--Ads--

ಕಾಸ್ಮೋಸ್–ಮೈಸೂರು ತಾರಾಲಯ’ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಬಟನ್ ಒತ್ತುವುದರ ಮೂಲಕ ಉದ್ಘಾಟನೆ

On: November 13, 2026 5:23 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

‘ಕಾಸ್ಮೋಸ್–ಮೈಸೂರು ತಾರಾಲಯ’ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಬಟನ್ ಒತ್ತುವುದರ ಮೂಲಕ ಉದ್ಘಾಟನೆ 

ತಾಂಡವಪುರ ನವಂಬರ್ 13 ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ‘ಕಾಸ್ಮೋಸ್–ಮೈಸೂರು ತಾರಾಲಯ’ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಬಟನ್ ಒತ್ತುವುದರ ಮೂಲಕ ಉದ್ಘಾಟನೆ ನಡೆಸಿದರು

ಬಾಹ್ಯಾಕಾಶದ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ₹116 ಕೋಟಿ ವೆಚ್ಚದಲ್ಲಿ ಈ ಅತ್ಯಾಧುನಿಕ ʻಕಾಸ್ಮೋಸ್-ಮೈಸೂರು ತಾರಾಲಯʼವನ್ನು ನಿರ್ಮಿಸಲಾಗಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಿಂದ (IIA) ನಿರ್ಮಿಸಲಾದ ಕಾಸ್ಮೋಸ್-ಮೈಸೂರು, ಭಾರತದ ಮೊದಲ ಎಲ್‌ಇಡಿ ಡೋಮ್ ತಾರಾಲಯವಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ʻಸ್ಕೈ ಥಿಯೇಟರ್‌ʼ ಜೊತೆಗೆ ಖಗೋಳ ವಿಜ್ಞಾನದ ವಸ್ತುಸಂಗ್ರಹಾಲಯ, ಪ್ರದರ್ಶನ ಸಭಾಂಗಣಗಳು, ಉಪನ್ಯಾಸ ಕೊಠಡಿಗಳು ಹಾಗೂ ತರಬೇತಿ ಪ್ರಯೋಗಾಲಯಗಳಿವೆ. ಎಂದು ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳು ಹೇಳಿದರು

ಈ ಸಂದರ್ಭದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್‌ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ  ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

&&&&&&&&&&&&&&&&&&&&&&&&

ಮನಸ್ಸು

ಮನಸ್ಸೊಂದು ಪುಷ್ಪದಳ
ನಾಲ್ಕೈದು ಎಸಳು
ಪಂಚಭೂತಗಳ ಅಂಶ
ನೆತ್ತಿಯ ಪೋಷಿತ ಸರ್ಗ…
ನೊಂದರೂ ಉಸುರಿದರೂ
ಮನಸ್ಸು ಮುದುಡಬಾರದು
ಕೊಸರಿದರೂ ಚಿಗುರಿದರೂ
ತದೇಕತೆಯ ಶಾಂತತೆ….
ಹೀಯಾಳಿಸಿ ಘಾಸಿಗೊಳಿಸಿದರೂ
ಅವಮಾನಕೆ ಜಗ್ಗದೆ ನಿಲ್ಲಬೇಕು
ಮನಸ್ಸು ಹೆಣ್ಣೋ ಗಂಡೋ
ಅದಕ್ಕೆ ಯಾವ ಲಿಂಗದ ಆಲಿಂಗನ?
ಉಸುರುವ ಪ್ರೀತಿಗೆ ಹಾತೊರೆಯುವ ಮನ
ತನ್ನೆಲ್ಲ ತುಮುಲಗಳ ಅಕ್ಷಯಪಾತ್ರೆ
ಭತ್ತಳಿಕೆಯಲ್ಲಿನ ಅಂಬಿನ ತಿವಿ
ಭಾವಗಳ ಸಾಣೆಯ ಪಿಡಿದಿದೆ
ತುಕ್ಕದು ಹಿಡಿದ ಗತನೆನಹು
ಸುಳಿಯಬಾರದೆಂದು ಉರುಹುವಿಕೆ
ತೀಡಿತೀಡಿ ಹರಿತವಾಗಲಾರದ ಭಾವ
ಮನವೇಕೆ ನಿಷ್ಕ್ರೀಯ ಎಂದೆನಿಸಿದೆ
ಆಳಗಲದ ಚಿಂತನೆ
ಬೇಡವಾದ ನಂಟಿನ ಮುಕ್ತತೆ
ನಿರ್ಲಿಪ್ತ ಭಾವಗಳ ಮಜ್ಜನ
ಮಾರ್ಜಾಲ ನಡೆಯ ಅನುಸರಣೆ…
ಮನವೀಗ ಶಾಂತ…                        ಮೌನತೆಯ ಸಾಕಾರ…

ಸೋಮೆಯಂಡ ಕೌಸಲ್ಯ ಸತೀಶ್

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ