನ್ ಫಾರಂ ಪಡೆಯದೆ ಇರುವ ಹಾಗು ಖಾಲಿ ಫಾರಂ ಕೈಯಲ್ಲಿ ಹಿಡಿದು ಕುಳಿತಿರುವ ನೂರಾರು ಜೀವಂತ ಉದಾಹರಣೆಗಳನ್ನು ನಾವು ನೀಡುತ್ತೇವೆ ಇದಕ್ಕೆ ಉತ್ತರ ನೀಡುವವರ್‍ಯಾರು? ಇನ್ನು ಆಬ್ಸೆಂಟ್, ಶಿಫ್ಟೆಡ್, ಡೆತ್, ಡೂಪ್ಲಿಕೇಟ್ ಅಂಡ್ ಅದರ್‍ಸ್ ಇಷ್ಟಿಷ್ಟು ಎಂದು ಅಂಕಿ ಅಂಶ ನೀಡಿದ್ದೀರಿ, ಇದರಲ್ಲಿ ಅದರ್‍ಸ್ ಎಂದರೆ ಯಾರು ಎಂಬುದನ್ನು ತಿಳಿಸಿ,ನೀವು ಈ ಪ್ರಕ್ರಿಯೆ ಮೂಲಕ ಎಷ್ಟು ನುಸುಳಕೋರರ ಅಕ್ರಮ ಮತಗಳನ್ನು ಪತ್ತೆ ಹಚ್ಚಿದ್ದೀರಿ ಎಂಬುದನ್ನು ದೇಶದ ಜನತೆಗೆ ಲೆಕ್ಕ ನೀಡಿ ಎಂದರು.
ನೀವು ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದವರನ್ನು ಡಿಲೀಟ್ ಮಾಡಿದ್ದು ದುಡಿಮೆಗಾಗಿ ಅಲೆಯುತ್ತಿರುವ, ವಲಸೆ ಹೋಗಿರುವ ಜನರ ಮತ ಹಕ್ಕನ್ನು ಕಸಿದುಕೊಳ್ಳುವುದು ಘೋರ ಅನ್ಯಾಯ, ಸ್ಥಳಾಮತರಗೊಂಡವರನ್ನು ತಲುಪುವ ಯಾವೊಂದು ಪ್ರಯತ್ನವೂ ಇಡೀ ಪ್ರಕ್ರಿಯೆಯಲ್ಲಿ ನಡೆಯುತ್ತಿಲ್ಲ ,
ಹಾಗಾಗಿ ಈ ಕೂಡಲೇ ಆಯಾ ತಾಲ್ಲೂಕು ಕಚೇರಿಗಳಲ್ಲಿ ಎಸ್ ಐ ಆರ್ ಸಹಾಯಕೇಮದ್ರಗಳನ್ನು ಸ್ಥಾಪಿಸಬೇಕು, ಎಸ್‌ಸಿ/ಎಸ್‌ಟಿ ಸಮುದಾಯದ ಜನತೆಗೆ ಜಾತಿ ಪ್ರಮಾಣ ಪತ್ರ ವಿತರಿಸುವ ಕೆಲಸ ತ್ವರಿತವಾಗಿ ಆಗಬೇಕು,ಶಾಶ್ವತ ನಿವಾಸಿ ಪ್ರಮಾಣ ಪತ್ರ (ಪಿಆರ್‌ಸಿ) ವಿತರಣೆಗೆ ಪ್ರತ್ಯೇಕ ಕೇಂದ್ರ ಸ್ಥಾಪಿಸಬೇಕು,ಪ್ರಮುಖವಾಗಿ ಎಸ್‌ಐಆರ್ ಪ್ರಕ್ರಿಯೆಯನ್ನು ತರಾತುರಿಯಾಗಿ ಮಾಡದೇ ಒಂದಷ್ಟು ಕಾಲಾವಕಾಶ ವಿಸ್ತರಿಸುವ ಜೊತೆಗೆ ದೇಶದ ಯಾವೊಬ್ಬ ಜೀವಂತ ವ್ಯಕ್ತಿಯೂ ಮತದಾನದಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದರು.
ಇಲ್ಲದಿದ್ದಲ್ಲಿ ರಾಜ್ಯಾದಾಧ್ಯಂತ ನಾಗರೀಕ ಕಾವಲು ಸಮಿತಿ ನೇತೃತ್ವದ ವಿವಿಧ ಸಂಘಟನೆಗಳು ಆಯಾ ತಾಲ್ಲೂಕು ಹಾಗು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಾಗು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಈ ಸಂದರ್ಬದಲ್ಲಿ ನಾಗರಿಕ ಮತಕಾವಲು ಸಮಿತಿಯ ಜಿಲ್ಲಾ ಸಂಚಾಲಕ ಶಮೀರ್.ಜೆ, ಜೀವಿಕ ಸಂಘಟನೆಯ ಶ್ರೀನಿವಾಸ್, ನರಸಿಂಹಪ್ಪ, ಎಸ್‌ಡಿಪಿಐ ನ ಸಿದ್ದೀಕ್‌ಪಾಷ, ಖಾಜಾ ಶರೀಫ್, ಸೈಯ್ಯದ್‌ಪಾಷ ಮತ್ತಿತರರು
ಹಾಜರಿದ್ದರು.









