--Ads--

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟ: ರಾಜ್ಯಮಟ್ಟದ ಕಾರ್ಯಾಗಾರ

On: October 4, 2026 12:04 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟ :ರಾಜ್ಯಮಟ್ಟದ ಕಾರ್ಯಾಗಾರ

ಬೆಂಗಳೂರು: ರಾಜಾಜಿನಗರ, ನ್ಯೂ ಸಾಗರ್ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಮಟ್ಟದ ಕಾರ್ಯಗಾರ ಸಭೆ ಮತ್ತು ನ್ಯಾಷನಲ್ ಟ್ರೇಡ್ ಯೂನಿಯನ್ ಸಹಕಾರ  ರಾಜ್ಯಾಧ್ಯಕ್ಷ ಬಿ.ದೇವರಾಜ್, ಕಾನೂನು ಸಲಹೆಗಾರರಾದ ಆರ್.ಎಲ್.ಮೂರ್ತಿ, ಎನ್.ಎಫ್ ಐ.ಟಿ.ಯು ರಾಜ್ಯಾಧ್ಯಕ್ಷ ವಿ.ವೆಂಕಟೇಶ್ ಮತ್ತು ರಾಷ್ಟ್ರೀಯ ಸಂಘದ ಕಾರ್ಯಾಧ್ಯಕ್ಷರಾದ ಶಾಮಣ್ಣರೆಡ್ಡಿ, ವಿಶ್ವಕರ್ಮ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರಾದ ವಿಜಯಕುಮಾರ್ ಪತ್ತಾರ್, ರಾಘವ್ ರವರು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಆರ್.ಎಲ್.ಮೂರ್ತಿರವರು ಮಾತನಾಡಿ ಶ್ರಮ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿಜೀ ಮತ್ತು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರು ಕಾರ್ಮಿಕರ ಕುರಿತು ಅಪಾರ ಒಲುವು ಹೊಂದಿದ್ದರು. ಕಾರ್ಮಿಕರು ದೇಶದ ಸಂಪತ್ತು .

ಬೆಂಗಳೂರು ನಗರದಲ್ಲಿ ಅಂದಾಜು 50ಲಕ್ಷ ಮನೆಗಳು ಇದೆ ಇದನ್ನ ಇಂಜನಿಯರ್ ಪ್ಲಾನ್ ಮಾಡಿರಬಹುದು ಕಟ್ಟಲು ಕಾರ್ಮಿಕರು ಬೇಕು. ಕಾರ್ಮಿಕರು ಸಂಘಟಿತ ಹೋರಾಟ ಮೂಲಕ ಪಡೆಯುತ್ತಾರೆ ಅದರೆ ಅಸಂಘಟಿತ ಕಾರ್ಮಿಕ ಸ್ಥಿತಿ ಶೋಚನಿಯ ಇಂದು ಇವರ ಹೋರಾಟದಿಂದ ಲೇಬರ್ ಕಾರ್ಡ್  ದೊರೆಯುವಂತಾಯಿತು ಇದರಿಂದ ವಿದ್ಯಾರ್ಥಿ ವೇತನ, ಸಾಲ ಸೌಲಭ್ಯ ವಿಮೆ ಇನ್ನಿತರೆ ಸೌಲಭ್ಯ ಲಭಿಸುವಂತಾಯಿತು.

ಕಾರ್ಮಿಕರಿಗೆ ದೇವರಾಜ್ ಅರಸು ವಸತಿ ನಿಗಮ, ಗೃಹ ಮಂಡಳಿ, ಕೊಳಗೇರಿ ನಿರ್ಮೂಲನ ಮಂಡಳಿಯಿಂದ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಬೇಕು. ಕಾರ್ಮಿಕರರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ಸಕಾಲಕ್ಕೆ ಸಿಗಬೇಕು ಎಂದು ಹೇಳಿದರು.

ಅಧ್ಯಕ್ಷ ಬಿ.ದೇವರಾಜ್  ರವರು ಮಾತನಾಡಿ ರಾಜ್ಯ ಸರ್ಕಾರದ ಕಾರ್ಮಿಕರ ಕಲ್ಯಾಣ ಇಲಾಖೆ ಯೋಜನೆಗಳು ಮತ್ತು ಕಾರ್ಮಿಕರ ಕಾನೂನು ಎಲ್ಲ ಕಾರ್ಮಿಕರಿಗೆ ಅರಿವು ಇರಬೇಕು ಎಂದು ಕಳೆದ 15ವರ್ಷಗಳಿಂದ ನಮ್ಮ ಸಂಘಟನೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ಪ್ರತಿಯೊಬ್ಬ ಕಾರ್ಮಿಕ ದೇಶದ ಸಂಪತ್ತು ಅವನ ಜೀವನ ಹಸನಾಗಬೇಕು ಎಂಬ ನಿರಂತರ ಕಾಳಜಿ. ಬಳ್ಳಾರಿಯಲ್ಲಿ ಇ.ಎಸ್.ಐ. ಆಸ್ಪತ್ರೆ ನಿರ್ಮಾಣದಲ್ಲಿ ನಮ್ಮ ಸಂಘಟನೆ ಪ್ರಮುಖ ಪಾತ್ರವಾಗಿದೆ. ತುಮಕೂರುನಲ್ಲಿ 1ಲಕ್ಷ 30ಸಾವಿರ ಕಾರ್ಮಿಕರು ಇದ್ದಾರೆ ಅವರ ಅನುಕೂಲಕ್ಕೆ 5ಎಕರೆ ಪ್ರದೇಶದಲ್ಲಿ ಕಾರ್ಮಿಕರ ಭವನ ಮತ್ತುಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೂರಕಿದೆ.

ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಮತ್ತು ಕಾರ್ಮಿಕರ ಕಾನೂನು ಮತ್ತು ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶಾಮಣ್ಣ ರೆಡ್ಡಿ ರವರು ಮನುಷ್ಯ ಪರಿವರ್ತನೆಯಾಗಬೇಕು ಆಗ ಸಮಾಜ ಬದಲಾವಣೆಯಾಗುತ್ತದೆ. ಕಟ್ಟಡ ಮತ್ತು ಬೃಹತ್ ಅಪಾರ್ಟ್ ಮೆಂಟ್ ಮನೆಗಳನ್ನು ಕಾರ್ಮಿಕರು ಕಟ್ಟುತ್ತಾರೆ ಅದರೆ ಉದ್ಘಾಟನೆ ಸಂದರ್ಭದಲ್ಲಿ ಅವರನ್ನ ನೆನಪು ಮಾಡಿಕೊಳ್ಳುವುದಿಲ್ಲ. ಮೊದಲು ಕಟ್ಟಡ ಕಾರ್ಮಿಕರಿಗೆ ಗೌರವ ಸಲ್ಲಬೇಕು ಕಾರ್ಮಿಕರನ್ನ ಗುರುತಿಸುವ ಕಾರ್ಯವಾಗಬೇಕು. ಪ್ರತಿ ಕಾರ್ಮಿಕರಿಗೆ ಕನಿಷ್ಟ ಕೂಲಿ ಸಿಗಬೇಕು ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now