ವಿಜಯ ದರ್ಪಣ ನ್ಯೂಸ್…..
ನಮ್ಮ ಪುರಾತನ ಪರಂಪರೆ ಉಳಿಯಬೇಕು :
ಶ್ರೀ ಶ್ರೀ ಮಂಗಳನಂದನಾಥ ಸ್ವಾಮಿ.

ಶಿಡ್ಲಘಟ್ಟ ತಾಲ್ಲೂಕು ಸುಮಾರು ಮೂರು ಸಾವಿರ
ವರ್ಷಗಳಿಂದಲೂ ಜನವಸತಿ ಹೊಂದಿದ ಪ್ರದೇಶ :
ಶಾಸನ ತಜ್ಞರಾದ ಕೆ.ಧನಪಾಲ್
ಶಿಡ್ಲಘಟ್ಟ : ಆಧುನಿಕ ತಂತ್ರಜ್ಞಾನದಿಂದಲೇ ಪ್ರಾಚೀನ ಇತಿಹಾಸ ಸೃಷ್ಟಿಸಿ ಪಸರಿಸುವ ಕಾರ್ಯವಾಗಬೇಕು ಇದರ ಮೂಲಕ ನಮ್ಮ ಪುರಾತನ ಪರಂಪರೆ ಉಳಿಯಬೇಕು
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ
ಶ್ರೀ ಮಂಗಳನಂದನಾಥ ಸ್ವಾಮಿಯವರು ತಿಳಿಸಿದರು.
ನಗರ ಸಮೀಪದ ಬಿ.ಜಿ.ಎಸ್ ಪಿ.ಯು ಕಾಲೇಜಿನಲ್ಲಿ ಶಿಡ್ಲಘಟ್ಟ- ೫೦೦ ಕೈಪಿಡಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ಬಲಿದಾನಗಳು ನಮಗೆ ಸ್ಪೂರ್ತಿಯಾಗಬೇಕು ಇತಿಹಾಸ ಸಂರಕ್ಷಣೆ, ಪ್ರಸರಣಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ,ಯುವಜನತೆ ಪ್ರಾಚೀನ ಇತಿಹಾಸವನ್ನು ತಿಳಿದು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸ ಮಾಡಬೇಕಿದೆ ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪ್ರಾಚೀನ ಇತಿಹಾಸ ಮರೆಯಬಾರದು ಎಂದು ತಿಳಿ ಹೇಳಿದರು.
ತಾಲ್ಲೂಕಿನ ಜನಪ್ರಿಯ ಶಾಸಕರಾದ ಬಿ.ಎನ್. ರವಿಕುಮಾರ್ ಅವರು ಶಿಡ್ಲಘಟ್ಟ-೫೦೦ವರ್ಷದ ಶುಭಾಶಯ ಕೋರಿ ಮಾತನಾಡಿ, ನಮ್ಮ ಶಿಡ್ಲಘಟ್ಟ ತಾಲ್ಲೂಕಿನ ೫೦೦ ವರ್ಷದ ಇತಿಹಾಸ ಇಂದಿನ ಯುವಜನರಿಗೆ, ಶಾಲಾ ಕಾಲೇಜು ಮಕ್ಕಳಲ್ಲಿ ಇತಿಹಾಸ ಪ್ರಜ್ಞೆ ಬೆಳಸಬೇಕು, ಹಾಗೂ ತಾಲೂಕಿನ ಇತಿಹಾಸ ಪ್ರತಿಯೊಂದು ಕಾಲೇಜುಗಳಲ್ಲಿ ತಿಳಿಸುವ ಕಾರ್ಯವಾಗಬೇಕು ಮನವಿ ಮಾಡಿದರು.
ಶಾಸನ ತಜ್ಞ ಕೆ.ಧನಪಾಲ್ ಮಾತನಾಡಿ ,ಶಿಡ್ಲಘಟ್ಟ ತಾಲ್ಲೂಕು ಸುಮಾರು ಮೂರು ಸಾವಿರ ವರ್ಷಗಳಿಂದಲೂ ಜನವಸತಿ ಹೊಂದಿದ ಪ್ರದೇಶ ಎಂಬುದಕ್ಕೆ ಇಲ್ಲಿ ಬೃಹತ್ ಶಿಲಾಯುಗದ ಅವಶೇಷಗಳು ಸಿಕ್ಕಿವೆ, ಇತಿಹಾಸ ಕಾಲದಲ್ಲಿ ಗಂಗರ ೬ನೇ ಶತಮಾನದ ತಾಮ್ರಪತ್ರ ಸಿಕ್ಕಿದೆ ನಂತರ ನೊಳಂಬರು, ಚೋಳರು, ಹೊಯ್ಸಳರು ಆಳ್ವಿಕೆ ಮಾಡಿ ಇಲ್ಲಿ ದೇವಾಲಯಗಳು, ಕೆರೆಕಟ್ಟೆಗಳನ್ನು ಕಟ್ಟಿ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಶಿಡ್ಲಘಟ್ಟ – ೫೦೦ ಎಂಬುದು ೨೦೨೬ಕ್ಕೆ ಶಿಡ್ಲಘಟ್ಟ ಊರು ಸ್ಥಾಪನೆಯಾಗಿ ೫೦೦ ವರ್ಷವಾಗಿದೆ ಇದನ್ನು ಸಿಡಿಲೇಗೌಡರ ನೆನಪಿಗೆ ಶಿಡ್ಲಘಟ್ಟ ಎಂದು ಕರೆಯಲಾಗಿದೆ ,ಇವುಗಳಿಂದಲೇ ಅಂದಿನ ಜನರ ಜೀವನ, ಸಾಮಾಜಿಕ ಕಾರ್ಯಗಳು, ಧಾರ್ಮಿಕ ಪರಂಪರೆ ಮುಂತಾದ ವಿಷಯವನ್ನು ತಿಳಿಯಬಹುದು ಎಂದು ನುಡಿದರು.
ಹಿಂದಿನವರು ಬಿಟ್ಟುಹೋದ ಪುರಾತನ ಪರಂಪರೆ ಇಂದು ಮುಂದೆ ಎಲ್ಲರೂ ನೋಡುವಂತಾಗಬೇಕು ಇದರಿಂದ ಮಾತ್ರ ನಮ್ಮ ಅಸ್ತಿತ್ವ ಸಾಧ್ಯ ಎಂದು ಹೇಳಿದರು.
ತಾಲ್ಲೂಕಿನ ಇತಿಹಾಸ ಆಸಕ್ತರಾದ ಅಪ್ಪೆಗೌಡನಹಳ್ಳಿ ತ್ಯಾಗರಾಜ್ ಮಾತನಾಡಿ , ಶಿಡ್ಲಘಟ್ಟ -500 ಇದು ಇಡೀ ವರ್ಷ ಕಾರ್ಯಕ್ರಮ ಮಾಡಿ ನಮ್ಮ ಶಿಡ್ಲಘಟ್ಟ ಇತಿಹಾಸ ಮನೆಮನೆಗೂ ತಲುಪಿಸುವ ಕಾರ್ಯವಾಗಬೇಕು ಹಾಗು
ನಮ್ಮ ಶಿಡ್ಲಘಟ್ಟ ಸ್ಥಾಪನೆಯಾಗಿ ಐನೂರು ವರ್ಷವಾಗಿದೆ ಇದರ ಆರಂಭ ಇಂದಿನ ಕಾರ್ಯಕ್ರಮ ಆಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಷಫಿಅಹಮದ್, ಪ್ರಾಂಶುಪಾಲ ಕೆ.ಮಹದೇವ್,ಇತಿಹಾಸ ಅಕಾಡೆಮಿ ಸದಸ್ಯರಾದ ಶಶಿಕುಮಾರ ನಾಯ್ಕ, ಮೋಹನ್ ಕುಮಾರ್, ಭಕ್ತರಹಳ್ಳಿ ನಾಗೇಶ್, ಸಾದಲಿ ನಾಗೇಶ್, ಕೇಶವಮೂರ್ತಿ ಭಾರ್ಗವ,ಅಶ್ವಿನಿ, ಬಾಲುಚಂದ್ರಶೇಖರ್ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.











