--Ads--

ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

On: August 20, 2026 4:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್.,..

ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

ಶಿಡ್ಲಘಟ್ಟ : ಈಗಿನ ವಿದ್ಯಾರ್ಥಿಗಳ ಮತ್ತು ಯುವಜನರು ಹೆಚ್ಚಿನ ಮಂದಿ ಪಠ್ಯಕ್ಕೆ ಸೀಮಿತವಾಗುತ್ತಿದ್ದಾರೆ ಅದು ಬಿಟ್ಟು ಸಾಮಾಜಿಕ ಕಳಕಳಿ ಬೆಳಸಿಕೊಳ್ಳಬೇಕು ಮತ್ತು
ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಕರ್ನಾಟಕ ಇತಿಹಾಸ ಅಕಾಡೆಮಿಯಿಂದ
ಹಮ್ಮಿಕೊಂಡಿದ್ದ “ಇತಿಹಾಸ ಪರಂಪರೆ ಉಳಿಸಿ’’ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಮ್ಮೂರು ಹಾಗೂ ಈ ನಮ್ಮ ನೆಲದ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕು, ನಮ್ಮ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕೆಲಸ ಆಗಬೇಕು ಹಾಗು ಅಗತ್ಯವೂ ಕೂಡ ಎಂದು ತಿಳಿಸಿದರು.

ಕರ್ನಾಟಕ ಇತಿಹಾಸ ಅಕಾದೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಮಾತನಾಡಿ,
ಸಾಕಷ್ಟು ಗ್ರಾಮಗಳ ಸುತ್ತ ಮುತ್ತ ಶಾಸನ ಕಲ್ಲು, ವೀರಗಲ್ಲು, ಸ್ಮಾರಕಗಳು ಇರುತ್ತವೆ ಅವುಗಳ ಕೆಳಗಡೆ ನಿಧಿ, ಚಿನ್ನ ಬೆಳ್ಳಿ ಅಡಗಿಸಿಟ್ಟಿರುತ್ತಾರೆ ಎಂಬ ನಂಬಿಕೆ ಅನೇಕರಲ್ಲಿದ್ದು ಅದು ತಪ್ಪು ಎಂದರು.

ಈ ರೀತಿಯ ಭಾವನೆಯಿಂದ ಅದೆಷ್ಟೊ ಸ್ಮಾರಕಗಳ ನಾಶವಾಗಿವೆ ಇದರಿಂದ ನಮಗೆ ತಿಳಿಯಬೇಕಿದ್ದ ಇತಿಹಾಸ ತಿಳಿಯದಂತಾಗಿದೆ ಎಂದು ಅವರು ವಿಷಾದಿಸಿದರು.
ಆಗಿನ ಕಾಲದ ರಾಜರು, ಪಾಳೇಗಾರರು, ಧೀಮಂತರು ಸೇರಿ ಅನೇಕರ ಕಾಲಘಟ್ಟದ ಆಡಳಿತ, ಜನ ಜೀವನ ಸ್ಥಿತಿ, ಸಾಂಸ್ಕೃತಿಕ ಪರಂಪರೆ, ದಾನ ಧರ್ಮ, ವಿಜಯದ ಸಂಕೇತವಾಗಿ ಸ್ಮಾರಕಗಳು, ವೀರಗಲ್ಲುಗಳನ್ನು ನೆಡಲಾಗಿದ್ದು ಅವುಗಳ ಮಹತ್ವ. ಕಾಲಘಟ್ಟವನ್ನು ತಿಳಿದುಕೊಳ್ಳಬೇಕೆ ಹೊರತು ಅವುಗಳನ್ನು ನಾಶ ಮಾಡಬಾರದು ಎಂದು ವಿನಂತಿಸಿದರು.

ಆಧ್ರದ ಗಡಿಭಾಗದಲ್ಲಿ ಈ ರೀತಿಯ ಮನೋಭಾವ ಹೆಚ್ಚಿದ್ದು ಈ ಭಾಗದಲ್ಲಿ ಅನೇಕ ವೀರಗಲ್ಲು, ಶಾಸನ, ಸ್ಮಾರಕಗಳನ್ನು ನಾಶಪಡಿಸಲಾಗಿದೆ ಎಂದು
ಬೇಸರ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಅಕಾಡೆಮಿಯು ರಾಜ್ಯಾಧ್ಯಂತ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ವಿದ್ಯಾರ್ಥಿ, ಯುವಜನರು, ಸಾರ್ವಜನಿಕರಲ್ಲಿ ಅರಿವು
ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಕರ್ನಾಟಕ ಇತಿಹಾಸ ಅಕಾದೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ ಮಾತನಾಡಿ,
ಶಾಸನ ಕಲ್ಲುಗಳು, ಪಾರಂಪರಿಕ ಕಟ್ಟಡಗಳ ಬಗ್ಗೆ ವಿದ್ಯಾರ್ಥಿ, ಯುವಜನರು ಹಾಗೂ ನಾಗರೀಕರು ತಿಳಿದುಕೊಳ್ಳುವಂತಾಗಬೇಕು ನಿಮ್ಮ ಊರು ಹಾಗೂ ಸುತ್ತ ಮುತ್ತಲ ಕಾಣುವ ವೀರಗಲ್ಲು, ನಿಮಗೆ ತಿಳಿದು ಬರುವ ಮಾಹಿತಿಯನ್ನು ನಮಗೆ ಕೊಡಿ, ನಾವು ಅದನ್ನು
ಸಂರಕ್ಷಿಸುತ್ತೇವೆ ಮತ್ತು ಮುಂದಿನ ಪೀಳಿಗೆಗೂ ಉಳಿಸುವ ಕೆಲಸ ನಿಮ್ಮ ಮೂಲಕವೇ ಮಾಡಲಿದ್ದೇವೆ ನಾಡಿನ ಇತಿಹಾಸ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.

ಕರ್ನಾಟಕ ಇತಿಹಾಸ ಐತಿಹಾಸಿಕ ಸ್ಮಾರಕಗಳ
ಸಂರಕ್ಷಕ ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು ೪ ಸಾವಿರ ಕಿಲೋ ಮೀಟರ್ ಸುತ್ತಾಡಿ ವೀರಗಲ್ಲು, ಶಾಸನಗಳು, ಸ್ಮಾರಕಗಳನ್ನು
ಪತ್ತೆ ಮಾಡಿ ಅದರ ಕಾಲಘಟ್ಟ, ಮಹತ್ವವನ್ನು ದಾಖಲಿಸುವ ಕೆಲಸ ಮಾಡಿದ್ದೇವೆ, ೪ ತಿಂಗಳ ಕಾಲ ನಡೆದ ಈ ಶೋಧನೆ, ದಾಖಲೀಕರಣಕ್ಕೆಎಲ್ಲಾ ಗ್ರಾಮಸ್ಥರು ಕೂಡ ನೆರವು, ಸಹಾಯ ಮಾಡಿದ್ದಾರೆ ಇತಿಹಾಸವನ್ನು ತಿಳಿದುಕೊಳ್ಳುವ ಮತ್ತು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಉದ್ದೇಶದ ಐತಿಹಾಸಿಕ
ಪರಂಪರೆ ಉಳಿಸಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ಮುಂದಿನ ದಿನಗಳಲ್ಲಿ ಎಲ್ಲ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಮಾಡಿ ಇತಿಹಾಸದ ಪುಟಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿ ಇತಿಹಾಸವನ್ನು ಎಲ್ಲರೂ
ತಿಳಿದುಕೊಳ್ಳುವಂತ ವಾತಾರವರಣವನ್ನು ಸೃಷ್ಟಿಸಲಾಗುವುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಲ್.ವಿಜಯೇಂದ್ರ ಕುಮಾರ್ ಮಾತನಾಡಿ ,ಇತಿಹಾಸ ಅಕಾಡೆಮಿಯು
ತಾಲೂಕಿನ ಅನೇಕ ಗ್ರಾಮಗಳಲ್ಲಿಪತ್ತೆ ಹಚ್ಚಿದ ವೀರಗಲ್ಲು,
ಶಾಸನಗಳ ಛಾಯಾ ಚಿತ್ರ ಪದರ್ಶನ ನಡೆಯಿತು,ಹಳೆ ಕಾಲದ ಹಾಗೂ ವಿದೇಶಗಳ ನಾಣ್ಯ ನೋಟುಗಳು ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಇತಿಹಾಸ ಅಕಾಡೆಮಿ
ಶಾಸನ ತಜ್ಞ ಧನಪಾಲ್, ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ.ಷಫಿ ಅಹಮದ್, ಜೂನಿಯರ್ ಕಾಲೇಜು ಪ್ರಿನ್ಸಿಪಲ್ ವೆಂಕಟಶಿವಾರೆಡ್ಡಿ, ಕಾಲೇಜು ಸಿಬ್ಬಂದಿ, ಇತಿಹಾಸ
ಆಸಕ್ತರು, ಸಂಶೋಧಕರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now