ವಿಜಯ ದರ್ಪಣ ನ್ಯೂಸ್…..
ಕಿರಿಯರ ನೃತ್ಯೋತ್ಸವ ‘ನೃತ್ಯ ನೀರಾಜನ–15’
ಪಂಚದಶಂ’
ನವೆಂಬರ್ 20ರಂದು

ಬೆಂಗಳೂರು : ನೃತ್ಯ ದಿಶಾ ಟ್ರಸ್ಟ್, ಬೆಂಗಳೂರು ಈ ಖ್ಯಾತ ಸಂಸ್ಥೆ ವತಿಯಿಂದ ಕಿರಿಯ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರ ನೃತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ನೃತ್ಯನೀರಾಜನಂ 15 – ಪಂಚದಶಂ’ (ಹದಿನೈದನೇ ಸಂಚಿಕೆ) ನೃತ್ಯೋತ್ಸವವನ್ನು ನವೆಂಬರ್ 20ರಂದು ಸಂಜೆ 4 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಗುರು ‘ಕಲಾಭೂಷಿಣಿ’ ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಬಿ. ಭಾಮಿನಿ, ಕು|| ಎನ್. ಭವ್ಯಶ್ರೀ, ಕು|| ಎಸ್.ವೈ. ದೀಪಾಂಜಲಿ ಹಾಗೂ ಕು|| ಪಿ. ಸಾನ್ವಿ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಭರತನಾಟ್ಯ ವಿದುಷಿ ಡಾ|| ವಿದ್ಯಾ ಜಿಮ್ಲಡ್ಕ ಹಾಗೂ ಖ್ಯಾತ ಜಾನಪದ ಗಾಯಕರಾದ ಡಾ|| ಜೋಗಿಲ ಸಿದ್ಧರಾಜು ಅವರು ಆಗಮಿಸಿ ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಲಿದ್ದಾರೆ.

ಕಿರಿಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ , ಅವರಲ್ಲಿ ಆತ್ಮವಿಶ್ವಾಸ, ಕಲಾಸಕ್ತಿ ಮತ್ತು ಪ್ರದರ್ಶನ ಕೌಶಲವನ್ನು ಬೆಳೆಸುವ ಆಶಯದೊಂದಿಗೆ ಈ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.







