ವಿಜಯ ದರ್ಪಣ ನ್ಯೂಸ್….
ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ

ಶಿಡ್ಲಘಟ್ಟ : ಶ್ರೀಸೀತಾರಾಮಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನವಗ್ರಹಗಳ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ಹಾಗೂ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನೆರವೇರಿದವು.
ದೇವಾಲಯದ ಆವರಣದಲ್ಲಿದ್ದ ಹಳೆಯ ಅಶ್ವತ್ಥಕಟ್ಟೆಯ ಶಿಲೆಯು ಶಿಥಿಲಗೊಂಡ ಹಿನ್ನೆಲೆಯಲ್ಲಿ, ಹಳೆಯ ಶಿಲೆಯನ್ನು ಬದಲಾಯಿಸಿ ಕಾಂಕ್ರೀಟ್ ಕಾಮಗಾರಿಯೊಂದಿಗೆ ಅಶ್ವತ್ಥಕಟ್ಟೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ.
ಗ್ರಾಮದಲ್ಲಿದ್ದ ನವಗ್ರಹ ಮೂರ್ತಿಗಳ ಕೊರತೆಯನ್ನು ನೀಗಿಸಲು ನವಗ್ರಹಗಳ ನೂತನ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು.
ಆಗಸ್ಟ್ 23 ರಿಂದ 24 ರವರೆಗೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.ಆಗಸ್ಟ್ 24 ರಂದು ಮಧ್ಯಾಹ್ನ 12:00 ರಿಂದ 12:45 ರವರೆಗೆ ಶುಭ ಮುಹೂರ್ತದಲ್ಲಿ ಮಹಾಕುಂಭ ಪ್ರೋಕ್ಷಣೆ ಹಾಗೂ ಮಹಾಮಂಗಳಾರತಿ ಜರುಗಿತು.
ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲರ ಸಹಕಾರದಿಂದ ವಿನಾಯಕ ದೇವಸ್ಥಾನವನ್ನು ನಿರ್ಮಿಸಲಾಗಿತ್ತು ,ಇದೀಗ ನವಗ್ರಹ ಹಾಗೂ ಅಶ್ವತ್ಥಕಟ್ಟೆ ಪುನರ್ ಪ್ರತಿಷ್ಠಾಪನೆಯೊಂದಿಗೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಂಪೂರ್ಣಗೊಂಡಂತಾಗಿದೆ,
ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಗ್ರಾಮದ ಮುಖಂಡರು, ಮಹಾದಾನಿಗಳು ಹಾಗೂ ಸಮಸ್ತ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.











