ವಿಜಯ ದರ್ಪಣ ನ್ಯೂಸ್….
ಮೈಸೂರು ಅರಮನೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಚಿವರಿಂದ ಉದ್ಘಾಟನೆ
ತಾಂಡವಪುರ ಸೆಪ್ಟಂಬರ್ 29 ಮೈಸೂರಿನ ಅರಮನೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯನವರು ಉದ್ಘಾಟಿಸಿದರು
ಬಳಿಕ ಮಾತನಾಡಿದ ಸಚಿವರು ಸಾರ್ವಜನಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ‘ಮೈಸೂರು ಅರಮನೆ ಮಂಡಳಿ’ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ‘ಸಿಡಿಐ (Capacitive Deionization – CDI) ತಂತ್ರಜ್ಞಾನ ಆಧಾರಿತ ನೀರು ಶುದ್ಧೀಕರಣ ಘಟಕ’ವನ್ನು ಅಧಿಕೃತವಾಗಿ ಉದ್ಘಾಟಿಸಿ, ಚಾಲನೆ ನೀಡಿದ ಸಚಿವರು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿರುವ ಅರಮನೆ ಮಂಡಳಿ ರವರಿಗೆ ಅಭಿನಯಿಸುತ್ತೇನೆ ಎಂದು ಹೇಳಿದರು
ಅರಮನೆಗೆ ಪ್ರತಿದಿನ ಆಗಮಿಸುವ ಸಾವಿರಾರು ದೇಶ,ವಿದೇಶಿ ಪ್ರವಾಸಿಗರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಸುಸಜ್ಜಿತ, ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಎಂದು ಹೇಳಿದರು.
ಈ ನೂತನ ನೀರು ಶುದ್ಧೀಕರಣ ಘಟಕವು 2000 ppm (Parts Per Million) ವರೆಗಿನ ಉಪ್ಪು/ಖನಿಜಾಂಶ (TDS) ಹೊಂದಿರುವ ನೀರನ್ನು ಅತ್ಯಂತ ಪರಿಣಾಮಕಾರಿಯಾಗಿ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಜಲತ್ಯಾಜ್ಯವನ್ನು ಕಡಿಮೆ ಮಾಡಿ, ನೀರಿನಲ್ಲಿರುವ ಅಗತ್ಯ ಖನಿಜಾಂಶಗಳನ್ನು ಉಳಿಸಿಕೊಂಡು, ಅತ್ಯಂತ ಕಡಿಮೆ ವಿದ್ಯುತ್ ಬಳಕೆ ಹಾಗೂ ಪರಿಸರಸ್ನೇಹಿ ವ್ಯವಸ್ಥೆಯೊಂದಿಗೆ ನೀರನ್ನು ಶುದ್ಧೀಕರಿಸುವುದು ಈ ತಂತ್ರಜ್ಞಾನದ ಹೆಗ್ಗಳಿಕೆಯಾಗಿದೆ. ಎಂದು ಸಚಿವರು ಹೇಳಿದರು
ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ , ನಿಕಟಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ. ಜೆ. ವಿಜಯ್ ಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಯುಕೇಶ್ ಕುಮಾರ್, ಅರಮನೆ ಮಂಡಳಿ ಉಪ ನಿರ್ದೇಶಕ ಶ್ರೀ ಸುಬ್ರಮಣ್ಯ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.












