ವಿಜಯ ದರ್ಪಣ ನ್ಯೂಸ್….
3 ನೇ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀಆಂಜನೇಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ

ಶಿಡ್ಲಘಟ್ಟ : ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನೆಲೆಸಿ ಭಕ್ತಾದಿಗಳು ಬೇಡಿದ ಕಷ್ಟಗಳನ್ನು ಈಡೇರಿಸುತ್ತಿರುವ ವಿಜಯನಗರ ಕಾಲದ, ವ್ಯಾಸರಾಯರು ಪ್ರತಿಷ್ಟಾಪಿಸಿದ ಸುಪ್ರಸಿದ್ಧ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಶನಿವಾರ ಪ್ರಯುಕ್ತ ಮೂಲ ದೇವರ ವಿಗ್ರಹಕ್ಕೆ ಹೂವಿನ ಅಲಂಕಾರ ಹಾಗು ನೂತನ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ,
ಮಹಾಮಂಗಳಾರತಿ, ತೀರ್ಥ,ಅನ್ನ ಪ್ರಸಾದ ಸೇವೆಗಳು ನಡೆದವು,ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಇಂದಿನ ಪೂಜಾಕಾರ್ಯಗಳನ್ನು ಶ್ರೀಮತಿ ರತ್ನಮ್ಮ ಹಾಗೂ ಶ್ರೀವೆಂಕಟಸ್ವಾಮಿ(ಅಪ್ಪಯ್ಯಣ್ಣ)ಅವರು ಹಾಗು ಸಹೋದರರು, ಮಕ್ಕಳು ಹಾಗ ಕುಟುಂಬದವರು ಚಿಕ್ಕಲಸಂದ್ರ ಬೆಂಗಳೂರು ,ಅವರ ಕುಟುಂಬದವರಿಂದ ನಡೆಯಿತು.
ದೇವಾಲಯದ ಅರ್ಚಕರಾದ ವೇಣುಗೋಪಾಲಚಾರ್ ಹಾಗು ಶ್ಯಾಮ್ ಸುಂದರ್ ಅವರ ತಂಡ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಭಕ್ತವೃಂದದ ಮನತಣಿಸಿತು.










