--Ads--

ಚಿಕಿತ್ಸೆಯೇ ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದ್ದ ಮೂತ್ರಪಿಂಡ ಕಸಿ ಪಡೆದ ರೋಗಿಯ ಜೀವ ಉಳಿಸಲು ಅಪೋಲೊ ಆಸ್ಪತ್ರೆಯಿಂದ ಅತ್ಯಂತ ಅಪರೂಪದ ಝೀರೋ-ಕಾಂಟ್ರಾಸ್ಟ್ ಹೃದಯದ ವಾಲ್ವ್ ಶಸ್ತ್ರಚಿಕಿತ್ಸೆ

On: September 25, 2026 5:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಚಿಕಿತ್ಸೆಯೇ ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದ್ದ ಮೂತ್ರಪಿಂಡ ಕಸಿ ಪಡೆದ ರೋಗಿಯ ಜೀವ ಉಳಿಸಲು ಅಪೋಲೊ ಆಸ್ಪತ್ರೆಯಿಂದ ಅತ್ಯಂತ ಅಪರೂಪದ ಝೀರೋ-ಕಾಂಟ್ರಾಸ್ಟ್ ಹೃದಯದ ವಾಲ್ವ್ ಶಸ್ತ್ರಚಿಕಿತ್ಸೆ

ಬೆಂಗಳೂರು, 23rd September 2026: ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು 68 ವರ್ಷದ ಮೂತ್ರಪಿಂಡ ಕಸಿ ಮಾಡಿಸಿಕೊಂಡ ರೋಗಿಯೊಬ್ಬರಿಗೆ ಭಾರತದಲ್ಲೇ ಅಪರೂಪವೆನಿಸಿದ ‘ಝೀರೋ-ಕಾಂಟ್ರಾಸ್ಟ್ ಟ್ರಾನ್ಸ್ ಕ್ಯಾಥೆಟರ್ ಅಯೋರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್’ (ಟಿ.ಎ.ವಿ.ಆರ್) ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ರೋಗಿಯು ಹೆಚ್ಚಿನ ಅಪಾಯದ ಮಟ್ಟದಲ್ಲಿದ್ದರಿಂದ ಹಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದವು.

ವೈದ್ಯರ ತಂಡವು ಯಾವುದೇ ಐಯೋಡಿನೇಟೆಡ್ ಕಾಂಟ್ರಾಸ್ಟ್ ಡೈ ಬಳಸದೇ ಹಾಳಾಗಿದ್ದ ಹೃದಯದ ವಾಲ್ವ್ ಅನ್ನು ಯಶಸ್ವಿಯಾಗಿ ಬದಲಾಯಿಸುವ ಮೂಲಕ, ರೋಗಿಯ ಕಸಿ ಮಾಡಿದ ಮೂತ್ರಪಿಂಡಕ್ಕೆ ಹಾನಿಯಾಗದಂತೆ ತಡೆದು ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.

ಕೇವಲ 39 ಕೆಜಿ ತೂಕ ಹೊಂದಿರುವ ಈ ರೋಗಿಯು 1999 ರಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದು, ದಿನ ಕಳೆದಂತೆ ಕ್ಷೀಣಿಸುತ್ತಿದ್ದ ಕಸಿಮಾಡಿದ ಮೂತ್ರಪಿಂಡದೊಂದಿಗೇ ಜೀವಿಸುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ, ಅವರಿಗೆ ತೀವ್ರವಾದ ಆಯೋರ್ಟಿಕ್ ಸ್ಟೆನೋಸಿಸ್ ಸಮಸ್ಯೆಗೆ ಒಳಗಾಗಿದ್ದರು, ಅದು ಹೃದಯದ ಆಯೋರ್ಟಿಕ್ ವಾಲ್ವ್ ಕಿರಿದಾಗಿ ರಕ್ತ ಪರಿಚಲನೆಯನ್ನು ತಡೆಯುವ ಮತ್ತು ಚಿಕಿತ್ಸೆ ನೀಡದಿದ್ದರೆ ಹೃದಯಾಘಾತಕ್ಕೆ ಕಾರಣವಾಗುವ ಸ್ಥಿತಿ. ತೀವ್ರ ನಿಶ್ಯಕ್ತಿ, ರಕ್ತನಾಳಗಳಲ್ಲಿ ಅತಿಯಾದ ಕ್ಯಾಲ್ಸಿಯಂ ಶೇಖರಣೆ ಮತ್ತು ತೊಡೆಯ ಅಪಧಮನಿಗಳ ಹಾನಿಯಿಂದಾಗಿ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿತ್ತು. ಇದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಹಾಗೂ ಸಾಂಪ್ರದಾಯಿಕ ಟಿ.ಎ.ವಿ.ಆರ್ ಚಿಕಿತ್ಸೆ ಎರಡನ್ನೂ ಅತ್ಯಂತ ಹೆಚ್ಚಿನ ಅಪಾಯಕಾರಿಯನ್ನಾಗಿ ಮಾಡಿತ್ತು. ಇತರೆಡೆ ಚಿಕಿತ್ಸೆ ನಿರಾಕರಿಸಲ್ಪಟ್ಟಿದ್ದರಿಂದ, ಅವರ ಮುಂದಿದ್ದ ಚಿಕಿತ್ಸಾ ಆಯ್ಕೆಗಳು ತೀರ ಸೀಮಿತವಾಗಿದ್ದವು.

ಸಾಂಪ್ರದಾಯಿಕ ಟಿ.ಎ.ವಿ.ಆರ್ ಚಿಕಿತ್ಸಾ ವಿಧಾನದಲ್ಲಿ, ರಕ್ತನಾಳಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಮತ್ತು ಬದಲಾಯಿಸುವ ವಾಲ್ವ್ ಅನ್ನು ನಿಖರವಾಗಿ ಅಳವಡಿಸಲು ಅಯೋಡಿನೇಟೆಡ್ ಕಾಂಟ್ರಾಸ್ಟ್ ಡೈ ಅನ್ನು ಬಳಸಲಾಗುತ್ತದೆ. ಆದಾಗ್ಯೂ, ತೀವ್ರ ಸ್ವರೂಪದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಅಥವಾ ಕಸಿ ಮಾಡಿದ ಮೂತ್ರಪಿಂಡ ಹೊಂದಿರುವ ರೋಗಿಗಳಲ್ಲಿ, ಈ ಡೈ ತಾನೇ ಮೂತ್ರಪಿಂಡಕ್ಕೆ ಮತ್ತಷ್ಟು ಹಾನಿಯನ್ನುಉಂಟು ಮಾಡಬಹುದು.

ಈ ಅಪಾಯವನ್ನು ಸಂಪೂರ್ಣವಾಗಿ ತಡೆಯಲು, ಅಪೋಲೊ ಆಸ್ಪತ್ರೆಯ ಸ್ಟ್ರಕ್ಚರಲ್ ಹಾರ್ಟ್ ತಂಡವು ಎಂ.ಆರ್.ಐ, ವ್ಯಾಸ್ಕ್ಯುಲರ್ ಅಲ್ಟ್ರಾಸೌಂಡ್ ಮತ್ತು ಫ್ಲೋರೊಸ್ಕೋಪಿಕ್ ಗೈಡೆನ್ಸ್ ಸೇರಿದಂತೆ ಸುಧಾರಿತ ಮಲ್ಟಿ-ಮೊಡಾಲಿಟಿ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಕಟ್ಟುನಿಟ್ಟಾಗಿ ಶಸ್ತ್ರಚಿಕಿತ್ಸೆಯನ್ನು ಸಂಯೋಜಿಸಿತು. ಇದರಿಂದಾಗಿ ಕೇವಲ 0 ಎಂಎಲ್ ಕಾಂಟ್ರಾಸ್ಟ್ ಡೈ ಬಳಸಿಕೊಂಡು ಇಡೀ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು.

“ನಾವು ನೆರವೇರಿಸಿದ ಅತ್ಯಂತ ತಾಂತ್ರಿಕ ಸವಾಲಿನ ಸ್ಟ್ರಕ್ಚರಲ್ ಹಾರ್ಟ್ ಶಸ್ತ್ರಚಿಕಿತ್ಸೆಗಳಲ್ಲಿ ಇದೂ ಒಂದಾಗಿತ್ತು,” ಎಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಹಾಗೂ ‘ಸ್ಟ್ರಕ್ಚರಲ್ ಹಾರ್ಟ್ ಪ್ರೋಗ್ರಾಂ’ ಮುಖ್ಯಸ್ಥ ಡಾ. ಶ್ರೀನಿವಾಸ ಪ್ರಸಾದ್ ಹೇಳಿದರು.

“ರೋಗಿಯ ತೀವ್ರವಾಗಿ ರೋಗಕ್ಕೆ ಒಳಗಾಗಿದ್ದ ಹೃದಯದ ವಾಲ್ವ್ ಅನ್ನು ಬದಲಾಯಿಸುವುದು ಮಾತ್ರವಲ್ಲದೆ, ಅವರ ಕಸಿ ಮಾಡಿದ ಮೂತ್ರಪಿಂಡಕ್ಕೆ ಯಾವುದೇ ಹಾನಿಯಾಗದಂತೆ ಅದನ್ನು ಪೂರ್ಣಗೊಳಿಸುವುದು ನಿಜವಾದ ಸವಾಲಾಗಿತ್ತು. ಝೀರೋ-ಕಾಂಟ್ರಾಸ್ಟ್ ಟಿ.ಎ.ವಿ.ಆರ್. ಚಿಕಿತ್ಸೆಗೆ ಅತ್ಯಂತ ಕಟ್ಟುನಿಟ್ಟಾದ ಯೋಜನೆ, ಸುಧಾರಿತ ಇಮೇಜಿಂಗ್ ತಂತ್ರಜ್ಞಾನ ಹಾಗೂ ಹೃದ್ರೋಗ ತಜ್ಞರು, ಇಮೇಜಿಂಗ್ ತಜ್ಞರು ಮತ್ತು ಮೂತ್ರಪಿಂಡ ರೋಗ ತಜ್ಞರ ನಡುವೆ ತಡೆರಹಿತ ಸಹಕಾರ ಅಗತ್ಯವಿರುತ್ತದೆ. ಮುಂಚೆ ಚಿಕಿತ್ಸೆಗೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದ್ದ, ಸೂಕ್ತವಾಗಿ ಆಯ್ಕೆಮಾಡಿದ ರೋಗಿಗಳಿಗೆ ಈ ವಿಧಾನವು ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ರಕ್ಷಿಸುವುದರ ಜೊತೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪರ್ಯಾಯ ಚಿಕಿತ್ಸೆಯನ್ನು ಒದಗಿಸುತ್ತದೆ” ಎಂದರು.

ಈ ಚಿಕಿತ್ಸಾ ವಿಧಾನವು ರೋಗಿಯ ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಸುರಕ್ಷಿತವಾಗಿರಿಸುವ ಜೊತೆಗೆ, ಹೊಸದಾಗಿ ಅಳವಡಿಸಲಾದ ವಾಲ್ವ್ ಮೂಲಕ ರಕ್ತ ಪರಿಚಲನೆಯನ್ನು ಯಶಸ್ವಿಯಾಗಿ ಸಹಜಸ್ಥಿತಿಗೆ ತಂದಿತು. ಶ್ವಾಸಕೋಶದಲ್ಲಿ ತುಂಬಿಕೊಂಡಿದ್ದ ದ್ರವದ ಪ್ರಮಾಣ ಕಡಿಮೆಯಾದ ಕಾರಣ, ಕೇವಲ 8 ರಿಂದ 12 ಗಂಟೆಗಳ ಒಳಗೆ ರೋಗಿಯ ಉಸಿರಾಟದಲ್ಲಿ ಗಣನೀಯ ಚೇತರಿಕೆ ಕಂಡುಬಂತು.ಅವರು ಮಾರನೆಯ ದಿನವೇ ನಡೆದಾಡಲು ಪ್ರಾರಂಭಿಸಿದರು ಮತ್ತು ಶಸ್ತ್ರಚಿಕಿತ್ಸೆಯಾದ ಕೇವಲ ಮೂರೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದರು.
ಶಸ್ತ್ರಚಿಕಿತ್ಸೆಯ ನಂತರದ ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಗಳು ಹೊಸ ವಾಲ್ವ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ದೃಢಪಡಿಸಿದವು.

ಹಾಗೆಯೇ ಕ್ರಿಯೇಟಿನಿನ್ ಮಟ್ಟದಲ್ಲಿ ಆರಂಭಿಕ ಸುಧಾರಣೆ ಕಂಡುಬಂದು, ಮೂತ್ರಪಿಂಡದ ಕಾರ್ಯನಿರ್ವಹಣೆಯೂ ಸ್ಥಿರವಾಗಿತ್ತು. ಒಂದು ತಿಂಗಳ ನಂತರದ ತಪಾಸಣೆಯ ವೇಳೆಗೆ, ರೋಗಿಯು ತಮ್ಮ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ತಿಳಿಸಿದ್ದು, ಅವರ ಮೂತ್ರ ವಿಸರ್ಜನೆ ಉತ್ತಮವಾಗಿದೆ ಹಾಗೂ ಡಯಾಲಿಸಿಸ್‌ನ ಅಗತ್ಯವಿಲ್ಲದಂತೆ ಗುಣವಾಗಿದೆ.

ಬಹು-ಮಾದರಿಯ ಕಾರ್ಡಿಯಾಕ್ ಇಮೇಜಿಂಗ್ ತಂತ್ರಜ್ಞಾನದಲ್ಲಿನ ಪ್ರಗತಿ, ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸಾ ಯೋಜನೆ ಹಾಗೂ ಹೃದ್ರೋಗ ಶಾಸ್ತ್ರ, ಮೂತ್ರಪಿಂಡ ಶಾಸ್ತ್ರ, ಇಮೇಜಿಂಗ್ ಮತ್ತು ಅರಿವಳಿಕೆ ತಂಡಗಳ ನಡುವಿನ ನಿಕಟ ಸಹಕಾರವು, ವೈದ್ಯರು ಅತ್ಯಂತ ಸಂಕೀರ್ಣವಾದ ಸ್ಟ್ರಕ್ಚರಲ್ ಹಾರ್ಟ್ ಶಸ್ತ್ರಚಿಕಿತ್ಸೆಗಳನ್ನು ಸಹ ಸುರಕ್ಷಿತವಾಗಿ ನೆರವೇರಿಸಲು ಹೇಗೆ ನೆರವಾಗುತ್ತಿವೆ ಎಂಬುದಕ್ಕೆ ಈ ಪ್ರಕರಣವು ಅತ್ಯುತ್ತಮ ಉದಾಹರಣೆಯಾಗಿದೆ.

ಹೆಚ್ಚಿನ ಸಂಖ್ಯೆಯ ರೋಗಿಗಳು ಒಂದಕ್ಕಿಂತ ಹೆಚ್ಚು ಸಂಕೀರ್ಣ ಆರೋಗ್ಯ ಸಮಸ್ಯೆಗಳೊಂದಿಗೆ ಬರುತ್ತಿರುವ ಈ ದಿನಗಳಲ್ಲಿ, ಝೀರೋ-ಕಾಂಟ್ರಾಸ್ಟ್ ಟಿ.ಎ.ವಿ.ಆರ್. ನಂತಹ ಆವಿಷ್ಕಾರಗಳು ನಿಖರ ವೈದ್ಯಕೀಯ ಚಿಕಿತ್ಸೆ ಹಾಗೂ ಬಹು ಶಿಸ್ತೀಯ ವೈದ್ಯಕೀಯ ಆರೈಕೆಗಳು ಶಸ್ತ್ರಚಿಕಿತ್ಸೆಯ ಸಾಧ್ಯತೆಗಳನ್ನು ಹೇಗೆ ಮರುನಿರೂಪಿಸುತ್ತಿವೆ ಎಂಬುದನ್ನು ತೋರಿಸಿಕೊಡುತ್ತವೆ. ಅಲ್ಲದೆ, ಒಮ್ಮೆ ಚಿಕಿತ್ಸೆಯೇ ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದ್ದ ರೋಗಿಗಳಿಗೆ ಇವು ಹೊಸ ಭರವಸೆಯನ್ನು ಮೂಡಿಸುತ್ತಿವೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮಿರೇ ಅಸೆಟ್ ಶೇರ್ ಖಾನ್ ನಿಂದ ತನ್ನ ಹೊಸದಾಗಿ ಪ್ರಾರಂಭಿಸಿದ ಪ್ರೀಮಿಯರ್ ವೆಲ್ತ್ ಪಾರ್ಟ್ನರ್ ವಿಭಾಗಕ್ಕೆ ಅಧಿಕೃತ ಪಾಲುದಾರರಾಗಿ ಎ.ಎಸ್.ಕೆ. ಪ್ರೈವೇಟ್ ವೆಲ್ತ್ ಸೇರ್ಪಡೆ

ಅನ್ಯ ಭಾಷಿಕರು ಕನ್ನಡ ನಾಡು ನುಡಿ ಸಂಸ್ಕೃತಿಯ ಅರಿತು ಬಾಳುವಂತೆ ಸಾಹಿತಿ ಕೆ.ಎಂ.ರೇವಣ್ಣ ಆಗ್ರಹ

ಯುಕೆಪಿ-3 ಭೂಸ್ವಾಧೀನಕ್ಕೆ ಚುರುಕು: ಮುಳುಗಡೆ ಸಂತ್ರಸ್ತರಿಗೆ ಮೊದಲ ಆದ್ಯತೆ : ಸಚಿವ ಚಲುವರಾಯಸ್ವಾಮಿ

ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ,: ಭಾರತವನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಶ್ರೀ ಲಲಿತಾ ಕಲಾ ನಿಕೇತನ.

ವಿಜಯಿ ಭಾರತ್ ಫೌಂಡೇಶನ್ನ Khele Sanand Sports Utsav 2026 ಸೈನಾ ನೆಹ್ವಾಲ್ ಅವರ ಉಪಸ್ಥಿತಿಯಲ್ಲಿ ಆರಂಭ; 25,000+ ವಿದ್ಯಾರ್ಥಿಗಳ ಭಾಗವಹಿಸುವಿಕೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ