ವಿಜಯ ದರ್ಪಣ ನ್ಯೂಸ್…..
ಕಾರ್ಯಾಧಾರಿತ ನೌಕರರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, 4 ತಿಂಗಳಿನಿಂದ ಬಾಕಿ ಇರುವ ವೇತನ ಪಾವತಿಸಲು ಮನವಿ

ಶಿಡ್ಲಘಟ್ಟ : ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ 25 ಮಂದಿ ಕಾರ್ಯಾಧಾರಿತ ನೌಕರರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು 4 ತಿಂಗಳಿನಿಂದ ಅವರಿಗೆ ವೇತನ ಪಾವತಿಯಾಗಿಲ್ಲ ಆದರೂ ಪ್ರತಿ ತಿಂಗಳೂ ಗುತ್ತಿಗೆದಾರನಿಗೆ ಕಮಿಷನ್ ನೀಡಬೇಕು ಎಂದು ಕಾರ್ಯಾಧಾರಿತ ಸಹಾಯಕ ರವಿಬಾಬು ವಿಷಾದ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ರೇಷ್ಮೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಗುತ್ತಿಗೆದಾರರಿಂದ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಆದ್ದರಿಂದ ಸರ್ಕಾರವೇ ಪ್ರವೇಶ ಮಾಡಿ ನೇರವಾಗಿ ನೌಕರರ ಖಾತೆಗೆ ವೇತನ ಪಾವತಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕಾರ್ಯಾಧಾರಿತ ನೌಕರರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಸುವಂತೆ ಹಾಗೂ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಲಿ ಎಂದು ಒತ್ತಾಯ ಮಾಡಿದರು.
ರಾಜ್ಯ ಸರ್ಕಾರವು 2026ರ ಮೇ 22ರಂದು ಪರಿಷ್ಕರಿಸಿರುವ ಕನಿಷ್ಠ ವೇತನವೂ ದೊರೆಯುತ್ತಿಲ್ಲ ಸರ್ಕಾರದ ನಿಯಮದಂತೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ನೌಕರರ ಖಾತೆಗೆ ವೇತನ ಜಮೆಯಾಗಬೇಕು ಎಂದರು.
ರೇಷ್ಮೆ ಸಹಾಯಕ ವಿ.ಶ್ರೀನಿವಾಸ್ ಮಾತನಾಡಿ,
ಕಾರ್ಯಾದರಿತ ನೌಕರರಿಗೆ ಗ್ಯಾರಂಟಿ ಇಲ್ಲದ ಕೆಲಸ ಮಾಡುತ್ತಿದ್ದರೂ, ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಜತೆಗೆ ನಮಗೆ ಆರೋಗ್ಯ ವಿಮೆಯೂ ಇಲ್ಲ. ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುವುದರ ಜತೆಗೆ ಆಗಸ್ಟ್. 13 ರಿಂದ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ರೈತರು ಹಾಗೂ ರೀಲರ್ಗಳ ಹಿತದೃಷ್ಟಿಯಿಂದ ಮಾರುಕಟ್ಟೆಯ ದೈನಂದಿನ ವಹಿವಾಟಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ರೇಷ್ಮೆ ಉಪ ನಿರ್ದೇಶಕ ಎನ್.ಉಮೇಶ್ ಮಾತನಾಡಿ, ನೌಕರರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು, ಶೀಘ್ರವೇ ವೇತನ ಪಾವತಿಸುವಂತೆ ಮನವಿ ಮಾಡುತ್ತೇವೆ,ಆ.13ರಂದು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಧರಣಿಗೆ ಇಲ್ಲಿಂದ ಇಬ್ಬರನ್ನು ಕಳುಹಿಸಿ ಮಾರುಕಟ್ಟೆಯ ಕಾರ್ಯವೈಖರಿಯನ್ನ ಮುಂದುವರಿಸುತ್ತೇವೆ ಎಂದು ಅವರು ಭರವಸೆ ನಿಡಿದರು.
ಈ ಸಂದರ್ಭದಲ್ಲಿ ಕಾರ್ಯಾಧಾರಿತ ಸಹಾಯಕರಾದ ರವಿಬಾಬು, ವಿ.ಶ್ರೀನಿವಾಸ್,ನವೀನ್, ವಿ.ವಿನೋದ್ ಕುಮಾರ್, ಮುರಳಿ,ವಿಶ್ವನಾಥ್, ತನ್ನೀರ್ ಪಾಷಾ, ನಟರಾಜ,ವಿಜಯಕುಮಾರ್, ಮಂಜುನಾಥ್,ಮುರಳಿ, ವೆಂಕಟೇಶ್,ಚನ್ನಕೇಶವ, ಆರ್.ರಘು, ಗಣೇಶ್, ಸುರೇಶ್ಬಾಬು, ಕೃಷ್ಣಪ್ಪ, ನಾಗರಾಜ್ ಮತ್ತಿತರರು ಹಾಜರಿದ್ದರು.










